ETV Bharat / state

ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ ಯುವಕನನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

author img

By

Published : Jul 29, 2020, 1:51 AM IST

ಕೃಷ್ಣ ನಗರದ ನಿವಾಸಿಯಾದ ಯುವಕನನ್ನು ಜನನಿಬಿಡ ಪ್ರದೇಶದಲ್ಲಿ, ನಾಲ್ಕೈದು ಯುವಕರ ಗುಂಪು ಬೈಕ್​ನಲ್ಲಿ ಬಂದು, ಅಟ್ಟಾಡಿಸಿ ಚಾಕುವಿನಿಂದ ಹಿರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

Murder of young man in hubli
ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ ಯುವಕನ ಕೊಲೆ

ಹುಬ್ಬಳ್ಳಿ: ನಡುರಸ್ತೆಯಲ್ಲಿಯೇ ಯುವಕನನ್ನು ಅಟ್ಟಾಡಿಸಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ಕೃಷ್ಣ ನಗರದಲ್ಲಿ ನಡೆದಿದೆ.

ಲೋಕೇಶ್ ಕಡೆಮನಿ ಕೊಲೆಯಾದ ಯುವಕ. ಕೃಷ್ಣ ನಗರದ ನಿವಾಸಿಯಾದ ಈತನನ್ನು ಜನನಿಬಿಡ ಪ್ರದೇಶದಲ್ಲಿ ನಾಲ್ಕೈದು ಯುವಕರ ಗುಂಪು ಬೈಕ್​ನಲ್ಲಿ ಬಂದು, ಅಟ್ಟಾಡಿಸಿ ಚಾಕುವಿನಿಂದ ಹಿರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಯುವಕನನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

ಇನ್ನು ಲೋಕೇಶ್​ ಕೆಲ ದಿನಗಳಿಂದ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ‌ಹಳೇ ವೈಷಮ್ಯ ಅಥವಾ ಕ್ಷುಲಕ ‌ಕಾರಣಕ್ಕೆ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಉಪನಗರ ಠಾಣೆಯಲ್ಲಿ‌ ‌ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.