ETV Bharat / state

4 ಲಕ್ಷಕ್ಕೂ ಹೆಚ್ಚು ಜನರಿಂದ ಯೋಗ: ಗಿನ್ನಿಸ್ ದಾಖಲೆಯ ಪುಟ ಸೇರಿದ ಕರ್ನಾಟಕದ ಯೋಗಥಾನ್‌!

author img

By

Published : Jan 16, 2023, 7:28 AM IST

Updated : Jan 16, 2023, 12:38 PM IST

ರಾಜ್ಯದ 33 ವಿವಿಧ ಸ್ಥಳಗಳಲ್ಲಿ ಭಾನುವಾರ ಏಕಕಾಲಕ್ಕೆ 4,05,255 ಜನರು ಯೋಗಾಸನ ಪ್ರದರ್ಶಿಸಿದ್ದರು.

Yogathon-2023
ಯೋಗಾಥಾನ್‍-2023

ಧಾರವಾಡ : ರಾಜ್ಯದೆಲ್ಲೆಡೆ ನಡೆದ ಯೋಗಾಥಾನ್‍ -2023 ಕಾರ್ಯಕ್ರಮ ಗಿನ್ನಿಸ್ ದಾಖಲೆ ಪುಸ್ತಕ ಸೇರ್ಪಡೆಗೊಂಡಿದೆ. ಕಳೆದ ಎಂಟು ತಿಂಗಳಿಂದ ರಾಜ್ಯ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯು ಯೋಗಾಸನದ ವಿಶೇಷ ಪ್ರದರ್ಶನ ಆಯೋಜಿಸಲು ನಿರಂತರವಾಗಿ ಶ್ರಮಿಸಿದೆ. ಭಾನುವಾರ 4,05,255 ಜನರು ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡಿದ್ದು ಹೊಸ ಗಿನ್ನಿಸ್ ದಾಖಲೆಯಾಗಿದೆ ಎಂದು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.

ಧಾರವಾಡದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಕೆ.ಸಿ.ನಾರಾಯಣಗೌಡ, ಧಾರವಾಡದಲ್ಲಿ ಆಯೋಜನೆಯಾಗಿರುವ 26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಯೋಗಥಾನ್ ಆಯೋಜಿಸಲು ನಿರ್ಧರಿಸಿ ರಾಜ್ಯದಾದ್ಯಂತ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯೋಗಾಥಾನ್​ದಲ್ಲಿ ಭಾಗವಹಿಸಲು ರಾಜ್ಯದ ಸುಮಾರು 14 ಲಕ್ಷ ಯೋಗಪಟುಗಳು, ಯೋಗಾಸಕ್ತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು ಎಂದರು.

Yogathon 2023 was held in a very grand and peaceful manner
ಯೋಗಥಾನ್‌

ಯಾವ ಜಿಲ್ಲೆಯಲ್ಲಿ ಎಷ್ಟು ಜನ?: ಧಾರವಾಡ ಕೃಷಿ ವಿಶ್ವವಿದ್ಯಾಲಯ ಮೈದಾನದಲ್ಲಿ 5904 ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಮೈದಾನದಲ್ಲಿ 3405 ಮತ್ತು ಆರ್​ಎನ್‍ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ 4769 ಹಾಗೂ ವಿದ್ಯಾಗಿರಿಯ ಜೆಎಸ್‍ಎಸ್ ಕಾಲೇಜು ಮೈದಾನದಲ್ಲಿ 3769 ಹಾಗೂ ಹುಬ್ಬಳ್ಳಿಯ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ 6076 ಸೇರಿ ಒಟ್ಟು ಧಾರವಾಡ ಜಿಲ್ಲೆಯ 5 ಸ್ಥಳಗಳಿಂದ 23,923 ಜನ ಏಕಕಾಲದಲ್ಲಿ ಯೋಗಾಸನ ಪ್ರದರ್ಶನ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಿವಿವಿಎಸ್ ಕಾಲೇಜು ಮೈದಾನದಲ್ಲಿ 16,632 ಜನರು ಮತ್ತು ಬೆಳಗಾವಿಯ ಆರ್ಮಿ ಗಾಲ್ಫ್ ಕೋರ್ಸ್ ಮೈದಾನದಲ್ಲಿ 41,914 ಹಾಗೂ ಸುವರ್ಣಸೌಧದ ಮುಂದೆ 17,712 ಮತ್ತು ಬಳಾರಿಯ ಏರ್‍ಪೋರ್ಟ್ ಮೈದಾನದಲ್ಲಿ 11,847 ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ 8,446, ರೇವಾ ವಿಶ್ವವಿದ್ಯಾಲಯ ಆವರಣದಲ್ಲಿ 4,798 ಬೀದರದ ಜಿಲ್ಲಾ ಕ್ರೀಡಾಂಗಣದಲ್ಲಿ 1,980, ಚಾಮರಾಜನಗರ ಜಿಲ್ಲಾ ಕ್ರೀಡಾಂಗಣದಲ್ಲಿ 6,843, ಚಿಕ್ಕಬಳ್ಳಾಪುರ ಎಸ್‍ಜೆಸಿಐಟಿ ಕಾಲೇಜು ಮೈದಾನದಲ್ಲಿ 9256 ಜನರು ಯೋಗ ಪ್ರದರ್ಶಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ಕ್ರೀಡಾಂಗಣದಲ್ಲಿ 8,675, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ಕಾಲೇಜು ಮೈದಾನದಲ್ಲಿ 31,986, ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ 11,808, ಗದಗ ಎಎಸ್‍ಎಸ್ ಆಟ್ಸ್ಟ್ ಕಾಲೇಜು ಮೈದಾನದಲ್ಲಿ 7842, ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ 6,544, ಕಲಬುರ್ಗಿಯ ಪೊಲೀಸ್ ಪೆರೇಡ್ ಮೈದಾನದಲ್ಲಿ 16,064 ಮತ್ತು ಎನ್‍ವಿ ಕಾಲೇಜು ಮೈದಾನದಲ್ಲಿ 4,461, ಕೋಲಾರದ ಶ್ರೀ ಎಂ.ವಿ. ಕ್ರೀಡಾಂಗಣದಲ್ಲಿ 16,451, ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 9781, ಮಂಡ್ಯ ಪಿಇಎಸ್ ಕಿಕೆಟ್​ ಮೈದಾನದಲ್ಲಿ 8,892 ಜನರು ಯೋಗ ಮಾಡಿದ್ದಾರೆ.

