ETV Bharat / state

ಮಸೀದಿ ಮೈಕ್ ತೆರವಿಗೆ ಅಕ್ಬೋಬರ್ 7ರಿಂದ ಆಂದೋಲನ: ಮುತಾಲಿಕ್​

author img

By

Published : Sep 30, 2021, 5:25 PM IST

ಆಸ್ಪತ್ರೆ, ದೇವಾಲಯ, ಮಸೀದಿ, ಚರ್ಚ್.. ಹೀಗೆ ಅನೇಕ ಪ್ರದೇಶಗಳನ್ನು ನಿಶಬ್ದ ವಲಯಗಳು ಎಂದು ಘೋಷಿಸಲಾಗಿದೆ. ಪ್ರಾರ್ಥನೆ, ಭಜನೆ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಶಬ್ದಮಾಲಿನ್ಯದ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ- ಪ್ರಮೋದ್ ಮುತಾಲಿಕ್

pramod-muthalik
ಪ್ರಮೋದ್ ಮುತಾಲಿಕ್​

ಹುಬ್ಬಳ್ಳಿ: ಮಸೀದಿಗಳಲ್ಲಿ ನಮಾಜ್ ಮಾಡುವುದರಿಂದ ಸಾಕಷ್ಟು ಶಬ್ದ ಮಾಲಿನ್ಯವಾಗುತ್ತಿದೆ.‌ ಮೈಕ್ ನೀವು ತೆಗೆಯುತ್ತೀರೋ ಅಥವಾ ನಾವು ತೆಗೆಯಬೇಕೋ? ಎಂದು ಸರ್ಕಾರದ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.

'ಮಸೀದಿಗಳ ಮೈಕ್ ತೆರವಿಗೆ ಅ.7ರಿಂದ ಆಂದೋಲನ ಆರಂಭ'​

ನಗರದಲ್ಲಿಂದು ಮಾತನಾಡಿದ ಅವರು, ಇದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. ಶಬ್ದ ಮಾಲಿನ್ಯ ನಿಲ್ಲಿಸುವಂತೆ ಸುಪ್ರೀಂ‌ಕೋರ್ಟ್​ ಆದೇಶ ಹೊರಡಿಸಿ ಈಗಾಗಲೇ 21 ವರ್ಷ ಕಳೆದಿದೆ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೂ ಶಬ್ದ ಮಾಲಿನ್ಯ ಆಗಬಾರದು ಎಂಬ ಆದೇಶವಿದೆ. ಕೋರ್ಟ್‌ ಆದೇಶವಿದ್ದರೂ ಈವರೆಗೂ ಈ ಆದೇಶ ಜಾರಿಯಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಪೊಲೀಸರ ನಿರ್ಲಕ್ಷ್ಯದಿಂದಾಗಿ ಶಬ್ದಮಾಲಿನ್ಯ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರು.

ಆಸ್ಪತ್ರೆ, ದೇವಾಲಯ, ಮಸೀದಿ, ಚರ್ಚ್.. ಹೀಗೆ ಅನೇಕ ಪ್ರದೇಶಗಳನ್ನು ನಿಶಬ್ದ ವಲಯಗಳು ಎಂದು ಘೋಷಿಸಲಾಗಿದೆ. ಪ್ರಾರ್ಥನೆ, ಭಜನೆ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಶಬ್ದಮಾಲಿನ್ಯದ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಅಕ್ಟೋಬರ್ 7 ರಿಂದ ಈ ಮೈಕ್ ತೆರವಿಗೆ ಆಂದೋಲನ ನಡೆಸಲಿದ್ದೇವೆ. ಶೀಘ್ರವೇ ಈ ಶಬ್ದ ಮಾಲಿನ್ಯ ತಡೆಯದಿದ್ದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಮಸೀದಿ ಮುಂದೆಯೇ ನಾವು ಉಗ್ರ ಹೋರಾಟ ನಡೆಸುತ್ತೇವೆ. ಪೊಲೀಸರು ಮಾಡಬೇಕಿರುವ ಕೆಲಸವನ್ನು ನಾವು ಮಾಡಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: 'ದೇವಸ್ಥಾನ ತೆರವು ಮಾಡುವದಿದ್ದರೆ, 21 ವರ್ಷಗಳ ಹಿಂದಿನ ಶಬ್ದಮಾಲಿನ್ಯ ನಿಯಂತ್ರಣ ಆದೇಶ ಪಾಲಿಸಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.