ETV Bharat / state

ಹೊಂಡಾ ಸಿಟಿಯಾಗ್ತಿದೆ ಹುಬ್ಬಳ್ಳಿ..: ಸ್ಮಾರ್ಟ್​ಸಿಟಿಯಲ್ಲಿ ಹತ್ತಾರು ಸಮಸ್ಯೆ; ಪ್ರಯಾಣಿಕರ ನಿತ್ಯ ಪರದಾಟ

author img

By

Published : Oct 19, 2022, 8:10 PM IST

ಸ್ಮಾರ್ಟ್ ಸಿಟಿ ಹಣೆಪಟ್ಟಿಯ ಹುಬ್ಬಳ್ಳಿ ನಗರದಲ್ಲಿ ರಸ್ತೆಗಳು ಮಾತ್ರ ಸರಿಯಾಗುತ್ತಿಲ್ಲ. ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಸ್ತೆ ಯಾವುದು? ಗುಂಡಿ ಯಾವುದು? ಎಂಬ ಆತಂಕ ವಾಹನ ಸವಾರರದ್ದಾಗಿದೆ. ತಗ್ಗು ಗುಂಡಿ ರಸ್ತೆಗಳಿಂದ ಸಾರ್ವಜನಿಕರು ನಿತ್ಯರೋಧನೆ ಪಡುವ ದುಸ್ಥಿತಿ ಎದುರಾಗಿದೆ.

ರಸ್ತೆಯಲ್ಲಿ ಗುಂಡಿ ಸಮಸ್ಯೆ
ರಸ್ತೆಯಲ್ಲಿ ಗುಂಡಿ ಸಮಸ್ಯೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದ ಜೀವನ ಹೇಗಿದೆ ಅಂದರೆ ಒಂದು ಸಮಸ್ಯೆ ಬಗೆಹರಿಸಿಕೊಂಡು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಹತ್ತು ಸಮಸ್ಯೆಗಳು ಉಸಿರು ಕಟ್ಟಿಸುವಂತೆ ಸೃಷ್ಟಿಯಾಗುತ್ತಿವೆ. ಅದೆಷ್ಟೇ ಯೋಜನೆಗಳು ಬಂದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜಾಣ ಕುರುಡುತನದಿಂದ ಸಮಸ್ಯೆಗೆ ಅಂತ್ಯ ಸಿಗುತ್ತಿಲ್ಲ ಅಂತಾರೆ ಸಾರ್ವಜನಿಕರು.

ಸ್ಮಾರ್ಟ್ ಸಿಟಿ ಹುಬ್ಬಳ್ಳಿ ನಗರದ ರಸ್ತೆಗಳು ಸರಿಯಾಗುತ್ತಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಸ್ತೆ ಯಾವುದು? ಗುಂಡಿ ಯಾವುದು? ಎಂಬ ಆತಂಕ ವಾಹನ ಸವಾರರದ್ದು. ತಗ್ಗು ಗುಂಡಿ ರಸ್ತೆಗಳಿಂದ ಸಾರ್ವಜನಿಕರು ನಿತ್ಯರೋಧನೆ ಪಡುತ್ತಿದ್ದಾರೆ.

ರಸ್ತೆ ಸಮಸ್ಯೆಯ ಬಗ್ಗೆ ಹುಬ್ಬಳ್ಳಿ ನಿವಾಸಿ ಮಹಾಂತೇಶ್​ ಅವರು ಮಾತನಾಡಿದರು

ವಾಣಿಜ್ಯನಗರಿ ಸ್ಮಾರ್ಟ್ ಸಿಟಿ ಅಷ್ಟೇ ಅಲ್ಲದೇ ರಾಜ್ಯದ ಎರಡನೇ ರಾಜಧಾನಿ ಅಂತಲೂ ಬಿಂಬಿತವಾಗಿದೆ. ಆದರೆ ನಗರದಲ್ಲೀಗ ಎಲ್ಲಿ ನೋಡಿದರೂ ಗುಂಡಿಗಳೇ ಕಣ್ಣಿಗೆ ರಾಚುತ್ತವೆ. ಹುಬ್ಬಳ್ಳಿಯ ಹೃದಯ ಭಾಗ ಬಸವವನ ಹತ್ತಿರದ ರಸ್ತೆ ಸೇರಿದಂತೆ ನಗರದ ವಿವಿಧೆಡೆಯ ರಸ್ತೆಗಳ ಮಧ್ಯೆ ಗುಂಡಿಗಳಿದ್ದು, ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡೇ ಓಡಾಡಬೇಕು. ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ಇದು ಹಲವಾರು ಆಸ್ಪತ್ರೆಗಳಿಗೂ ಸಂಪರ್ಕ ರಸ್ತೆ. ರೋಗಿಗಳಾಗಲಿ ಅಥವಾ ಗರ್ಭಿಣಿಯರಾಗಲಿ ತಗ್ಗು ಬಿದ್ದ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆ ಎದುರಾಗಿದ್ದು, ಅವರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಗುಣಮಟ್ಟದ ಕೆಲಸಕ್ಕೆ ಸಾರ್ವಜನಿಕರ ಒತ್ತಾಯ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನೂರಾರು ಕೋಟಿ ರೂ ಅನುದಾನದಲ್ಲಿ ನಗರದಲ್ಲಿ ಕೆಲಸವಾಗುತ್ತಿದೆ. ಪಾಲಿಕೆ ರಸ್ತೆ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್​ನಡಿ ಸಾಕಷ್ಟು ಕೆಲಸ ಕಾಮಗಾರಿ ಕೈಗೆತ್ತಿಕೊಂಡಿದೆ. ಆದರೆ ಇಷ್ಟೆಲ್ಲಾ ಕಾಮಗಾರಿಗಳು ನಡೆಯುತ್ತಿದ್ದರೂ ಮಾತ್ರ ನಗರದ ರಸ್ತೆಗಳು ಮಾತ್ರ ಸ್ಮಾರ್ಟ್ ಆಗುತ್ತಿಲ್ಲ ಎಂಬುವುದು ವಿಪರ್ಯಾಸ. ಹಾಗಾಗಿ ಗುಣಮಟ್ಟದ ಕೆಲಸಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಅವಧಿಗೂ ಮುನ್ನ ಮುಗಿಯಲಿದೆ : ಸಚಿವ ಭೈರತಿ ಬಸವರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.