ETV Bharat / state

ಶಿವಕುಮಾರ್​ ಉದಾಸಿ ಮೂರನೇ ಬಾರಿಗೆ ಸಂಸತ್​ಗೆ ಆಯ್ಕೆ: ಕುಣಿದು ಕುಪ್ಪಳಿಸಿದ ಕಾರ್ಯಕರ್ತರು

author img

By

Published : May 24, 2019, 3:30 PM IST

ಗದಗ ಲೋಕಸಭಾ ಕ್ಷೇತ್ರದಿಂದ ಶಿವಕುಮಾರ್​ ಉದಾಸಿ ಮೂರನೇ ಬಾರಿಗೆ ಸಂಸತ್​ಗೆ ಆಯ್ಕೆಯಾಗಿದ್ದು, ಬಿಜೆಪಿ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಕುಣಿದು ಕುಪ್ಪಳಿಸಿದ ಕಾರ್ಯಕರ್ತರು

ಗದಗ: ಲೋಕಸಭಾ ಚುನಾವಣೆ ಅಖಾಡದಲ್ಲಿ ಕಮಲ ಜಯಭೇರಿ ಬಾರಿಸಿದೆ. ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿಯೂ ಕಮಲ ಅರಳಿದ್ದು ಗದಗದಲ್ಲಿ ಕೇಸರಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ನಗರದ ಟಾಂಗಾ ಕೂಟ ವೃತ್ತದಲ್ಲಿ ಗದಗ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿಕೊಂಂಡು ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದ್ರು. ನರೇಂದ್ರ ಮೋದಿ ಅವರ ಅಲೆಯಿಂದಲೇ ಮತ್ತೊಮ್ಮೆ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಮತ್ತೆ ಕೇಂದ್ರದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಪ್ರಧಾನಿ ಮೋದಿ ಪರ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪಕ್ಷ ರೈತಪರ, ಜನಪರ, ಕಾರ್ಮಿಕರ ಪರವಾಗಿದೆ. ಹೀಗಾಗಿ ಜನ ಮತ್ತೊಮ್ಮೆ ನಮ್ಮ ಪಕ್ಷಕ್ಕೆ ಆಶೀರ್ವದ ಮಾಡಿದ್ದಾರೆ ಎಂದುಹರ್ಷ ವ್ಯಕ್ತಪಡಿಸಿದ್ದಾರೆ. ಮೂರನೇ ಬಾರಿಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಗೆಲುವು ಸಾಧಿಸಿದ್ದು, ಕಾರ್ಯಕರ್ತರು ಶುಭಕೋರಿದ್ದಾರೆ.

sample description

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.