ETV Bharat / state

ತಾಳೆ ಎಣ್ಣೆ ಮೇಲೆ ಸೆಸ್ ಹೇರಿಕೆ: ಬಡ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ

author img

By

Published : Feb 7, 2021, 12:56 PM IST

ಕಳೆದೊಂದು ವರ್ಷದಿಂದ ಜನರ ಜೀವನದ ಮೇಲೆ ಕೊರೊನಾ ತನ್ನ ಕರಿಛಾಯೆಯನ್ನು ಬೀರಿದ್ದು, ಇದರಿಂದ ಎಲ್ಲಾ ವಲಯದ ಜನರು ಸಾಕಷ್ಟು ನಷ್ಟು ಅನುಭವಿಸಿದ್ದಾರೆ. ಇದೀಗ ಸರ್ಕಾರ ಪೆಟ್ರೋಲ್​, ಡೀಸೆಲ್​ ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ಬೆಲೆಯಲ್ಲಿ ಏರಿಕೆ ಮಾಡಿದೆ. ಇದು ಜನರ ಜೀವನವನ್ನು ಮತ್ತಷ್ಟು ದುಸ್ತರವಾಗಿಸಿದೆ.

ತಾಳೆ ಎಣ್ಣೆ ಮೇಲೆ ಸೆಸ್ ಹೇರಿಕೆ
Increase in palm oil prices

ಹುಬ್ಬಳ್ಳಿ: ದೇಶದ ಜನತೆ ಈಗಾಗಲೇ ಕೊರೊನಾ ಬಿಕ್ಕಟ್ಟಿನಿಂದ ತತ್ತರಿಸಿದ್ದಾರೆ. ಈ ಬೆನ್ನಲ್ಲೇ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಿಗೆ ಮತ್ತಷ್ಟು ಹೊರೆ ಎನಿಸಿದೆ. ಅದರಲ್ಲೂ ಅಡುಗೆ ಎಣ್ಣೆ ಬೆಲೆ ಗಗನಮುಖಿ ಆಗಿರುವುದರಿಂದ ಜನತೆಯ ಜೇಬು ಸುಡುತ್ತಿದೆ.

ತಾಳೆ ಎಣ್ಣೆ ಮೇಲೆ ಸೆಸ್ ಹೇರಿಕೆ

ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್​ ಬೆಲೆಯನ್ನು ಏರಿಕೆ ಮಾಡುತ್ತಲೇ ಇದೆ. ಇದೀಗ ದೈನಂದಿನ ಬಳಕೆಯ ಅಡುಗೆ ಎಣ್ಣೆ ಬೆಲೆ ಕೂಡ ಶೇ.35 ರಿಂದ 45 ರಷ್ಟು ಏರಿಕೆಯಾಗಿದೆ. ಇದರಿಂದ ಸಾಮಾನ್ಯ ವರ್ಗದ ಜನ ತತ್ತರಿಸಿ ಹೋಗಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ಪ್ರತಿ ಲೀಟರ್‌ಗೆ 100 ರೂ.ಗೂ ಕಡಿಮೆಯಿದ್ದ ಅಡುಗೆ ಎಣ್ಣೆಯ ಬೆಲೆ ಇದೀಗ ದಿಢೀರ್‌ ಹೆಚ್ಚಾಗಿದ್ದು, 130 ರಿಂದ 140 ರೂ.ವರೆಗೆ ಹೆಚ್ಚಾಗಿದೆ.

palm oil tin
ತಾಳೆ ಎಣ್ಣೆ ಟಿನ್​ಗಳು

ತಾಳೆ ಎಣ್ಣೆ ಬೆಲೆಯಲ್ಲಿ ಹೆಚ್ಚಳ :

