ETV Bharat / state

ಛಬ್ಬಿ ಗಣಪತಿಗೂ ತಟ್ಟಿದ ಕೊರೊನಾ ಬಿಸಿ: ಸರಳ ಆಚರಣೆಗೆ ಗ್ರಾ.ಪಂಚಾಯತಿ ಠರಾವ್

author img

By

Published : Sep 9, 2021, 9:33 PM IST

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಛಬ್ಬಿ ಗಣೇಶ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಕುಲಕರ್ಣಿ ಕುಟುಂಬದವರೇ ಸರಳವಾಗಿ ಮೂರು ದಿನಗಳವರೆಗೆ ಗಣೇಶನನ್ನು ಪ್ರತಿಷ್ಠಾಪಿಸಿ ವಿಸರ್ಜನೆ ಮಾಡಬೇಕು. ಅಲ್ಲದೆ, ಗ್ರಾಮಸ್ಥರಿಗೆ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನಕ್ಕೆ ಅವಕಾಶ ಮಾಡಲಾಗುವುದು ಎಂಬ ನಿರ್ಧಾರವಾಗಿದೆ.

chabbi-ganesh
ಛಬ್ಬಿ ಗಣಪತಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಇತಿಹಾಸ ಪ್ರಸಿದ್ಧ ಛಬ್ಬಿ ಗಣೇಶನಿಗೂ ಕೋವಿಡ್​​ ಬಿಸಿ ತಟ್ಟಿದ್ದು, ಈ ಬಾರಿ ಉತ್ಸವ ಕುಲಕರ್ಣಿ ಕುಟುಂಬಕ್ಕೆ ಮಾತ್ರ ಸೀಮಿತಗೋಳಿಸಿ ಗ್ರಾಮ ಪಂಚಾಯತಿ ಠರಾವ್ ಪಾಸ್ ಮಾಡಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಸಲ್ಲಿಸಿದೆ.

chabbi-ganesh
ಗ್ರಾ.ಪಂ. ಠರಾವ್ ಪ್ರತಿ

ಪ್ರತಿ ವರ್ಷ ಛಬ್ಬಿ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು. ಗಣೇಶ ಚತುರ್ಥಿಯಿಂದ ಮೂರು ದಿನಗಳ ಕಾಲ ಕುಲಕರ್ಣಿ ಮನೆತನದವರು ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರು. ಮಹಾರಾಷ್ಟ್ರ, ಗೋವಾ, ಆಂಧ್ರ ಸೇರಿದಂತೆ ಅನ್ಯ ರಾಜ್ಯಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ವಿಘ್ನೇಶ್ವರನ ದರ್ಶನ ಪಡೆಯುತ್ತಿದ್ದರು.

ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಛಬ್ಬಿ ಗಣೇಶ ಉತ್ಸವ ಕುಲಕರ್ಣಿ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಕುಲಕರ್ಣಿ ಕುಟುಂಬ ಮನೆಯಲ್ಲಿಯೇ ಸರಳವಾಗಿ ಮೂರು ದಿನಗಳವರೆಗೆ ಗಣೇಶನನ್ನು ಪ್ರತಿಷ್ಠಾಪಿಸಿ ಗ್ರಾಮಸ್ಥರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿಘ್ನೇಶ್ವರನ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಸಾರ್ವಜನಿಕರ ಗ್ರಾಮ ಪ್ರವೇಶಕ್ಕೆ ತಡೆ ನೀಡುವಂತೆ ಪೊಲೀಸ್ ಇಲಾಖೆಗೆ ಗ್ರಾಮ ಪಂಚಾಯಿತಿ ಮನವಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.