ETV Bharat / state

ಹೋಟೆಲ್​​​​​​ನಲ್ಲಿ ತಂಗುವ ಅತಿಥಿಗಳಿಗೆ ಆರ್​​ಟಿಪಿಸಿಆರ್​ ಕಡ್ಡಾಯ: ಧಾರವಾಡ ಡಿಸಿ

author img

By

Published : Aug 3, 2021, 8:52 PM IST

ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ, ಧಾರವಾಡ ಜಿಲ್ಲೆ ಪ್ರವೇಶಕ್ಕೆ ಕೋವಿಡ್​ ನೆಗೆಟಿವ್​​ ವರದಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೂ ಸಹ ಈ ಸೂಚನೆ ಅನ್ವಯವಾಗುತ್ತದೆ ಎಂದು ಹೇಳಿದರು.

rtpcr-is-mandatory-for-guests-staying-in-hotels-at-dharwad
ಧಾರವಾಡ ಡಿಸಿ

ಧಾರವಾಡ: ಪಕ್ಕದ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ನಗರದ ಹೋಟೆಲ್​​​​​ಗಳಲ್ಲಿ ತಂಗುವ ಕೇರಳ ಹಾಗೂ ಮಹಾರಾಷ್ಟ್ರ ನಿವಾಸಿಗಳಿಗೆ ಕೋವಿಡ್​​ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ಹೇಳಿದ್ದಾರೆ.

ಹೋಟೆಲ್​​​​​ನಲ್ಲಿ ತಂಗುವ ಅತಿಥಿಗಳಿಗೆ ಆರ್​​ಟಿಪಿಸಿಆರ್​ ಕಡ್ಡಾಯ

ಈ‌ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆರ್​ಟಿಪಿಸಿಆರ್​​ ವರದಿ ತರಬೇಕು. ಟಿಕೆಟ್ ಕೊಡುವ ಮುಂಚೆಯೇ ವರದಿ ಪಡೆಯಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಮೂರನೇ ಅಲೇ ತಡೆಗಟ್ಟುವಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಮಹಾರಾಷ್ಟ್ರದಿಂದ ಬಂದ ಐದು ಜನರಿಗೆ ಕೋವಿಡ್​ ಪಾಸಿಟಿವ್ ಬಂದಿದೆ.‌ ಸದ್ಯ ಅವರು ಹೋಮ್ ಐಸೊಲೆಷನದಲ್ಲಿ ಇದ್ದಾರೆ. ಹೀಗಾಗಿ ಹೊರ ರಾಜ್ಯದಿಂದ ಬರುವವರಿಗೆ ಆರ್​.ಟಿ.ಪಿ.ಸಿ.ಆರ್ ವರದಿ ಕಡ್ಡಾಯ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.