ಮೂಲ ಸೌಲಭ್ಯಗಳಿಂದ ಈ ಗ್ರಾಮ ದೂರ: ಗ್ರಾಮದತ್ತ ಮುಖ ಮಾಡದ ಜನಪ್ರತಿನಿಧಿಗಳು

author img

By

Published : Jul 14, 2019, 2:05 PM IST

ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಈ ಗ್ರಾಮದಲ್ಲಿರುವ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.

ಹುಬ್ಬಳ್ಳಿ: ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನೆಲ್ಲಾ ಗಾಳಿಗೆ ತೂರಿದಂತಾಗಿದೆ.

ಈ ಗ್ರಾಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಇವರಿಗೆ ಜೀವನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳೇ ಇಲ್ಲದಂತಾಗಿದೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯೂ ಹಾಳಾಗಿದ್ದು, ಗ್ರಾಮಕ್ಕೆ ಮುಖ್ಯ ಸಂಪರ್ಕವೇ ಇಲ್ಲದಂತಾಗಿದೆ.

ಮೂಲಭೂತ ಸೌಲಭ್ಯಗಳಿಂದ ವಂಚಿತ ಗ್ರಾಮ

ಇನ್ನು ಊರಿನಲ್ಲಿ 15 - 20 ದಿನಗಳಿಗೊಮ್ಮೆ ನೀರು ಬಿಡುವ ಕಾರಣ ಗ್ರಾಮದ ಜನರು ಕುಡಿಯಲು ನೀರನ್ನು ಅರಿಸಿ ದೂರದ ಪ್ರದೇಶಗಳಿಗೆ ಹೋಗುವಂತಹ ಪರಿಸ್ಥಿತಿ ಇದೆ‌. ಅಷ್ಟೆ ಅಲ್ಲದೇ ವಿದ್ಯುತ್ ಸಂಪರ್ಕ ಕೂಡ ಈ ಗ್ರಾಮಕ್ಕಿಲ್ಲ. ದಿನದ ನಾಲ್ಕು ತಾಸು ಮಾತ್ರ ವಿದ್ಯುತ್ ಕೊಡುವ ಕಾರಣ ಮಕ್ಕಳು ಓದಲು, ಮನೆಯ ಕೆಲಸ ಮಾಡಲು ತೊಂದರೆಯಾಗುತ್ತಿದೆ‌.

ಈ ಎಲ್ಲ ಸಮಸ್ಯೆಗಳಿಂದ ರೋಸಿ ಹೋದ ಗ್ರಾಮದ ಜನತೆ ಅದೆಷ್ಟೋ ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿ ಮನವಿ ಮಾಡಿದ್ರು. ಆದರೆ ಯಾವುದೇ ಪ್ರಯೋಜನವಾಗಿಲ್ಲವಂತೆ. ಇನ್ನು ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಬರುವರೇ ಹೊರತು ಚುನಾವಣೆ ಮುಗಿದ ಮೇಲೆ ಇತ್ತ ಗಮನ ಹರಿಸಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

Intro:ಹುಬ್ಬಳಿBody:ಸ್ಲಗ್: ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಗ್ರಾಮ....



