ETV Bharat / state

ಲಕ್ಷ್ಮೇಶ್ವರದಲ್ಲಿ ಸಾರಿಗೆ ಬಸ್​ ವ್ಹೀಲ್ ಜೇಂಟ್ ಕಟ್​.. ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

author img

By

Published : Mar 14, 2022, 10:27 PM IST

ಗದಗನಿಂದ ಹಾವೇರಿಗೆ ಹೊರಟಿದ್ದ ಬಸ್ ಗೋನಾಳ ಸಮೀಪ ವ್ಹೀಲ್ ಜೇಂಟ್ ಕಟ್ ಆಗಿ ಪಲ್ಟಿಯಾಗಿದೆ. ಹತ್ತಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

gadaga bus accident More than ten passengers seriously injured
ಬಸ್ ಪಲ್ಟಿಯಾಗಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ

ಗದಗ: ಸಾರಿಗೆ ಸಂಸ್ಥೆಯ ಬಸವೊಂದರ ವ್ಹೀಲ್ ಜೇಂಟ್ ಕಟ್ ಆಗಿರುವ ಪರಿಣಾಮ, ಪಲ್ಟಿಯಾಗಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಹಾಗೂ ಯಲವಿಗಿ ಮಧ್ಯದಲ್ಲಿ ನಡೆದಿದೆ.

ಗದಗನಿಂದ ಹಾವೇರಿಗೆ ಹೊರಟಿದ್ದ ಬಸ್ ಗೋನಾಳ ಸಮೀಪದ ರಸ್ತೆ ತಿರುವಿನಲ್ಲಿ ವ್ಹೀಲ್ ಜೇಂಟ್ ಕಟ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಜಾರಿದೆ. ಅಲ್ಲದೇ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ತೀವ್ರ ಗಾಯಗೊಂಡಿದ್ದು, ಆ್ಯಂಬುಲೆನ್ಸ್​ ಮೂಲಕ ಸ್ಥಳೀಯ ಆಸ್ಪತ್ರೆ ದಾಖಲಾಗಿದೆ.

ಘಟನೆ ಸಂಭವಿಸಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮತ್ತು ಆ್ಯಂಬುಲೆನ್ಸ ಸಿಬ್ಬಂದಿಗೆ ಮಾಹಿತಿ ನೀಡಿ ಪ್ರಯಾಣಿಕರನ್ನು ಆಸ್ಪತ್ರೆಗೆ ತಲುಪಿಸುವ ಕಾರ್ಯವನ್ನು ಮಾಡಿದರು. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬಲೆಗೆ ಬಿತ್ತು 'ವ್ಯಕ್ತಿಯ ಮುಖ' ಹೋಲುವ ಮೀನು.. ಇದು ಮನುಷ್ಯನನ್ನೇ ಕೊಲ್ಲುವಷ್ಟು ವಿಷಕಾರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.