ETV Bharat / state

ಅಧಿವೇಶನದಲ್ಲಿ ಸೈಲೆಂಟ್ ಆಗಿದ್ದವರು ಟ್ಯಾಲೆಂಟ್‌ ತೋರಿಸುವ ನಾಟಕ ಮಾಡುತ್ತಿದ್ದಾರೆ: ಶೆಟ್ಟರ್ ವಾಗ್ದಾಳಿ

author img

By

Published : Jan 4, 2023, 5:27 PM IST

ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್​ನವರು ಮಹಾದಾಯಿ ಹೋರಾಟದ ನಾಟಕ - ಗೋವಾದವರು ನೀರಿನ ವಿಚಾರವಾಗಿ ಏನೇ ಖ್ಯಾತೆ ತೆಗೆದರೂ ಪ್ರಯೋಜನವಿಲ್ಲ - ಕಟೀಲ್​ ಲವ್​ ಜಿಹಾದ್​ ಎನ್ನವುದು ಜ್ವಲಂತ ಗಂಭೀರ ಸಮಸ್ಯೆ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

those-who-were-silent-in-the-session-show-their-talent-here-jagadish-shetter
ಅಧಿವೇಶನದಲ್ಲಿ ಸೈಲೆಂಟ್ ಆಗಿದ್ದವರು ಟ್ಯಾಲೆಂಟ್‌ ತೋರಿಸುವ ನಾಟಕ ಮಾಡುತ್ತಿದ್ದಾರೆ: ಶೆಟ್ಟರ್ ವಾಗ್ದಾಳಿ

ಟ್ಯಾಲೆಂಟ್‌ ತೋರಿಸುವ ನಾಟಕ ಮಾಡುತ್ತಿದ್ದಾರೆ ಶೆಟ್ಟರ್ ವಾಗ್ದಾಳಿ

ಹುಬ್ಬಳ್ಳಿ: ಮಹಾದಾಯಿ ಮತ್ತು ಕಳಸಾ ಬಂಡೂರಿ ಯೋಜನೆಗೆ ಸಂಬಂಧ ಪಟ ಬಗ್ಗೆ ಕಾಂಗ್ರೆಸ್‌ಗೆ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ, ಇನ್ನು ಮೂರು ತಿಂಗಳಲ್ಲಿ ಚುನಾವಣೆ ಇದೆ. ಅದಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಚುನಾವಣೆ ಪ್ರಚಾರಕ್ಕಾಗಿ ಮಹಾದಾಯಿ ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಹದಾಯಿ ಬಗ್ಗೆ ಒಂದು ಶಬ್ದವನ್ನೂ ಮಾತಾಡಿಲ್ಲ. ಎಲ್ಲಿ ಮಾತಾಡಬೇಕು ಅಲ್ಲಿ ಮಾತಾಡೋದು ಬಿಟ್ಟು, ಈಗ ಇಲ್ಲಿ ಬಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಇಂದು ಮಾಧ್ಯಮದ ಜೊತೆಗೆ ಮಾತನಾಡಿದ ಜಗದೀಶ್​ ಶೆಟ್ಟರ್​, ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರು. ಆ ಸಮಯದಲ್ಲಿ ಕಳಸಾ ಬಂಡೂರಿ ಬಗ್ಗೆ ಒಂದು ಬಾರಿ ವಿಷಯ ಮಾತನಾಡಲಿಲ್ಲ, ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಗೋವಾ ರಾಜ್ಯ ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿ ಕರ್ನಾಟಕಕ್ಕೆ ಮಾಂಡೊವಿ ನದಿಯಿಂದ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು.

