ETV Bharat / state

ಎಲ್ಲ ಧರ್ಮೀಯರೂ ಒಂದಾಗಿ ಪ್ರಾರ್ಥನೆ ಮಾಡಿದ್ರೆ ಗಾಂಧಿ ಜಯಂತಿಗೆ ಹೆಚ್ಚು ಅರ್ಥ ಬರುತ್ತೆ: ಕವಿವಿ ಕುಲಪತಿ

author img

By

Published : Oct 2, 2020, 9:08 PM IST

ಗಾಂಧಿ ಜಯಂತಿ ಸಂದರ್ಭದಲ್ಲಿ ಸರ್ವ ಧರ್ಮ ಪ್ರಾರ್ಥನೆಗಳನ್ನು ಆಯಾ ಧರ್ಮೀಯರು ಪ್ರತ್ಯೇಕವಾಗಿ ಸಲ್ಲಿಸುವುದಕ್ಕಿಂತ ಎಲ್ಲರೂ ಒಟ್ಟಾಗಿ ಎಲ್ಲ ಧರ್ಮಗಳ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದಾಗ ಗಾಂಧೀಜಿ ಅವರ ಆಶಯಕ್ಕೆ ಹೆಚ್ಚು ಅರ್ಥ ಬರುತ್ತದೆ ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಹೇಳಿದರು.

Karnataka University Chancellor Gudasi spoke about equality
ಎಲ್ಲಾ ಧರ್ಮೀಯರೂ ಒಂದಾಗಿ ಪ್ರರ್ಥನೆ ಮಾಡಿದ್ರೆ ಗಾಂಧೀ ಜಯಂತಿಗೆ ಹೆಚ್ಚು ಅರ್ಥ ಬರುತ್ತದೆ : ಕವಿವಿ ಕುಲಪತಿ

ಧಾರವಾಡ : ಎಲ್ಲ ಧರ್ಮಗಳ ಮೂಲ ಧ್ಯೇಯವೂ ಶಾಂತಿ, ಸಮನ್ವಯ ಹಾಗೂ ಸಹಬಾಳ್ವೆ ನೀತಿಯೇ ಆಗಿದೆ. ಗಾಂಧಿ ಜಯಂತಿ ಸಂದರ್ಭದಲ್ಲಿ ಸರ್ವ ಧರ್ಮ ಪ್ರಾರ್ಥನೆಗಳನ್ನು ಆಯಾ ಧರ್ಮೀಯರು ಪ್ರತ್ಯೇಕವಾಗಿ ಸಲ್ಲಿಸುವುದಕ್ಕಿಂತ ಎಲ್ಲರೂ ಒಟ್ಟಾಗಿ ಎಲ್ಲ ಧರ್ಮಗಳ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದಾಗ ಗಾಂಧೀಜಿಯವರ ಆಶಯಕ್ಕೆ ಹೆಚ್ಚು ಅರ್ಥ ಬರುತ್ತದೆ ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಗಾಂಧಿ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ವಾರ್ತಾ ಇಲಾಖೆ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ಗಾಂಧೀಜಿ ಅವರ 152 ನೇ ಜಯಂತಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವಧರ್ಮ ಪ್ರಾರ್ಥನೆಯ ಸಂದರ್ಭದಲ್ಲಿ ಎಲ್ಲ ಧರ್ಮೀಯರು ಇತರ ಧರ್ಮಗಳ ಪ್ರಾರ್ಥನೆಗಳಲ್ಲಿ ಭಾಗವಹಿಸಿದರೆ, ಹೆಚ್ಚು ಅರ್ಥ ಬರುತ್ತದೆ. ವೈಯಕ್ತಿಕ ಸ್ವಚ್ಚತೆ, ಶ್ರಮದಾನ ಬಗ್ಗೆ ಗಾಂಧೀಜಿ ಕಳೆದ ಶತಮಾನದಲ್ಲಿಯೇ ಪ್ರಯೋಗ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆದರೆ, ನಾವು ಕೊರೊನಾ ಬರುವವರೆಗೂ ಕೈ ತೊಳೆಯುವುದನ್ನು ರೂಢಿಸಿಕೊಳ್ಳಲಿಲ್ಲ.

ಸಮಾನತೆ, ಸಹಬಾಳ್ವೆ ನಮ್ಮ ಜೀವನದ ಅಂಗಗಳಾಗಬೇಕು. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಗಾಂಧಿ ಅಧ್ಯಯನ ವಿಭಾಗ ಅಭಿವೃದ್ಧಿ ಪಡಿಸಲು ಎಲ್ಲ ಸಹಕಾರ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಕೆ.ಟಿ.ಹನುಮಂತಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ, ವಿತ್ತಾಧಿಕಾರಿ ಪ್ರೊ.ಆರ್.ಆರ್.ಬಿರಾದಾರ, ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಶೆಟ್ಟರ್, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ.ಎಂ.ಬಿ.ದಳಪತಿ‌ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.