ತಾಳೆ ಎಣ್ಣೆ (ಪಾಮ್ ಆಯಿಲ್‌) ಬೆಲೆ ಆರು ತಿಂಗಳ ಹಿಂದೆ ಪ್ರತಿ ಲೀ.ಗೆ 60 ರಿಂದ 70ರೂ.ನಷ್ಟಿತ್ತು. ಈಗ 100 ರಿಂದ 120 ರೂ.ಗಳವರೆಗೆ ಏರಿಕೆಯಾಗಿದೆ. ಈ ಹಿಂದೆ ವಿದೇಶಗಳಿಂದ ಪಾಮ್ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ಬೆಲೆಯೂ ನಿಯಂತ್ರಣದಲ್ಲಿತ್ತು. ಆದರೆ ಕೊರೊನಾ ಲಾಕ್‌ಡೌನ್‌ ನಂತರ ಪಾಮ್‌ ಆಯಿಲ್‌ ಆಮದಿಗೆ ತಾತ್ಕಾಲಿಕ ಅಡ್ಡಿಯಾಗಿದೆ. ಇದರಿಂದಾಗಿ ಅಡುಗೆ ಎಣ್ಣೆ ಕೊರತೆ ಉಂಟಾಗಿರುವುದು ಕೂಡ ಬೆಲೆ ಏರಿಕೆ ಕಾರಣವಾಗಿದೆ.

Palm Oil Production Center
ತಾಳೆ ಎಣ್ಣೆ ತಯಾರಿಕಾ ಕೇಂದ್ರ

ಓದಿ: ಮೊಟ್ಟ ಮೊದಲ ಬಾರಿಗೆ ದ್ರಾಕ್ಷಿ ಬೆಳೆದು ಹೆಸರುಗಳಿಸಿದ ಪದವೀಧರ ಯುವ ರೈತ...

ಬಜೆಟ್​ನಿಂದ ಹೆಚ್ಚಿದ ಹೊರೆ:

ಅಷ್ಟೆ ಅಲ್ಲದೆ, ಈ ಬಾರಿಯ ಬಜೆಟ್​​ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕೃಷಿ ಮತ್ತು ಮೂಲ ಸೌಕರ್ಯ ವಸ್ತುಗಳ ಮೇಲೆ ಸೆಸ್ ವಿಧಿಸಿದ್ದಾರೆ. ಇದು ಎಣ್ಣೆ ಬೆಲೆ ಗಗನಕ್ಕೇರಲು ಪ್ರಮುಖ ಕಾರಣವಾಗಿದೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ. ಸೆಸ್ ಜಾರಿಯಿಂದ ಅತೀ ಹೆಚ್ಚು ತಾಳೆ ಎಣ್ಣೆ ಉಪಯೋಗಿಸುವ ಬಡ ವರ್ಗ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ರಸ್ತೆ ಬದಿಯ ತಿನಿಸುಗಳ ತಯಾರಕರಿಗೆ ಹೊಡೆತ ಬಿದ್ದಿದೆ. ಈ ಹಿಂದೆ10 ಕೆಜಿ ಎಣ್ಣೆ ಖರೀದಿ ಮಾಡುತ್ತಿದ್ದವರು, ಈಗ 5 ಕೆಜಿ ತಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಕರಿದ ಖಾದ್ಯ ಪದಾರ್ಥಗಳ ಬೆಲೆಯೂ ಏರಿಕೆಯಾಗುತ್ತಿವೆ. ಎಣ್ಣೆ ಬೆಲೆಗಿಂತ ಅದರ ಮೇಲಿನ ಟ್ಯಾಕ್ಸ್ ಹಾಗೂ ಸೆಸ್ ಹೆಚ್ಚಾಗಿದೆ. ಎಣ್ಣೆ ಬೆಲೆಗಿಂತ ಅವುಗಳ ಮೇಲೆ ಹಾಕಿರುವ ತೆರಿಗೆಗಳನ್ನು ಸರ್ಕಾರ ಕಡಿಮೆ ಮಾಡಬೇಕೆಂದು ವರ್ತಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.