ETV Bharat / state

ರಾಜಕಾರಣ ಹೊಲಸಾಗಿದೆ.. ಮೌಲ್ಯಗಳನ್ನು ಕಳೆದುಕೊಂಡಿದೆ: ಹೆಚ್.ವಿಶ್ವನಾಥ್​​ ಅಸಮಾಧಾನ

author img

By

Published : Jan 31, 2023, 1:18 PM IST

ರಾಜಕಾರಣ ಮೌಲ್ಯವನ್ನು ಕಳೆದುಕೊಂಡಿದೆ - ಹುಬ್ಬಳ್ಳಿಯಲ್ಲಿ ಹೆಚ್​ ವಿಶ್ವನಾಥ್​​ ಹೇಳಿಕೆ - ರಾಜಕಾರಣಿಗಳು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ

Etv Bharatpolitics-lost-its-credibility-says-mlc-h-vishwanath
Etv ರಾಜಕಾರಣ ಹೊಲಸಾಗಿದೆ..ಮೌಲ್ಯಗಳನ್ನು ಕಳೆದುಕೊಂಡಿದೆ : ಹೆಚ್.ವಿಶ್ವನಾಥ್​​ ಅಸಮಾಧಾನ

ರಾಜಕಾರಣ ಹೊಲಸಾಗಿದೆ..ಮೌಲ್ಯಗಳನ್ನು ಕಳೆದುಕೊಂಡಿದೆ : ಹೆಚ್.ವಿಶ್ವನಾಥ್​​ ಅಸಮಾಧಾನ

ಹುಬ್ಬಳ್ಳಿ: ಇಂದು ರಾಜಕಾರಣ ಮೌಲ್ಯವನ್ನು ಕಳೆದುಕೊಂಡು ಹೊಲಸು ಹಿಡಿದಿದೆ. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ತಾಕತ್ ಧಮ್ ಇದೆಯಾ ಎಂದೆಲ್ಲ ಮಾತನಾಡುತ್ತಾರೆ. ಎಲ್ಲಿಗೆ ಹೋಗಿದೀವಿ ನಾವು, ರಾಜಕಾರಣಿಗಳು ಕನ್ನಡ ಭಾಷೆ ಕೊಲ್ಲುತ್ತಿದ್ದಾರೆ ಎಂದು ಎಂಎಲ್​ಸಿ ಹೆಚ್.ವಿಶ್ವನಾಥ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 50 ವರ್ಷದಿಂದ ರಾಜಕಾರಣ ನೋಡಿದ್ದೇನೆ. ರಾಜಕಾರಣ ಹೊಲಸಾಗಿದೆ, ಇದು ರಿಪೇರಿ ಆಗಲೇಬೇಕು. ಇವತ್ತು ಚುನಾವಣೆ ಕೂಡಾ ಹಾಗೆ ಆಗಿದೆ. ಚುನಾವಣೆ ಅಂದರೆ ಎಷ್ಟು ದುಡ್ಡು ಇದೆ ಎಂದು ಕೇಳುತ್ತಾರೆ. ಇವತ್ತು ಪಕ್ಷಕ್ಕಿಂತ ಪಕ್ಷದ ನಾಯಕರು ದೊಡ್ಡವರಾಗಿದ್ದಾರೆ. ಮೊದಲು‌ ಪಕ್ಷ ಎಂಬುದು ದೊಡ್ಡದಿತ್ತು. ಇವತ್ತು ನಾಯಕರ ರಾಜಕಾರಣ ಆಗಿದೆ. ಇದು ಮಾರಕ ಎಂದು ಅಭಿಪ್ರಾಯಪಟ್ಟರು

’ರಮೇಶ್ ಜಾರಕಿಹೊಳಿ ಮಾತನಾಡುತ್ತಿರುವುದು ಸರಿಯಲ್ಲ‘- ವಿಶ್ವನಾಥ್​ : ರಮೇಶ್​ ಜಾರಕಿಹೊಳಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ವಿಚಾರವಾಗಿ ಮಾತನಾಡಿ, ಯಾರೂ ಯಾರನ್ನೂ ಮುಗಿಸೋಕೆ ಆಗಲ್ಲ. ಅದನ್ನು ಜಾರಕಿಹೊಳಿ ಹೇಳಬಾರದು. ಜನ ಮುಖ್ಯ, ಜನ ಏನು ಬೇಕಾದರೂ ಮಾಡಬಹುದು. ನಾವು ಏನು ಮಾಡೋಕೂ ಆಗಲ್ಲ ಜಾರಕಿಹೊಳಿ ಕುಟುಂಬಕ್ಕೂ ಈ ರೀತಿ ಮಾಡೋದು ಗೌರವ ಅಲ್ಲ ಎಂದರು. ರಮೇಶ್ ಜಾರಕಿಹೊಳಿ ಮಾತನಾಡುತ್ತಿರುವುದು ಸರಿಯಲ್ಲ. ನಾವೆಲ್ಲರೂ ಒಟ್ಟಿಗೆ ಇದ್ದವರು. ನಾವೆಲ್ಲ ಬಿಜೆಪಿ ಬಂದು ಬಿಜೆಪಿ ಸರ್ಕಾರ ತಂದಿದ್ದೇವೆ. ಇವರೆಲ್ಲ ಯಡವಟ್ಟು ಗಿರಾಕಿ. ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ. ಶಾಲೆಗೆ ಕಾವಿ ಬಣ್ಣ ಹೊಡೆಯೋದು ಯೋಜನೆನಾ. ಈ ಸರ್ಕಾರದಲ್ಲಿ ಬರೀ ದುಡ್ಡು ದುಡ್ಡು, ಇದು ಸರ್ಕಾರಾನಾ..? ಎಂದು ಪ್ರಶ್ನಿಸಿದರು.

