ETV Bharat / state

ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣ: ಮತ್ತಿಬ್ಬರ ಬಂಧನ

author img

By

Published : Aug 21, 2020, 9:14 AM IST

ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರ.

ರೌಡಿಶೀಟರ್ ಫ್ರೂಟ್ ಇರ್ಫಾನ್
ರೌಡಿಶೀಟರ್ ಫ್ರೂಟ್ ಇರ್ಫಾನ್

ಹುಬ್ಬಳ್ಳಿ: ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ ಏಳಕ್ಕೇರಿದಂತಾಗಿದೆ. ಈ ನಡುವೆ ಬಂಧಿತರಿಬ್ಬರು ಬಚ್ಚಾಖಾನ್ ಸಹಚರರು ಎನ್ನಲಾಗಿದೆ.

ಮೈಸೂರಿನ ಶಿವರಾತ್ರಿಶೇಶ್ವನಗರದ ಬನ್ನಿಮಂಟಪ ಲೇಔಟ್​​ನ ಶಹಜಾನ ಕೆ.ಆಶ್ರಫ್ (24) ಹಾಗೂ ಮೈಸೂರಿನ ಗಾಂಧಿನಗರದ ಸೈಯದ್ ಸೋಹೈಲ್ ಪೀರ ಸೈಯದ್​ ಆಜೀಮ್​ ಪೀರ (22) ಬಂಧಿತರು. ಬಂಧಿತರಿಂದ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.