ETV Bharat / state

Vande Bharat: ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿಯಿಂದ ಚಾಲನೆ: ಪ್ರಯಾಣದ ದರ ಎಷ್ಟು ಗೊತ್ತಾ?

author img

By

Published : Jun 27, 2023, 8:25 AM IST

Updated : Jun 27, 2023, 9:13 AM IST

Vande Bharat fair: ಬೆಂಗಳೂರು ಧಾರವಾಡ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಿಲಿದ್ದಾರೆ.

ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು
ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಬಹುನಿರೀಕ್ಷಿತ ವಂದೇ ಭಾರತ್​ ಎಕ್ಸ್​​ಪ್ರೆಸ್​ (Vande Bharat Express) ರೈಲಿಗೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಭೂಪಾಲ್​ ರೈಲು ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಕಾರ್ಯಕ್ರಮದ ಮೂಲಕ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇದರೊಂದಿಗೆ ಇತರೆ ನಾಲ್ಕು ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೂ ಚಾಲನೆ ನೀಡಲಿದ್ದಾರೆ.

ಧಾರವಾಡ ರೈಲು ನಿಲ್ದಾಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್​ಚಂದ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಲಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ವರ್ಚುಯಲ್​ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 9.15ರ ಸುಮಾರಿಗೆ ನರೇಂದ್ರ ಮೋದಿ ವಂದೇ ಭಾರತ ಎಕ್ಸ್​​​ಪ್ರೆಸ್​​ಗೆ ಚಾಲನೆ ನೀಡಲಿದ್ದಾರೆ.

ವಂದೇ ಭಾರತ್​ ರೈಲು ವೇಳಾ ಪಟ್ಟಿ ದರದ ವಿವರ
ವಂದೇ ಭಾರತ್​ ರೈಲು ವೇಳಾ ಪಟ್ಟಿ ದರದ ವಿವರ

Vande Bharat Express Time Table ಬೆಂಗಳೂರು ಧಾರವಾಡ ವಂದೇ ಭಾರತ್​ ರೈಲು ವೇಳಾಪಟ್ಟಿ : ಈ ರೈಲು ಪ್ರತಿ ಮಂಗಳವಾರ ಹೊರತುಪಡಿಸಿ, ವಾರದ ಆರು ದಿನವೂ ಸಂಚಾರ ನಡೆಸಲಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಡುವ ವಂದೇ ಭಾರತ ಎಕ್ಸ್​​ಪ್ರೆಸ್​​, 5.55ಕ್ಕೆ ಯಶವಂತಪುರ, 9.15 ಕ್ಕೆ ದಾವಣಗೆರೆ, 11.30ಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ (ಎಸ್‌ಎಸ್ಎಸ್) ಹುಬ್ಬಳ್ಳಿ, ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪುವುದು.

ಧಾರವಾಡ ನಿಲ್ದಾಣದಿಂದ ಮಧ್ಯಾಹ್ನ 1.15 ಕ್ಕೆ ಹೊರಡುವ ಈ ರೈಲು, 1.35ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಆಗಮಿಸಲಿದ್ದು, 3.38ಕ್ಕೆ ದಾವಣಗೆರೆ, ರಾತ್ರಿ 7.13ಕ್ಕೆ ಯಶವಂತಪುರ ಹಾಗೂ 7.45ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಈ ಎರಡು ನಗರಗಳ ನಡುವಿನ ಪ್ರಯಾಣದ ಸಮಯ 6.15 ನಿಮಿಷ ಆಗಿರಲಿದೆ. ಕೆಎಸ್‌ಆ‌ರ್​ ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲು ಸದ್ಯ 8 ಬೋಗಿಗಳೊಂದಿಗೆ ಸಂಚಾರ ಮಾಡಲಿದೆ.

ಟಿಕೆಟ್​ ದರದ ವಿವರ

  • ಬೆಂಗಳೂರು to ಧಾರವಾಡಕ್ಕೆ Ac Chair Car ದರ ರೂ. 1165, ಎಕ್ಸಿಕ್ಯುಟೀವ್​ ಕ್ಲಾಸ್​ ದರ ರೂ. 2010 ಇರಲಿದೆ.
  • ಬೆಂಗಳೂರು to ದಾವಣಗೆರೆ Ac Chair Car ದರ ರೂ. 915, ಎಕ್ಸಿಕ್ಯುಟೀವ್​ ಕ್ಲಾಸ್​ ದರ ರೂ.1740 ಇರಲಿದೆ.
  • ಧಾರವಾಡ to ಬೆಂಗಳೂರು Ac Chair Car ದರ ರೂ. 1330, ಎಕ್ಸಿಕ್ಯುಟೀವ್​ ಕ್ಲಾಸ್​ ದರ ರೂ.2440 ಇರಲಿದೆ.
  • ಧಾರವಾಡ to ಯಶವಂತಪುರ Ac Chair Car ದರ ರೂ. 1340, ಎಕ್ಸಿಕ್ಯುಟೀವ್​ ಕ್ಲಾಸ್​ ದರ ರೂ.2440 ಇರಲಿದೆ.

ಇತರೆ ನಾಲ್ಕು ವಂದೇ ಭಾರತ್​ ರೈಲಿಗೂ ಚಾಲನೆ

  • ರಾಣಿ ಕಮಲಾಪತಿ ರೈಲು ನಿಲ್ದಾಣ, ಭೂಪಾಲ್​ to ಜಬಲ್​ಪುರ್​
  • ಖಜೂರಾಹೊ-ಭೂಪಾಲ್​-ಇಂದೋರ್​
  • ಮಡಗಾವ್​, ಗೋವ to ಮುಂಬೈ
  • ಹತಿಯಾ - ಪಾಟ್ನಾ ರೈಲುಗಳಿಗೂ ಇಂದು ಚಾಲನೆ ಸಿಗಲಿದೆ.

ಇದನ್ನೂ ಓದಿ: Vande Bharat train: ವಂದೇ ಭಾರತ್ ರೈಲು ಹುಬ್ಬಳ್ಳಿ ಆಗಮನಕ್ಕೆ ದಿನಗಣನೆ: ಎಸ್​ಡಬ್ಲ್ಯೂಆರ್ ಕೈ ಸೇರದ ಅಧಿಕೃತ ಮಾಹಿತಿ

Last Updated : Jun 27, 2023, 9:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.