ETV Bharat / state

ತಪ್ಪಾಗಿ ಪಿಂಚಣಿ ನಿಗದಿ: 5 ಲಕ್ಷ 63 ಸಾವಿರ ಬಡ್ಡಿ ಪರಿಹಾರ ನೀಡುವಂತೆ ಪಿಎಫ್ ಇಲಾಖೆ ಗ್ರಾಹಕರ ಆಯೋಗದ ಆದೇಶ

author img

By

Published : May 26, 2023, 5:08 PM IST

ಹುಬ್ಬಳ್ಳಿಯ ಪ್ರಾವಿಡೆಂಟ್ ಫಂಡ್ ಇಲಾಖೆ ಸಿಬ್ಬಂದಿ ನಿವೃತ್ತಿ ನಂತರದ ಪಿಂಚಣಿ ನಿಗದಿಪಡಿಸುವ ವೇಳೆ ತಪ್ಪು ಲೆಕ್ಕ ಹಾಕಿ, ಸೇವಾ ನ್ಯೂನ್ಯತೆ ಎಸಗಿರುವ ಕುರಿತಾಗಿ 8 ಜನ ನಿವೃತ್ತ ಪಿಂಚಣಿದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

consumer court
ಜಿಲ್ಲಾ ಗ್ರಾಹಕರ ಆಯೋಗ

ಧಾರವಾಡ: 8 ಜನ ನಿವೃತ್ತ ಪಿಂಚಣಿದಾರರ ಪಿಂಚಣಿ ತಪ್ಪಾಗಿ ನಿಗದಿಪಡಿಸಿದ ಪಿಎಫ್ ಇಲಾಖೆಗೆ ರೂ.5 ಲಕ್ಷ 63 ಸಾವಿರ ಬಡ್ಡಿ ಸಹಿತ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ ತೀರ್ಪು ನೀಡಿ ಆದೇಶಿಸಿದೆ. ಹುಬ್ಬಳ್ಳಿಯ ಪ್ರಾವಿಡೆಂಟ್ ಫಂಡ್ ಇಲಾಖೆಯವರು ನಿವೃತ್ತಿ ನಂತರದ ಪಿಂಚಣಿ ನಿಗದಿಪಡಿಸುವಾಗ ತಪ್ಪು ಲೆಕ್ಕ ಹಾಕಿ ಸೇವಾ ನ್ಯೂನ್ಯತೆ ಎಸಗಿರುವ ಕುರಿತಾಗಿ 8 ಜನ ನಿವೃತ್ತ ಪಿಂಚಣಿದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ತಮಗೆ ಸಂಬಂಧಿಸಿದ ಪಿಂಚಣಿ ವ್ಯಾಜ್ಯವನ್ನು ಪಿಎಫ್ ಇಲಾಖೆಯಿಂದ ಪ್ರತಿ ತಿಂಗಳು ನಡೆಸುವ ಪಿಂಚಣಿ ಲೋಕ್‍ ಅದಾಲತ್‍ನಲ್ಲಿ ದೂರುದಾರ ಭಾಗವಹಿಸಿ ಪರಿಹಾರ ಕಂಡುಕೊಳ್ಳದೇ, ಗ್ರಾಹಕರ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದು ತಪ್ಪು ಅಂತಾ ಹೇಳಿ ಅವುಗಳನ್ನು ವಜಾಗೊಳಿಸಬೇಕು ಎಂದು ಪಿಎಫ್ ಇಲಾಖೆಯವರು ಆಕ್ಷೇಪಿಸಿದ್ದರು.