ಹುಬ್ಬಳ್ಳಿ:- ಅದು ಒಂದು ಪುಟ್ಟ ಗ್ರಾಮ, ಆ ಗ್ರಾಮದ ಜನತೆಯು ಎಲ್ಲರಂತೆ ಆಧುನಿಕತೆಯತ ಸಾಗಬೇಕೆಂಬ ಹಂಬಲದಲ್ಲಿದ್ದಾರೆ. ಆದರೆ ಅಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮೂಲಭೂತ ಸೌಲಭ್ಯ ಗಳಿಗೂ ಪರಿತಪ್ಪಿಸುವಂತಾಗಿದೆ.
ಹೌದು, ಹೇಳಲು ಹೋರಟಿರುವ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದ್ದು, ಕೇಲವೆ ತಿಂಗಳ ಹಿಂದೆ ಉಪಚುನಾವಣೆಯ ಸಹ ಆಗಿದೆ ಆದ್ರೇ ಚುನಾವಣಾ ಸಂದರ್ಭದಲ್ಲಿ ನೀಡಿರುವ ಬರವಸೆ ಎಲ್ಲವೂ ಗಾಳಿಯಲ್ಲಿ ತೂರಿ ಹೋಗಿವೆ.ಈ ಗ್ರಾಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ವಿದೆ. ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಇವರಿಗೆ ಜೀವನಕ್ಕೆ ಬೇಕಾದ ಮೂಲಭೂತ ಸೌಕರ್ಯ ಗಳೇ ಇಲ್ಲದಾಗಿದೆ.ಈ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯೇ ಹದಗೆಟ್ಟು ಹೋಗಿದ್ದು, ಗ್ರಾಮಕ್ಕೆ ಮುಖ್ಯ ಸಂಪರ್ಕವೇ ಸರಿಯಿಲ್ಲದಂತಾಗಿದೆ. ಇನ್ನೂ ಗ್ರಾಮದ ರಸ್ತೆಗಳ ಸ್ಥಿತಿ ಹೇಳತ್ತಿರದ್ದು, ಮಕ್ಕಳು, ವೃದ್ದರು, ವಯೋಮಾನದವರು ಓಡಾಟ ಮಾಡಲು ಸರಿಯಾದ ರಸ್ತೆಗಳಿಲ್ಲದೇ ಪರದಾಡುತ್ತಿದ್ದಾರೆ. ಇನ್ನೂ ಊರಿನಲ್ಲಿ 15 - 20 ದಿನಗಳಿಗೊಮ್ಮೆ ನೀರು ಬಿಡುವ ಕಾರಣ ಗ್ರಾಮದ ಜನರು ಕುಡಿಯಲು ನೀರಿಗಾಗಿ ನೀರನ್ನು ಅರಿಸಿ ದೂರದ ಪ್ರದೇಶಗಳಿಗೆ ಹೋಗುವಂತಾಗಿದೆ‌.ರಾತ್ರಿ ಆದರೆ ಸಾಕು ಗ್ರಾಮದಲ್ಲಿ ಬೆಳಕಿನ ಬುಗ್ಗೆ ಕಾಣಬೇಕಾದ ಗ್ರಾಮ ವಿದ್ಯುತ್ ಶಕ್ತಿ ಯಿಂದ ದೂರ ಉಳಿದು ಕತ್ತಲೆ ಯಲ್ಲಿ ಕೊಳೆಯುವಂತಾಗಿದೆ. ದಿನದ ನಾಲ್ಕು ತಾಸು ವಿದ್ಯುತ್ ಕೊಡುವ ಕಾರಣ ಮಕ್ಕಳು ಓದು, ಮನೆಯ ಕೆಲಸ, ಮುಂತಾದ ಕೆಲಸಗಳಿಗೆ ತೊಂದರೆಯಾಗುತ್ತಿದೆ‌. ಇದಷ್ಟೇ ಅಲ್ಲದೇ ಗ್ರಾಮದ ಮಕ್ಕಳು ಓದಿ ಮುಂದೊಂದು ದಿನ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.ಈ ಎಲ್ಲ ಸಮಸ್ಯೆಗಳಿಂದ ರೋಸಿ ಹೋದ ಗ್ರಾಮದ ಜನತೆ ಎದೆಷ್ಟೋ ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ತಮ್ಮ ಸಮಸ್ಯೆಗಳನ್ನು ತೊಡಿಕೊಂಡು ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲವಂತೆ. ಇನ್ನೂ ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಬರುವರೋ ಹೊರತು, ಚುನಾವಣೆ ಮುಗಿದ ಮೇಲೆ ಇತ್ತ ಗಮನ ಹರಿಸಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.

ಬೈಟ್:- ಪಾರವ್ವ ಗ್ರಾಮಸ್ಥರು

ಒಟ್ಟಿನಲ್ಲಿ ಗ್ರಾಮದ ಜನರ ಕಲ್ಯಾಣ ಮಾಡಬೇಕಾದ ಜನಪ್ರತಿನಿಧಿಗಳು ಗ್ರಾಮವನ್ನೇ ಮರೆತು ಬಿಟ್ಟಿರುವ ಕಾರಣ ಗ್ರಾಮ ಮೂಲಭೂತ ಸೌಕರ್ಯಗಳಿಂದಲೇ ವಂಚಿತವಾಗಿದ್ದು ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಗ್ರಾಮದ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ‌....!

_________________________


ಹುಬ್ಬಳ್ಳಿ: ಸ್ಟ್ರಿಂಜರ್


ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಲ‌ಕುಂದಗೊಳ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.