Yoga meditation even in the bitter cold
ಯೋಗಥಾನ್‌

ಯೋಗಹಬ್​ ಎಂದೇ ಪ್ರಖ್ಯಾತಿ ಪಡೆದಿರುವ ಮೈಸೂರು ಗಾಲ್ಫ್ ಕೋರ್ಸ್ ಮೈದಾನದಲ್ಲಿ 41,042 ಜನರು ಮೈ ಕೊರೆಯುವ ಚಳಿ ಲೆಕ್ಕಿಸದೇ ಏಕಕಾಲಕ್ಕೆ ಯೋಗ ಪ್ರದರ್ಶನ ಮಾಡುವ ಮೂಲಕ ಜಿಲ್ಲೆ ಅತಿಹೆಚ್ಚು ಜನರು ಯೋಗ ಪ್ರದರ್ಶನ ಮಾಡಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆ ಗಿಟ್ಟಿಸಿದೆ. ರಾಯಚೂರು ಜಿಲ್ಲಾ ಕ್ರೀಡಾಂಗಣದಲ್ಲಿ 6842, ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ 5654, ಶಿವಮೊಗ್ಗ ನೆಹರು ಮೈದಾನದಲ್ಲಿ 11,743, ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ 10,083, ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯ ಮೈದಾನದಲ್ಲಿ 14,564, ಉತ್ತರ ಕನ್ನಡ ತಾಲೂಕು ಜಿಲ್ಲೆಯ ಭಟ್ಕಳ ತಾಲೂಕಾ ಮೈದಾನದಲ್ಲಿ 3594, ವಿಜಯಪುರ ಸೈನಿಕ ಶಾಲೆಯ ಮೈದಾನದಲ್ಲಿ 36,644 ಹಾಗೂ ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ 9,234 ಜನರು ಯೋಗಾಸನ ಮಾಡಿದ್ದಾರೆ.

ಗಿನ್ನಿಸ್​ ದಾಖಲೆ: ಒಟ್ಟಾರೆಯಾಗಿ ರಾಜ್ಯದ ವಿವಿಧ ಜಿಲ್ಲೆಗಳ 33 ಸ್ಥಳಗಳಲ್ಲಿ ಏಕಕಾಲಕ್ಕೆ 4,05,255 ಜನ ಯೋಗಾಸನ ಮಾಡಿದ್ದಾರೆ. 2018ರಲ್ಲಿ ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ 1,00,984 ಜನರು ಯೋಗ ಮಾಡಿದ್ದು ಗಿನ್ನಿಸ್​ ದಾಖಲೆಯಾಗಿತ್ತು. ಇದಕ್ಕೂ ಮೊದಲು 2017ರಲ್ಲಿ ನಮ್ಮ ರಾಜ್ಯದ ಮೈಸೂರು ನಗರದಲ್ಲಿ ಏಕಕಾಲಕ್ಕೆ 55,524 ಜನ ಯೋಗ ಪ್ರದರ್ಶಿಸಿ ಗಿನ್ನಿಸ್ ದಾಖಲೆ ಸೇರಿದ್ದರು.

ಆದರೆ ಈಗ ಇಡೀ ಕರ್ನಾಟಕ ರಾಜ್ಯದ 33 ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ 4,05,255 ಜನ ಯೋಗಾಸನ ಪ್ರದರ್ಶಿಸುವ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿ, ಹೊಸ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ. ರಾಜಸ್ಥಾನದಲ್ಲಿ ಯೋಗ ಪ್ರದರ್ಶಿಸಿದವರಿಗಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಮೂರುಪಟ್ಟು ಹೆಚ್ಚು ಜನ ಏಕಕಾಲಕ್ಕೆ ಶಿಸ್ತುಬದ್ಧ, ಶಾಂತ ಹಾಗು ನಿಯಮಾನುಸಾರ ಯೋಗ ಮಾಡಿದ್ದಾರೆ ಎಂದು ಸಚಿವ ಡಾ.ಕೆ.ಸಿ.ನಾರಾಯಣಗೌಡ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಯೋಗಥಾನ್​: 15 ಸಾವಿರ ವಿದ್ಯಾರ್ಥಿಗಳು ಭಾಗಿ - ಡ್ರೋನ್ ಕ್ಯಾಮರಾದಲ್ಲಿ ಸೆರೆ

Last Updated : Jan 16, 2023, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.