ETV Bharat / state

ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ.. ಇಬ್ಬರು ಪೊಲೀಸ್​ ವಶಕ್ಕೆ

author img

By

Published : Nov 9, 2022, 1:35 PM IST

ಸಿಇಎನ್ ಕ್ರೈಂ ಠಾಣೆ ಪಿಎಸ್ಐಗಳಾದ ರಮೇಶ್​ ಪಾಟೀಲ್​, ಮತ್ತು ಅನ್ನಪೂರ್ಣ ಆರ್.ಎಂ. ನೇತೃತ್ವದಲ್ಲಿ ದಾಳಿ ಮಾಡಿ ಇಬ್ಬರನ್ನು ಗಾಂಜಾ ಸಮೇತ ವಶಕ್ಕೆ ಪಡೆದಿದ್ದಾರೆ.

Ganja sale on Gadag road 4 lakh worth of ganja seized: Two arrested
ಗದಗ ರಸ್ತೆಯಲ್ಲಿ ಗಾಂಜಾ ಮಾರಾಟ 4 ಲಕ್ಷ ಮೌಲ್ಯದ ಗಾಂಜಾ ವಶ: ಇಬ್ಬರ ಬಂಧನ

ಹುಬ್ಬಳ್ಳಿ: ನಗರದ ಗದಗ ರಸ್ತೆ ರೈಲ್ವೆ ಆಸ್ಪತ್ರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಇಬ್ಬರನ್ನು ಬಂಧಿಸುವಲ್ಲಿ ಸಿಇಎನ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಅಂದಾಜು 4ಲಕ್ಷ ರೂ. ಮೌಲ್ಯದ 20 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಂಧಿತರು ಕಾಲೇಜ್ ಬ್ಯಾಗ್​ನಲ್ಲಿ ಆಂಧ್ರಪ್ರದೇಶದಿಂದ ನಗರಕ್ಕೆ ಗಾಂಜಾ ತೆಗೆದುಕೊಂಡು ಬಂದು ಇಲ್ಲಿನ ಗದಗ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಸಿಇಎನ್ ಕ್ರೈಂ ಠಾಣೆ ಪಿಎಸ್ಐಗಳಾದ ರಮೇಶ್​ ಪಾಟೀಲ್​, ಮತ್ತು ಅನ್ನಪೂರ್ಣ ಆರ್.ಎಂ. ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಇಬ್ಬರು ಆರೋಪಿಗಳನ್ನು ಗಾಂಜಾ ಸಮೇತ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಆರೋಪಿ ಹಿಡಿಯಲು ಹೋಗಿದ್ದಾಗ ಘರ್ಷಣೆ: ಎಎಸ್‌ಐಗೆ ಥಳಿಸಿ ಬಟ್ಟೆ ಹರಿದ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.