’ಚುನಾವಣೆ ಪ್ರಜಾಪ್ರಭುತ್ವದ ಆತ್ಮ’: ವಿಧಾನಸಭೆ ಚುನಾವಣೆ ಸಂಬಂಧ ಮಾತನಾಡಿ, ಯಡಿಯೂರಪ್ಪ ನಮ್ಮ‌ ಮ್ಯಾಜಿಕ್ ನಂಬರ್​​ 150 ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ 115 ನಮ್ಮ ಮ್ಯಾಜಿಕ್ ನಂಬರ್​ ಎಂದು ಹೇಳುತ್ತಾರೆ. ಕುಮಾರಸ್ವಾಮಿ 123 ಎಂದು ಹೇಳುತ್ತಾರೆ. ಯಾರಪ್ಪ ನೀವು. ಹುಚ್ಚರ ರೀತಿ ನೀವೇ ನಂಬರ್ ಕೊಡುತ್ತಿದ್ದೀರಾ ಎಂದು ಲೇವಡಿ ಮಾಡಿದರು. ಚುನಾವಣೆ ಪ್ರಜಾಪ್ರಭುತ್ವದ ಆತ್ಮ. ಆದರೆ, ಅಯೋಗ್ಯ ಬಿಜೆಪಿ ಸರ್ಕಾರ ಈ ಆತ್ಮವನ್ನೆ ಕಸಿಯುತ್ತಿದೆ. ಮತದಾರರ ಹೆಸರನ್ನು ತೆಗೆದು ಹಾಕಿ ಪ್ರಜಾಪ್ರಭುತ್ವದ ಆತ್ಮವನ್ನು ಕಸಿಯುತ್ತಿದೆ ಎಂದು ಟೀಕಿಸಿದರು.

ರಾಜಕಾರಣಿಗಳು ಈಗ ರೌಡಿಗಳಂತೆ ವರ್ತಿಸುತ್ತಿದ್ದಾರೆ -ವಿಶ್ವನಾಥ್ : 40 ಪರ್ಸೆಂಟ್ ಕಮಿಷನ್​ ವಿಚಾರವಾಗಿ ಪ್ರತಿಕ್ರಿಯಿಸಿದ ವಿಶ್ವನಾಥ್, ನೀನು ಕದ್ದಿಲ್ವಾ, ನೀನು ಕದ್ದಿಲ್ವಾ ಎಂದು ಪರಸ್ಪರ ಮಾತನಾಡುತ್ತಾರೆ. ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳು ಗಲ್ಲಿ ರೌಡಿಗಳ ರೀತಿ ವರ್ತಿಸುತ್ತಿದ್ದಾರೆ. ಇದು ನಮೆಗಲ್ಲ ಆದರ್ಶನಾ. ರಾಜಕೀಯ ನಾಯಕರು ತಮ್ಮ ಮೌಲ್ಯ ಕಳೆದುಕೊಂಡಿದ್ದಾರೆ. ನನ್ನನ್ನು ಸೇರಿಸಿ ಎಲ್ಲರೂ ಮೌಲ್ಯ ಕಳೆದುಕೊಂಡಿದ್ದಾರೆ. ಮೌಲ್ಯ ಕಳೆದುಕೊಂಡ ಮೇಲೆ ಯಾರ ಮನೆ ಮುಂದೆ ನಿಲ್ತೀರಿ ನೀವು ಎಂದು ಪ್ರಶ್ನಿಸಿದರು.

ಚುನಾವಣೆಗೆ ನಿಲ್ಲಲ್ಲ ಎಂದ ವಿಶ್ವನಾಥ್ : ಟಿಕೆಟ್ ಗೆ ಹತ್ತು ಕೋಟಿ ಕೊಡುತ್ತೇವೆ ಎಂದು ಹೇಳಿದ್ದಾರೆ. ನಾವೆಲ್ಲ ಚುನಾವಣೆಗೆ ನಿಲ್ಲೋಕೆ ಆಗಲ್ಲ. ಇವತ್ತು ಸೇವಾ ರಾಜಕಾರಣ ಹೋಯ್ತು. ಕಾಂಗ್ರೆಸ್ ನಮ್ಮ ತಾಯಿ, ನಾನು ಯಾವ ಪಾರ್ಟಿ ತೆಗಳೋಕೆ ಹೋಗಲ್ಲ. ಎಲ್ಲ ಪಕ್ಷಗಳು ಚೆನ್ನಾಗಿವೆ. ಆದರೆ ಅದನ್ನು ನಡೆಸುವವರು ಸರಿ‌ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ : ಕ್ಷೇತ್ರ ವಿಚಾರದಲ್ಲಿ ಸಿದ್ದರಾಮಯ್ಯ ನಡೆ ಇನ್ನೂ ನಿಗೂಢ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.