ETV Bharat / state

ಘನತ್ಯಾಜ್ಯ ನಿರ್ವಹಣಾ ಘಟಕ‌ ಉದ್ಘಾಟಿಸಿದ ಸಚಿವ ಜಗದೀಶ್ ಶೆಟ್ಟರ್

author img

By

Published : Jul 15, 2020, 3:28 PM IST

ಹುಬ್ಬಳ್ಳಿಯ ನಂದಿನಿ ಲೇಔಟ್‌ನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ವೈಜ್ಞಾನಿಕ ತ್ಯಾಜ್ಯ ಸಂಗ್ರಹಣಾ ಮತ್ತು ಸಂಸ್ಕರಣಾ ಘಟಕವನ್ನು ಬೃಹತ್ ಮತ್ತು ಮಧ್ಯಮ ಕ್ಯೆಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು.

Jagadish
Jagadish

ಹುಬ್ಬಳ್ಳಿ: ಹು-ಧಾರವಾಡ ಮಹಾನಗರ ಪಾಲಿಕೆಯ ಸಮಗ್ರ ಘನತ್ಯಾಜ್ಯ ನಿರ್ವಹಣೆ ಯೋಜನೆಯ ಭಾಗವಾಗಿ ಹುಬ್ಬಳ್ಳಿಯ ನಂದಿನಿ ಲೇಔಟ್‌ನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ದ್ವಿತೀಯ ಹಂತದ ವೈಜ್ಞಾನಿಕ ತ್ಯಾಜ್ಯ ಸಂಗ್ರಹಣಾ ಮತ್ತು ಸಂಸ್ಕರಣಾ ಘಟಕವನ್ನು ಬೃಹತ್ ಮತ್ತು ಮಧ್ಯಮ ಕ್ಯೆಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು.

ಈ ಘಟಕದಲ್ಲಿ ಒಟ್ಟು 5 ವಾರ್ಡ್‌ಗಳಿಂದ ಅಂದಾಜು 22,585 ಮನೆಗಳಿಂದ ಸುಮಾರು 47 ಟನ್ ಸಾಮರ್ಥ್ಯದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿಗೆ ಕ್ರಮ ವಹಿಸಲಾಗುತ್ತದೆ. ಇದರೊಂದಿಗೆ ಸಮಗ್ರ ಘನತ್ಯಾಜ್ಯ ನಿರ್ವಹಣೆ ಯೋಜನೆಯಲ್ಲಿ ಅನುಮೋದನೆಗೊಂಡ ಹುಬ್ಬಳ್ಳಿಯ ವಿಭಾಗದ 4 ಸ್ಟೇಷನರಿ ಕಂಪ್ಯಾಕ್ಟರ್ ಸ್ಟೇಷನ್‌ಗಳು ಕೂಡಾ ಕಾರ್ಯಾರಂಭಗೊಂಡಂತಾಗಿದೆ.

ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತ ಡಾ. ಸುರೇಶ್ ಇಟ್ನಾಳ, ಪಾಲಿಕೆಯ ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಪಾಲಿಕೆಯ ಅಧೀಕ್ಷಕ ಅಭಿಯಂತರ ಇ.ತಿಮ್ಮಪ್ಪ, ಘನತ್ಯಾಜ್ಯ ವಸ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ್ ಆರ್, ಪಾಲಿಕೆಯ ಎಲ್ಲಾ ವಿಭಾಗಗಳ ಕಾರ್ಯನಿರ್ವಾಹಕ ಅಭಿಯಂತರ ವಲಯ ಕಚೇರಿ ಸಹಾಯಕ ಆಯುಕ್ತ ಎಸ್. ಸಿ. ಬೇವೂರ್, ಪಾಲಿಕೆಯ ಎಲ್ಲಾ ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಪಾಲಿಕೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.