ETV Bharat / state

ಈ ಸಂಸದನ ಹ್ಯಾಟ್ರಿಕ್​ ಗೆಲುವಿಗಾಗಿ ಅಭಿಮಾನಿಗಳ ದೀಡ ನಮಸ್ಕಾರ

author img

By

Published : Apr 20, 2019, 9:27 AM IST

Updated : Apr 20, 2019, 10:23 AM IST

ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಗೆಲುವಿಗಾಗಿ ಅಭಿಮಾನಿಗಳಿಂದ ಗದಗದಲ್ಲಿ ದೀಡ ನಮಸ್ಕಾರ ಹಾಕಿ ಹರಕೆ ತೀರಿಸಲಾಯಿತು. ಬಿಜೆಪಿ ನಾಯಕರು ಈ ದೀಡ ನಮಸ್ಕಾರದ ನೇತೃತ್ವ ವಹಿಸಿದ್ದರು.

ಶಿವಕುಮಾರ್ ಉದಾಸಿ ಅಭಿಮಾನಿಗಳ ದೀಡ ನಮಸ್ಕಾರ

ಗದಗ: ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿಗೆ ವಿಜಯಮಾಲೆ ಒಲಿದು ಬರಲಿ ಎಂದು ಹಾರೈಸಿ ಗದಗದಲ್ಲಿ ಅವರ ಅಭಿಮಾನಿಗಳು ದೀಡ ನಮಸ್ಕಾರ ಹಾಕಿದರು.

ನಗರದ ರಾಚೋಟೇಶ್ವರ ದೇವಸ್ಥಾನದ ಎದುರು ತಣ್ಣೀರು ಸ್ನಾನ ಮಾಡಿ ದೀಡ ನಮಸ್ಕಾರ ಆರಂಭಸಿದ ಅಭಿಮಾನಿಗಳು, ಶಿವಕುಮಾರ್ ಉದಾಸಿಗೆ ಜಯವಾಗಲಿ, ಮೋದಿಗೆ ಜಯವಾಗಲಿ ಎನ್ನುತ್ತಾ ಜೋಡ ಮಾರುತಿ ದೇವಸ್ಥಾನದವರೆಗೂ ಸುಡು ಬಿಸಿಲಲ್ಲೇ ನಮಸ್ಕಾರ ಹಾಕಿದರು.

ಶಿವಕುಮಾರ್ ಉದಾಸಿ ಅಭಿಮಾನಿಗಳ ದೀಡ ನಮಸ್ಕಾರ

ಬಿಜೆಪಿ ಮುಖಂಡ ಎಂ. ಎಂ. ಹಿರೇಮಠ ನೇತೃತ್ವದಲ್ಲಿ ಆರು ಜನ ಅಭಿಮಾನಿಗಳಿಂದ ನಡೆದ ದೀಡ ನಮಸ್ಕಾರದ ವೇಳೆ ಬಿಜೆಪಿಯ ಹಲವಾರು ನಾಯಕರುರು ಭಾಗವಹಿಸಿದ್ದರು.

sample description
Last Updated : Apr 20, 2019, 10:23 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.