ETV Bharat / state

ವಿನಯ್ ಕುಲಕರ್ಣಿ ಮನೆಗೆ ಎಸ್.ಆರ್ ಪಾಟೀಲ್ ಭೇಟಿ: ಕುಟುಂಬಕ್ಕೆ ಧೈರ್ಯ ತುಂಬಿದ ನಾಯಕ

author img

By

Published : Nov 12, 2020, 4:52 PM IST

ಬಿಜೆಪಿಯವರು ಬಾಯಿ ತೆರೆದರೆ ಆಚಾರ, ಸಂಸ್ಕೃತಿ ಕುರಿತು ಮಾತನಾಡುತ್ತಾರೆ. ನಾವೇ ಪರಂಪರೆಯ ವಾರಸುದಾರರು ಅಂತಾರೆ. ಆದ್ರೆ ಅದಕ್ಕೆ ತದ್ವಿರುದ್ದ ಅವರು ಎಂದು ಎಸ್​ ಆರ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್.ಆರ್ ಪಾಟೀಲ್
ಎಸ್.ಆರ್ ಪಾಟೀಲ್

ಧಾರವಾಡ: ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ‌ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು.

ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿದ ಎಸ್.ಆರ್ ಪಾಟೀಲ್

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ, ನಮ್ಮ‌ ಕುಟುಂಬ ಸದಸ್ಯರೆಂಬ ಭಾವನೆಯಿಂದ ಭೇಟಿಯಾದೆ. ಇದರಲ್ಲಿ ರಾಜಕೀಯ ಪ್ರೇರಿತ ಇದೆ. ವಿನಯ ಕುಲಕರ್ಣಿ ಅಮಾಯಕರಾಗಿದ್ದಾರೆ ಎಂದರು.

ಬಹಳ ವರ್ಷಗಳಿಂದ ಅವರು ನಂಗೆ ಪರಿಚಿತರು ವಿನಯ, ಸೀದಾ ಸಾದಾ ವ್ಯಕ್ತಿ ರಾಜಕೀಯವಾಗಿ ಅವರನ್ನು ಈ ಕೇಸ್‌ನಲ್ಲಿ ಸಿಲುಕಿಸಿದ್ದಾರೆ. ಬಿಜೆಪಿ ಸರ್ಕಾರ ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ ಎಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸಂವಿಧಾನಿಕ ಸಂಸ್ಥೆಗಳನ್ನೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು‌ ದೂರಿದರು.

ಸಿದ್ದು ಸವದಿ‌ ಮಹಿಳೆಯರನ್ನು ಎಳೆದಾಡಿದ ವಿಚಾರಕ್ಕೆ ಮಾತನಾಡಿದ ಅವರು, ಎಲ್ಲಿ ಮಹಿಳೆಯರನ್ನು ಗೌರವಯುತ ಕಾಣುತ್ತಾರೆ ಅಲ್ಲಿ ಶಾಂತಿ ನೆಲೆಸುತ್ತದೆ. ಶಿಸ್ತು, ಪರಂಪರೆ, ಸಂಸ್ಕೃತಿ ಕಾಪಾಡುವ ಪಕ್ಷ ಅಂತ ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ನರೇಂದ್ರ ‌ಮೋದಿ ಭೇಟಿ ಪಡಾವೋ, ಭೇಟಿ ಬಚಾವೋ ಅಂತಾರೆ ಆದರೆ ಸಿದ್ದು ಸವದಿ ಹೀಗೆ ಮಾಡಿದ್ದಾರೆ ಎಂದು ಹರಿಹಾಯ್ದರು.

ಚುನಾಯಿತ ಪ್ರತಿನಿಧಿ ಮಹಿಳೆಯನ್ನೇ ಎಳೆದಾಡಿದ್ದಾರೆ. ಈ ಘಟನೆ ನಿಜವಾಗಿಯೂ ಖಂಡನೀಯ ಈ ಬಗ್ಗೆ ಬಾಗಲಕೋಟೆ ಎಸ್ಪಿ ಜೊತೆ ನಾನು ಮಾತನಾಡಿದ್ದೇನೆ ನಾಮಪತ್ರ ಸಲ್ಲಿಸಿದವರನ್ನೇ ರಕ್ಷಣೆ ಮಾಡಿ ಒಳಗೆ ಬಿಟ್ಟಿಲ್ಲ ಮತದಾನ ಮಾಡುವ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದರು.

ಸಿದ್ದು ಸವದಿಯದ್ದು ಪೈಶಾಚಿಕ‌ ಕೃತ್ಯ, ಇಡೀ ನಾಗರಿಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತಹುದು. ಬಾಯಿಯಲ್ಲಿ ಮಾತ್ರ ಸಂಸ್ಕೃತಿ, ಪರಂಪರೆಯ ವಾರಸುದಾರರು ಅಂತಾರೆ. ಆದರೆ, ಕೃತಿಯಲ್ಲಿ ಅದಕ್ಕೆ ತದ್ವಿರುದ್ಧವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.