ETV Bharat / state

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಕುಸ್ತಿ ಶುರುವಾಗಿದೆ: ಕಾರಜೋಳ

author img

By

Published : Jun 22, 2021, 4:56 PM IST

ಕಾಂಗ್ರೆಸ್​ನಲ್ಲಿ ಈಗಲೇ ಸಿಎಂ ಕುರ್ಚಿಗಾಗಿ ಕುಸ್ತಿ ಶುರುವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ನಮ್ಮಲ್ಲಿ ಪೂರ್ಣಾವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ನಮ್ಮ ಪಕ್ಷದ ಮುಖಂಡರು ತಮ್ಮ ಸ್ವಂತ ಕೆಲಸಗಳಿಗೆ ದೆಹಲಿಗೆ ಹೊರಟಿದ್ದಾರೆ. ರಾಜೀನಾಮೆ ಬಗ್ಗೆ ರಮೇಶ್ ಜಾರಕಿಹೊಳಿ ಎಲ್ಲಿಯೂ ಹೇಳಿಲ್ಲ ಎಂದು ಕಾರಜೋಳ ಸ್ಪಷ್ಟಪಡಿಸಿದರು.

Govinda-karajola
ಡಿಸಿಎಂ ಗೋವಿಂದ ಕಾರಜೋಳ

ಧಾರವಾಡ: ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ಮುಕ್ಕಾಲು ವರ್ಷ ಸಮಯ ಇದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಬಹುಮತ ಬಂದವರು ಸಿಎಂ ಆಗ್ತಾರೆ. ಆದ್ರೆ ವಿಪರ್ಯಾಸ ಎಂಬಂತೆ ಈಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮಧ್ಯೆ ಸಿಎಂ ಕುರ್ಚಿಗಾಗಿ ಕುಸ್ತಿ ಶುರುವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕುಟುಕಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧ್ಯದಲ್ಲಿ ಒಬ್ಬರು ಇಣುಕುತ್ತಿದ್ದಾರೆ. ಇದರ ಮಧ್ಯೆ ಪರಮೇಶ್ವರ ಅವರು ಕಷ್ಟದ ದಿನಗಳಲ್ಲಿ ಅಧ್ಯಕ್ಷರಾಗಿದ್ದರು, ಸಿಎಂ ಆಗಬೇಕು ಎನ್ನುವಾಗಲೇ ಸೋಲಿಸಿದ್ದರು. ಈಗ ಅವರು ಮತ್ತೆ ಸಿಎಂ ಆಗೋ ಚಿಂತನೆಯಲ್ಲಿದ್ದಾರೆ. ನಮ್ಮಲ್ಲಿ ಪೂರ್ಣಾವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿ. ನಮ್ಮ ಪಕ್ಷದ ಮುಖಂಡರು ತಮ್ಮ ಸ್ವಂತ ಕೆಲಸಗಳಿಗೆ ದೆಹಲಿಗೆ ಹೊರಟಿದ್ದಾರೆ. ರಾಜೀನಾಮೆ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವಿಸ್​ ಅವರಿಗೆ ರಮೇಶ್​ ಜಾರಕಿಹೊಳಿ ಮೊದಲಿನಿಂದಲೂ ಪರಿಚಯ. ಹಾಗಾಗಿ ಅವರು ಆಗಾಗ್ಗೆ ಭೇಟಿಯಾಗುತ್ತಲೇ ಇರ್ತಾರೆ. ಬೆಳಗಾವಿಯಲ್ಲಿದ್ದವರಿಗೆ ಮಹಾರಾಷ್ಟ್ರ ಸಂಪರ್ಕ ಜಾಸ್ತಿ. ಬೆಳಗಾವಿ ರಾಜಕೀಯ ನಾಯಕರು ಮಹಾರಾಷ್ಟ್ರ ರಾಜಕೀಯ ನಾಯಕರನ್ನು ಭೇಟಿಯಾಗುತ್ತಾರೆ ಎಂದು ಕಾರಜೋಳ ಸಮರ್ಥಿಸಿಕೊಂಡರು.

ಓದಿ: ಸಿಡಿ ಕೇಸ್ ಪಿಐಎಲ್ ವಿಚಾರಣೆಗೆ ಅರ್ಹವಲ್ಲ: ಜಾರಕಿಹೊಳಿ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.