ETV Bharat / state

IPS Renuka Sukumar: ಅವಳಿ ನಗರದ ಮೊದಲ ಮಹಿಳಾ ಕಮಿಷನರ್

author img

By

Published : Aug 9, 2023, 2:28 PM IST

Updated : Aug 10, 2023, 8:01 AM IST

IPS Transfer: ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರೇಟ್​ನ ಮೊಟ್ಟ ಮೊದಲ ಮಹಿಳಾ ಕಮಿಷನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

IPS Renuka Sukumar
ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ

ಹುಬ್ಬಳ್ಳಿ/ಬೆಂಗಳೂರು: ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆಸಿದೆ. ಹುಬ್ಬಳ್ಳಿ ಧಾರವಾಡ ನೂತ‌ನ ಪೊಲೀಸ್ ಆಯುಕ್ತರನ್ನಾಗಿ ಮಹಿಳಾ ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರೇಟ್​ನ ಮೊಟ್ಟ ಮೊದಲ ಮಹಿಳಾ ಕಮಿಷನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಭಾರಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ ಬಾಬು ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ರೇಣುಕಾ ಸುಕುಮಾರ ಅವರು 2011ರ ಐಪಿಎಸ್ ಬ್ಯಾಚ್​ನ ಅಧಿಕಾರಿಯಾಗಿದ್ದು, ಸದ್ಯ ಗೃಹ ರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಿಂದೆಯೂ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಆಗಿ ಸಹ ಕಾರ್ಯನಿರ್ವಹಿಸಿದ್ದರು.

Renuka  Sukumar appointed new commissioner of Hubli  Dharwad
ಆದೇಶ ಪ್ರತಿ

ಹು-ಧಾ ಇತಿಹಾಸದಲ್ಲಿಯೇ ಪ್ರಥಮ ಮಹಿಳಾ ಪೊಲೀಸ್ ಆಯುಕ್ತೆಯಾಗಿ ಆಯ್ಕೆಯಾಗಿದ್ದಾರೆ. ಡಿಸಿಪಿ ಇದ್ದಾಗಲೂ‌ ಕೂಡ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಕಮಿಷನರ್ ಆಗಿ ಆಗಮಿಸಿದ್ದರಿಂದ ವಾಣಿಜ್ಯ ನಗರಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರಬೇಕಿದೆ.

ಕಮಲ್ ಪಂತ್ ವರ್ಗಾವಣೆ: ಮತ್ತೋರ್ವ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರನ್ನು ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಯ ಡಿಜಿಪಿ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೂವರು ಡಿವೈಎಸ್​​ಪಿ, 40 ಮಂದಿ ಇನ್ಸ್​ಪೆಕ್ಟರ್ ವರ್ಗಾವಣೆ: ಬೆಂಗಳೂರು ಸೇರಿ ರಾಜ್ಯದ ವಿವಿಧ ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂರು ಮಂದಿ ಡಿವೈಎಸ್​​ಪಿ ಮತ್ತು 40 ಇನ್ಸ್​ಪೆಕ್ಟರ್​​​ಗಳನ್ನು ವರ್ಗಾವಣೆ ಮಾಡಲಾಗಿದೆ. ಡಿವೈಎಸ್​​ಪಿಗಳಾದ ಮಂಜುನಾಥ ಚೌಧರಿ ಸಿಸಿಬಿಗೆ, ಟಿ.ರಂಗಪ್ಪ ಸಂಪಿಗೆಹಳ್ಳಿ ಉಪವಿಭಾಗಕ್ಕೆ ಹಾಗೂ ಪಿ.ರವಿ ಅವರು ದೊಡ್ಡಬಳ್ಳಾಾಪುರ ಉಪವಿಭಾಗಕ್ಕೆ ವರ್ಗಾವಣೆ ಆಗಿದ್ದಾರೆ.

10 ಮಂದಿ IAS ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರ್ಕಾರ ನಿನ್ನೆಯಷ್ಟೇ ಹತ್ತು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಂತಿದೆ.

  • ಮಹಮ್ಮದ್ ಮೊಹ್ಸಿನ್- ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ.
  • ಟಿ.ಎಚ್.ಎಂ.ಕುಮಾರ್ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ.
  • ಆರ್.ಸ್ನೇಹಲ್ - ನಿರ್ದೇಶಕಿ(ಐಟಿ), ಬಿಎಂಟಿಸಿ.
  • ಪ್ರಭುಲಿಂಗ ಕವಲಿಕಟ್ಟಿ- ಆಯುಕ್ತರು, ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವೆ.
  • ಜಿ.ಲಕ್ಷ್ಮೀಕಾಂತ್ ರೆಡ್ಡಿ- ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ.
  • ಪಂಡ್ವೆ ರಾಹುಲ್ ತುಕರಾಮ್ - ಕಾರ್ಯ ನಿರ್ವಾಹಣಾಧಿಕಾರಿ, ರಾಯಚೂರು ಜಿಲ್ಲೆ.
  • ಎಸ್.ಜೆ.ಸೋಮಶೇಖರ್- ಕಾರ್ಯ ನಿರ್ವಾಹಣಾಧಿಕಾರಿ, ಚಿತ್ರದುರ್ಗ ಜಿಲ್ಲೆ.
  • ಎಸ್.ರಂಗಪ್ಪ- ನಿರ್ದೇಶಕರು, ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗ.
  • ಡಾ.ಎಸ್. ಆಕಾಶ್ - ಹೆಚ್ಚುವರಿ ಆಯುಕ್ತರು, ಕಲಬುರಗಿ ಜಿಲ್ಲೆಯ ಸಾರ್ವಜನಿಕ ಸೂಚನೆಗಳು ವಿಭಾಗ.
  • ಅನ್ಮೂಲ್ ಜೈನ್- ನೋಂದಣಿ (ವಿಜೆಲೆನ್ಸಿ) ಡಿಐಜಿ.
  • ಇದನ್ನೂ ಓದಿ: Transfer Order: 10 ಮಂದಿ IAS ಅಧಿಕಾರಿಗಳ ವರ್ಗಾವಣೆ
Last Updated : Aug 10, 2023, 8:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.