ಎಲ್ಲ ದೂರುದಾರರ ಪಿಂಚಣಿ ನಿಗದಿಪಡಿಸುವ ವೇಳೆ, ಪಿಎಫ್ ಇಲಾಖೆ ಸರಿಯಾಗಿ ಲೆಕ್ಕ ಹಾಕದೇ ತಪ್ಪೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವರು ಸೇವಾ ನ್ಯೂನ್ಯತೆ ಎಸಗಿದ್ದಾ ಎಂಬುದಾಗಿ ಆಯೋಗ ಅಭಿಪ್ರಾಯಪಟ್ಟಿದ್ದು, ಪಿಎಫ್ ಇಲಾಖೆಯವರ ವಾದವನ್ನು ತಳ್ಳಿಹಾಕಿದೆ. ಪಿಂಚಣಿ ನಿಗದಿಪಡಿಸಿದ ದಿನಾಂಕದಿಂದ ಆಯೋಗ ಆದೇಶ ಹೊರಡಿಸಿದ ದಿನಾಂಕದವರೆಗೆ 8 ಜನ ದೂರುದಾರರಿಗೆ ಒಟ್ಟು ರೂ.5 ಲಕ್ಷ 63 ಸಾವಿರ 541ಗಳ ಬಾಕಿ ಹಣ, ಅದರ ಮೇಲೆ ಶೇ.10 ರಂತೆ ಬಡ್ಡಿ ಲೆಕ್ಕ ಹಾಕಿ ನೀಡುವಂತೆ ಆದೇಶಿಸಿದೆ. ಇದರೊಂದಿಗೆ ಪ್ರತಿಯೊಬ್ಬ ದೂರುದಾರರಿಗೆ ಮಾನಸಿಕ ತೊಂದರೆ ನಿವಾರಣೆಗಾಗಿ ತಲಾ 20 ಸಾವಿರ ರೂ ಪರಿಹಾರ ಹಾಗೂ ತಲಾ ರೂ.10 ಸಾವಿರ ರೂಗಳಂತೆ ಅವರವರ ಪ್ರಕರಣದ ಖರ್ಚು ವೆಚ್ಚವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡಲು ಆಯೋಗ ಆದೇಶಿಸಿದೆ.

ವೈದ್ಯಕೀಯ ನಿರ್ಲಕ್ಷ್ಯ ತೋರಿದ ವೈದ್ಯೆಗೆ ₹ 11 ಲಕ್ಷ ದಂಡ(ಧಾರವಾಡ): ಮತ್ತೊಂದು ಪ್ರಕರಣದಲ್ಲಿ ಗರ್ಭಿಣಿಯ ಆರೋಗ್ಯ ತಪಾಸಣೆ ವೇಳೆ ಹೊಟ್ಟೆಯಲ್ಲಿರುವ ಶಿಶು ಅಂಗವೈಕಲ್ಯತೆ ಇರುವದನ್ನು ಪೋಷಕರ ಗಮನಕ್ಕೆ ತರದೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ ವೈದ್ಯೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 11 ಲಕ್ಷದ 10 ಸಾವಿರ ರೂಪಾಯಿ ದಂಡ ಮತ್ತು ಪರಿಹಾರ ನೀಡುವಂತೆ ಎರಡು ತಿಂಗಳ ಹಿಂದೆ ಆದೇಶಿಸಿತ್ತು. ಇಂದು ತಪ್ಪಾಗಿ ಪಿಂಚಣಿ ನಿಗದಿಪಡಿಸಿದ ಪಿಎಫ್ ಇಲಾಖೆಗೆ ರೂ.5 ಲಕ್ಷ 63 ಸಾವಿರ ಬಡ್ಡಿ ಮತ್ತು ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶಿಸಿರುವುದು ಬೆಳಕಿಗೆ ಬಂದಿದೆ.

ದೂರಿನ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ವೈದ್ಯರ ಈ ನಡವಳಿಕೆಯು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆ ಆಗುತ್ತದೆ ಎಂಬ ಸರ್ವೋಚ್ಛ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕರ ಆಯೋಗದ ತೀರ್ಪು ಆಧರಿಸಿ ಜಿಲ್ಲಾ ಗ್ರಾಹಕರ ಆಯೋಗ ತೀರ್ಪು ನೀಡಿದ್ದು, ಇದಕ್ಕೆ ಪರಿಹಾರವಾಗಿ ದೂರುದಾರರಿಗೆ 11,10,000 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಇದನ್ನೂಓದಿ:ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ್ದು ಜೆಡಿಎಸ್​ ಮರೆಯಬಾರದು ಎಂದ ಡಿಕೆಶಿ.. ನಾವು ಕಾಂಗ್ರೆಸ್‌ನ ಗುಲಾಮರಲ್ಲ ಎಂದ ಹೆಚ್​ಡಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.