ETV Bharat / state

ಆರ್ಥಿಕ ಸಂಕಷ್ಟದ ನಡುವೆಯೂ ಸಿಎಂ ಜನಪರ ಬಜೆಟ್‌ ಮಂಡಿಸಿದ್ದಾರೆ: ಲಿಂಗರಾಜ ಪಾಟೀಲ

author img

By

Published : Mar 10, 2021, 7:35 PM IST

ಕೋವಿಡ್​ ಸಾಂಕ್ರಾಮಿಕ, ಪ್ರಕೃತಿ ವಿಕೋಪದಂತಹ ಜಟಿಲತೆಯ ಸಮಯದಲ್ಲೂ ಸಿಎಂ ತಮ್ಮ 8ನೇ ಬಜೆಟ್​ ಮಂಡಿಸಿದ್ದು ದಾಖಲೆಯಾಗಿದೆ ಎಂದು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದ್ದಾರೆ.

Lingaraja Patil on state Budget
ರಾಜ್ಯ ಬಜೆಟ್​ ಕುರಿತು ಲಿಂಗರಾಜ ಪಾಟೀಲ ಪ್ರತಿಕ್ರಿಯೆ

ಹುಬ್ಬಳ್ಳಿ : ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಜನಪರ ಬಜೆಟ್‌ ಮಂಡನೆ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.

ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮಹಾಮಾರಿ ಕೊರೊನಾ ಸಾಂಕ್ರಾಮಿಕ ತಂದೊಡ್ದಿದ ಕಠಿಣ ಸವಾಲುಗಳು ಹಾಗೂ ಪ್ರಾಕೃತಿಕ ವಿಕೋಪದಂತಹ ಸರಣಿ ಸಮಸ್ಯೆಗಳು ಕರ್ನಾಟಕದ ಆರ್ಥಿಕತೆಯ ತಳಪಾಯ ಅಲುಗಾಡಿಸಿದ್ದವು. ಇಂತಹ ಜಟಿಲತೆಯ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಅವರು ತಮ್ಮ 8ನೇ ರಾಜ್ಯ ಬಜೆಟ್​ ಮಂಡಿಸಿದ್ದು ದಾಖಲೆಯಾಗಿದೆ ಎಂದರು.

ಇದನ್ನೂ ಓದಿ: ಪ್ರಚಾರಕ್ಕೋಸ್ಕರ ರಾಜಕೀಯ ನಾಯಕರ ಭವಿಷ್ಯ ಹಾಳು ಮಾಡಿದ್ದಾರೆ: ಶಾಸಕ ಸುರೇಶ್ ಗೌಡ

ಧಾರವಾಡ-ಕಿತ್ತೂರು-ಬೆಳಗಾವಿಗೆ ಹೊಸ ರೈಲು ಮಾರ್ಗ ನಿರ್ಮಿಸಲು 927 ಕೋಟಿ ರೂ. ಅನುದಾನ ನೀಡುವ ಮೂಲಕ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್​ ಅಂಗಡಿ ಅವರ ಕನಸನ್ನು ನನಸು ಮಾಡುವಲ್ಲಿ ಸಿಎಂ ಸಫಲರಾಗಿದ್ದಾರೆ. ಜೊತೆಗೆ, ರೈಲು ಮಾರ್ಗಗಳ ಅಭಿವೃದ್ಧಿಗೆ 3,991 ಕೋಟಿ ರೂ. ಘೋಷಣೆ ಕೂಡ ಮಾಡಿದ್ದಾರೆ. ರೈಲು ಮಾರ್ಗಗಳ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದ 2,630 ಕೋಟಿ ರೂ. ಒದಗಿಸಲಾಗುವುದು ಎಂದು ಸಿಎಂ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಕಳಸಾ ಬಂಡೂರಿ ಮಹದಾಯಿ ಯೋಜನೆಗೆ ಕೂಡ ಸಾಕಷ್ಟು ಅನುದಾನ ಮೀಸಲಿರಿಸಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.