ETV Bharat / state

ಮಗಳ ಒಳಿತಿಗೆ ಶ್ರೀಮಂತನೊಂದಿಗೆ ಮದುವೆ.. ಗರ್ಭಿಣಿಯಾಗಿದ್ದ ಪುತ್ರಿ ಇನ್ನಿಲ್ಲವೆಂದಾಗ ಪೋಷಕರಿಗೆ ಬರಸಿಡಿಲು!

author img

By

Published : Oct 9, 2021, 8:33 AM IST

Updated : Oct 9, 2021, 12:03 PM IST

ನೇಣುಹಾಕಿಕೊಂಡ ಸ್ಥಿತಿಯಲ್ಲಿ ನಾಲ್ಕು ತಿಂಗಳ ಗರ್ಭಿಣಿ ಶವ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಮಗಳು ಚೆನ್ನಾಗಿರಲಿ ಅಂತ ಶ್ರೀಮಂತನೊಂದಿಗೆ ಯೊಂದಿಗೆ ಮದುವೆ ಮಾಡಿ ನೂರಾರು ಕನಸುಗಳನ್ನು ಕಂಡಿದ್ದ ಪೋಷಕರಿಗೆ ಈಗ ಬರಸಿಡಿಲು ಬಡಿದಂತಾಗಿದೆ.

Four months pregnant woman dead body found in gadag
ನಿರ್ಮಲಾ

ಗದಗ : ಅವರದ್ದು ಕಿತ್ತು ತಿನ್ನುವ ಬಡತನ, ಮಗಳು ಚೆನ್ನಾಗಿ ಇರಲಿ ಎಂದು ಸ್ಥಿತಿವಂತ ಕುಟುಂಬಕ್ಕೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದ್ರೆ ವಿಧಿಯಾಟವೇ ಬೇರೆಯಾಗಿದ್ದು, ಮುದ್ದಾದ ಮಗಳು ಶುಕ್ರವಾರ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಐದು ತಿಂಗಳ ಹಿಂದೆ ಅದ್ಧೂರಿ ಮದುವೆ:

ಹೌದು, ಕಳೆದ ಐದು ತಿಂಗಳ ಹಿಂದೆ ಗಜೇಂದ್ರಗಡ ಪಟ್ಟಣದ ಕಡ್ಡಿ ಪ್ಲಾಟ್ ನಿವಾಸಿಯಾದ ಲೋಕೇಶ್ ರಾಠೋಡ್ ಜೊತೆಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಿಕ್ಕಕೊಡಲಗಿ ತಾಂಡಾ ನಿವಾಸಿಯಾದ ನಿರ್ಮಲಾಳನ್ನು ಮದುವೆ ಮಾಡಿ ಕೊಡಲಾಗಿತ್ತು. ಅಳಿಯ ಲೋಕೇಶ್ ರಾಠೋಡ್​ ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದು, ನಿರ್ಮಲಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಇನ್ನೇನು ಸೀಮಂತ ಕಾರ್ಯ ಮಾಡಬೇಕು ಅಂತ ಸಂತಸದಲ್ಲಿ ನಿರ್ಮಲಾ ಕುಟುಂಬಸ್ಥರು ತಯಾರಿಯಲ್ಲಿದ್ರು. ಆದರೆ ಇದೀಗ ನಿರ್ಮಲಾ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಬರ ಸಿಡಲು ಬಡದಂತಾಗಿದೆ.

ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಗಂಡ-ಹೆಂಡತಿ ನಡುವೆ ಬಿರುಕು :

ಲೋಕೇಶ್ ಹಾಗೂ ನಿರ್ಮಲಾ ಸಂಬಂಧ ಮೊದಲು ಚೆನ್ನಾಗಿಯೇ ಇತ್ತು. ಆದರೆ ಕೆಲವು ದಿನಗಳಿಂದ ಗಂಡ-ಹೆಂಡತಿ ನಡುವೆ ಬಿರುಕು ಉಂಟಾಗಿತ್ತಂತೆ. ಆಗಾಗ ಗಂಡ ಜಗಳ ಮಾಡುತ್ತಿರುವ ವಿಷಯವನ್ನು ಸ್ವತಃ ನಿರ್ಮಲಾ ಅವಳ ಸಹೋದರನ ಮುಂದೆ ಹೇಳಿಕೊಂಡಿದ್ದಳಂತೆ. ಅಷ್ಟೇ ಅಲ್ಲದೆ ಮಹಿಳೆ ಆತ್ಮಹತ್ಯೆ ಕುರಿತು ಹಲವಾರು ಅನುಮಾನ ವ್ಯಕ್ತವಾಗಿದ್ದು, ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಗಜೇಂದ್ರಗಡ ಪೊಲೀಸರು ಹಾಗೂ ತಹಶೀಲ್ದಾರ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆ ಮುಂದುವರೆದಿದೆ.

Last Updated : Oct 9, 2021, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.