ETV Bharat / state

ಹುಬ್ಬಳ್ಳಿಯಲ್ಲಿ ಮತ್ತೆ ಚಾಕು ಇರಿತ ಪ್ರಕರಣ: ಹಳೇ ವೈಷಮ್ಯ ಕಾರಣ?

author img

By

Published : Sep 15, 2019, 3:59 AM IST

ಹಳೇ ಹುಬ್ಬಳ್ಳಿಯ ಅಜ್ಮಿರ್ ನಗರದಲ್ಲಿ ಜಾಕೀರ್ ಬಿರ್ಲಾ, ಹಾಗೂ ಮುಲ್ಲಾಸಾಬ್ ರಜಾಕ್ ದೊಡ್ಡಮನಿ ಎನ್ನುವವರಿಗೆ ಚಾಕುವಿನಿಂದ ಇರಿಯಲಾಗಿದೆ.

ಹುಬ್ಬಳ್ಳಿಯಲ್ಲಿ ಮತ್ತೆ ಚಾಕು ಇರಿತ ಪ್ರಕರಣ

ಹುಬ್ಬಳ್ಳಿ: ವಾಣಿಜ್ಯ ನಗರಿ‌ ಹುಬ್ಬಳ್ಳಿಯಲ್ಲಿ ಮೊನ್ನೆ ಗಣೇಶ ನಿಮಜ್ಜನದ ವೇಳೆ ಅಮಾಯಕರ ಮೇಲೆ ಚಾಕು ಇರಿತವಾದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೆ ಇಬ್ಬರಿಗೆ ಚಾಕು ಇರಿದಿರುವ ಪ್ರಸಂಗ ನಡೆದಿದೆ.

ಹಳೇ ಹುಬ್ಬಳ್ಳಿಯ ಅಜ್ಮಿರ್ ನಗರದಲ್ಲಿ ಜಾಕೀರ್ ಬಿರ್ಲಾ ಹಾಗೂ ಮುಲ್ಲಾಸಾಬ್ ರಜಾಕ್ ದೊಡ್ಡಮನಿ ಎನ್ನುವವರಿಗೆ ಚಾಕುವಿನಿಂದ ಇರಿಯಲಾಗಿದೆ.

ಪ್ರಶಾಂತ, ವೀರಣ್ಣ ಬಂಕಾಪುರ ಎಂಬ ಇಬ್ಬರು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಹಳೇ ವೈಷಮ್ಯವೇ ಚಾಕು ಇರಿತಕ್ಕೆ ಕಾರಣ ಎನ್ನಲಾಗಿದೆ.

ಹುಬ್ಬಳ್ಳಿಯಲ್ಲಿ ಮತ್ತೆ ಚಾಕು ಇರಿತ ಪ್ರಕರಣ

ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊನ್ನೆಯಷ್ಟೆ ಗಣೇಶನ ನಿಮಜ್ಜನ ವೇಳೆ‌ 9 ಜನರು ಗಾಯಗೊಂಡು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಹಸಿರಾಗಿರುವಾಗಲೇ ಮತ್ತೆ ಚಾಕು ಇರಿತದಂತಹ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

Intro:ಹುಬ್ಬಳ್ಳಿ-01

ವಾಣಿಜ್ಯ ನಗರಿ‌ ಹುಬ್ಬಳ್ಳಿಯಲ್ಲಿ ಮತ್ತೆ ದುಷ್ಕರ್ಮಿಗಳು ರಕ್ತ ‌ಹರಿಸಿದ್ದಾರೆ.‌ ಗಣೇಶ ನಿಮ್ಮಜ್ಜನ ವೇಳೆ ಅಮಾಯಕರ ಮೇಲೆ ಚಾಕು ಇರಿತ ಮಾಡಿದ ಪ್ರಕರಣ ಮಾಸುವ ಮುನ್ನ ನಗರದಲ್ಲಿ ಮತ್ತೆ ಚಾಕು ಇರಿತವಾಗಿದೆ.‌
ಹಳೇ ಹುಬ್ಬಳ್ಳಿಯ ಅಜ್ಮಿರ್ ನಗರದಲ್ಲಿ ಜಾಕೀರ್ ಬಿರ್ಲಾ, ಹಾಗೂ ಮುಲ್ಲಾಸಾಬ್ ರಜಾಕ್ ದೊಡ್ಡಮನಿ ಎನ್ನುವವರಿಗೆ ಚಾಕುವಿನಿಂದ ಇರಿಯಲಾಗಿದೆ.
ಪ್ರಶಾಂತ ವೀರಣ್ಣ ಬಂಕಾಪುರ, ಸೇರಿದಂತೆ ಇಬ್ಬರು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಾಯಾಳುಗಳು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಹಳೇ ವೈಷಮ್ಯವೇ ಚಾಕು ಇರಿತಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ
ಹಳೇ ಹುಬ್ಬಳ್ಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊನ್ನೆಯಷ್ಟೆ
ಗಣೇಶನ ನಿಮಜ್ಜನ ವೇಳೆ‌ ಒಂಬತ್ತು ಜನರು ಗಾಯಗೊಂಡು ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಹಸಿರಾಗಿರುವಾಗಲೇ ಮತ್ತೆ ನೆತ್ತರು ಹರಿದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.