ಸೋನಿಯಾ ಗಾಂಧಿ ಮಾತು ಮೀರಿ ಅವರ ವಿರುದ್ಧ ಹೋರಾಡ್ತೀರಾ‌..? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ಕಾಂಗ್ರೆಸ್​ ನಾಯಕರು ಕರ್ನಾಟಕದ ಹಿತಾಸಕ್ತಿಯ ಬಗ್ಗೆ ಒಮ್ಮೆಯೂ ಹೋರಾಡಿಲ್ಲ. ಯಮನೂರಿನಲ್ಲಿ ನಡೆದ ಮಹದಾಯಿ ಹೋರಾಟದ ಸಂದರ್ಭದಲ್ಲಿ ಹೋರಾಟಗಾರರು ಮತ್ತು ರೈತರ ಮೇಲೆ ಲಾಠಿಚಾರ್ಜ್‌ ಮಾಡಿಸಿದ್ದರು. ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದಾರೆ ಸಿದ್ದರಾಮಯ್ಯ. ‘ಯಾವನರಿ ಇವಾ..?’ ಎಂದು ಸಿದ್ದರಾಮಯ್ಯ ವಿರುದ್ಧ ಜಗದೀಶ್​ ಶೆಟ್ಟರ್ ಟೀಕಿಸಿದರು.

ಕಾಂಗ್ರೆಸ್ಸಿನವರು ಸುಳ್ಳುಗಾರರು, ಇವರನ್ನು ಜನ ನಂಬುವುದಿಲ್ಲ. ನ್ಯಾಯಾಧಿಕರಣದಲ್ಲಿ ನಮ್ಮ ಪರ ಆದೇಶ ಬಂದಿದ್ದು, ಯೋಜನೆ ಜಾರಿ ಮಾಡುತ್ತೇವೆ. ನೀರಿನ ವಿಚಾರವಾಗಿ ಗೋವಾದವರು ಏನು ಖ್ಯಾತೆ ಮಾಡಿದರು ಪ್ರಯೋಜನವಿಲ್ಲ. ವಿರೋಧ ಪಕ್ಷಗಳು ರಚನಾತ್ಮಕ ಸಲಹೆ, ಸಹಕಾರ ಕೊಡಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನಾಟಕವನ್ನು ಜನರು ನಂಬಲ್ಲ ಎಂದು ಜಗದೀಶ್​ ಶೆಟ್ಟರ್​ ಹೇಳಿದರು.

ರಸ್ತೆ ಅಭಿವೃದ್ಧಿ ಬಿಡಿ ಲವ್ ಜಿಹಾದ್ ಬಗ್ಗೆ ಗಮನ ಕೊಡಿ: ನಳಿನ್ ಕುಮಾರ್ ಕಟೀಲ್ ಹೇಳಿಕೆ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ನಳಿನ್ ಕುಮಾರ್ ಕಟೀಲ್ ಹೇಳಿರುವ ಉದ್ದೇಶವೇ ಬೇರೆ. ಅವರು ಆ ಅರ್ಥದಲ್ಲಿ ಹೇಳಲಿಕ್ಕೆ ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ತಾನಾಗಿಯೇ ನಡೆಯುತ್ತಿರುತ್ತವೆ. ಹೀಗಾಗಿ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಲವ್ ಜಿಹಾದ ಕೂಡ ಗಂಭೀರ ಸಮಸ್ಯೆ. ಹಿಂದೂ ಹೆಣ್ಣು ಮಕ್ಕಳನ್ನು ಬ್ರೇನ್ ವಾಶ್ ಮಾಡಿ ಕರೆದುಕೊಂಡು ಹೋಗುತ್ತಿದ್ದಾರೆ. ಲವ್ ಜಿಹಾದ್ ಹೆಸರಲ್ಲಿ ಹಿಂದೂ ಯುವತಿಯರನ್ನು ವಂಚಿಸಲಾಗುತ್ತಿದೆ. ಲವ್ ಜಿಹಾದದಿಂದ ಎಷ್ಟೋ ಹೆಣ್ಣು ಮಕ್ಕಳ ಜೀವನ ಹಾಳಾಗಿದೆ. ಇದೊಂದು ಜ್ವಲಂತ ಗಂಭೀರ ಸಮಸ್ಯೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಅಭಿವೃದ್ಧಿ ಬೇಡ ಎಂದು ಯಾರೂ ಕೂಡ ಹೇಳಲಿಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್​ನ ಅಭಿಯಾನಕ್ಕಾಗಿ ಅರವಿಂದ ಲಿಂಬಾವಳಿ ಬಂಧಿಸಲಾಗದು : ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.