ETV Bharat / state

ಕಾರ್ಮಿಕರ ಕೊರತೆಗೆ ಕುಂಟುತ್ತಿರುವ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು..

author img

By

Published : Sep 12, 2020, 2:35 PM IST

ಲಾಕ್‌ಡೌನ್‌ಗೂ ಮೊದಲು 1200ಕ್ಕೂ ಹೆಚ್ಚು ಹೊರ ರಾಜ್ಯದ ಕಾರ್ಮಿಕರು ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಪರಿಣಾಮ ತಮ್ಮ ರಾಜ್ಯಗಳಿಗೆ ತೆರಳಿದ ವಲಸೆ ಕಾರ್ಮಿಕರು ಮರಳಿ ಬಂದಿಲ್ಲ. ವಿವಿಧ ರಾಜ್ಯಗಳ ನುರಿತ ಕಾರ್ಮಿಕರು ಮರಳಿ ಬರದಿರೋದು ಈಗ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಗ್ರಹಣ ಬಡಿದಂತಾಗಿದೆ..

smart city project
'ಸ್ಮಾರ್ಟ್ ಸಿಟಿ ಯೋಜನೆ' ಕಾಮಗಾರಿಗೆ ಎದುರಾದ ಕಾರ್ಮಿಕರ ಕೊರತೆ

ಹುಬ್ಬಳ್ಳಿ : ಅವಳಿ ನಗರವನ್ನು ಸ್ಮಾರ್ಟ್ ಮಾಡಲು ಸ್ಮಾರ್ಟ್ ಸಿಟಿ ಯೋಜನೆಯಡಿ ನೂರಾರು ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ‌ಆದರೆ, ಕಾಮಗಾರಿಗಳು ಮಾತ್ರ ಆಮೆಗತಿಯ ವೇಗದಲ್ಲಿವೆ.

ಸ್ಮಾರ್ಟ್ ಸಿಟಿ ಯೋಜನೆ' ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ

ಕೋವಿಡ್ ಅನ್‌ಲಾಕ್ ಬಳಿಕ ನಿರ್ಮಾಣ ಹಂತದ ಅಭಿವೃದ್ಧಿ ಕಾಮಗಾರಿಗಳು ನಿಧಾನವಾಗಿ ಆರಂಭವಾಗಿವೆ. ಆದರೆ, ಕೊರೊನಾದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿಯಲ್ಲಿ ಪ್ರಗತಿ ಕಾಣ್ತಿಲ್ಲ. ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 58 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕೊರೊನಾ ಹೊಡೆತಕ್ಕೆ ಕಾಮಗಾರಿಗಳು ಆಮೆಗತಿಯಲ್ಲಿವೆ. ಇದಕ್ಕೆ ಪ್ರಮುಖ ಕಾರಣ ಹೊರ ರಾಜ್ಯದ ನುರಿತ 520 ಕಾರ್ಮಿಕರ ಕೊರತೆ.

ಲಾಕ್‌ಡೌನ್‌ಗೂ ಮೊದಲು 1200ಕ್ಕೂ ಹೆಚ್ಚು ಹೊರ ರಾಜ್ಯದ ಕಾರ್ಮಿಕರು ಅವಳಿ ನಗರದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನ ಮಾಡುತ್ತಿದ್ದರು. ಕೋವಿಡ್ ಪರಿಣಾಮ ತಮ್ಮ ರಾಜ್ಯಗಳಿಗೆ ತೆರಳಿದ ವಲಸೆ ಕಾರ್ಮಿಕರು ಮರಳಿ ಬಂದಿಲ್ಲ. ಉತ್ತರಪ್ರದೇಶ, ಆಂಧ್ರ, ತಮಿಳುನಾಡು, ಬಿಹಾರ, ಪಶ್ಚಿಮ ಬಂಗಾಳ ಸೇರಿ ವಿವಿಧ ರಾಜ್ಯಗಳ ನುರಿತ ಕಾರ್ಮಿಕರು ಮರಳಿ ಬರದಿರೋದು ಈಗ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಗ್ರಹಣ ಬಡಿದಂತಾಗಿದೆ.

Bhairati Basavaraj
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್

58 ಕಾಮಗಾರಿ ಕೈಗೊಳ್ಳಲಾಗಿದ್ರೂ ಅದರಲ್ಲಿ ಈವರೆಗೆ ಕೇವಲ ₹15 ಕೋಟಿ ವೆಚ್ಚದ ಬರೀ 10 ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಇನ್ನುಳಿದಂತೆ ಸುಮಾರು 630 ಕೋಟಿ ವೆಚ್ಚದ ಕಾಮಗಾರಿ ಮಂದಗತಿಯಲ್ಲಿವೆ. ಗೋಕುಲ ರಸ್ತೆ, ಇಂಡಸ್ಟ್ರಿಯಲ್ ಪ್ರದೇಶ, ಕೊಪ್ಪಿಕರ್ ರಸ್ತೆ ಸೇರಿ ನಗರದ ಹಲವು ರಸ್ತೆ ಕಾಮಗಾರಿಗಳು, ಇಂದಿರಾ ಗ್ಲಾಸ್ ಹೌಸ್ ನಿರ್ಮಾಣ, ಎಂಜಿ ಪಾರ್ಕ್, ತೋಳನಕೆರೆ ಜೀರ್ಣೋದ್ಧಾರ, ಮೀನು ಮಾರುಕಟ್ಟೆ, ನೆಹರೂ ಕ್ರೀಡಾಂಗಣ, ಹಳೆ ಬಸ್ ನಿಲ್ದಾಣ ಪುನನಿರ್ಮಾಣ ಸೇರಿ 39 ಕಾಮಗಾರಿಗಳು ಚಾಲನೆಯಲ್ಲಿವೆ. ಅಲ್ಲದೇ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಎರಡು ಬಾರಿ ಸಭೆ ನಡೆಸಿ ನಗರ ಪ್ರದಕ್ಷಿಣೆ ಹಾಕಿ ಕಾಮಗಾರಿಗಳ ವೇಗ ಹೆಚ್ಚಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.