ಇಂಡಿಯಾ ಬುಕ್ ಆಫ್ ರೆಕಾರ್ಡ್​ ಸೇರಿದ ಹುಬ್ಬಳ್ಳಿ ಪೋರಿಯ ಜ್ಞಾಪಕ ಶಕ್ತಿ!

author img

By

Published : Oct 27, 2022, 6:05 PM IST

ಇಂಡಿಯಾ ಬುಕ್ ಆಫ್ ರಿಕಾರ್ಡ್​ ಸೇರಿದ ಹುಬ್ಬಳ್ಳಿ  ಪೋರಿ

ಆಕೆ ಪುಟ್ಟ ಮಗು. ಇನ್ನೂ ಸರಿಯಾಗಿ ಮಾತನಾಡಲು ಬರುವುದಿಲ್ಲ. ಆದ್ರೆ ಚಿಕ್ಕ ವಯಸ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ. ಈ ಮಗುವೀಗ ಒಂದು ವರ್ಷ 10 ತಿಂಗಳು ಪ್ರಾಯ.

ಹುಬ್ಬಳ್ಳಿ: ವಾಣಿಜ್ಯ ನಗರಿಯ ಅರ್ನಾ ಎಸ್.ಪಾಟೀಲ್ ಎಂಬ ಪುಟ್ಟ ಬಾಲಕಿ​ ತನ್ನ ವಿಶೇಷ ಜ್ಞಾಪಕ ಶಕ್ತಿಯ ಮೂಲಕ ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಿಸಿದ್ದಾಳೆ. ಈ ಪುಟಾಣಿ 10 ತರಕಾರಿ, 11 ಹಣ್ಣುಗಳು, 22 ಪ್ರಾಣಿಗಳ ಹೆಸರು, ಕನ್ನಡ ವರ್ಣಮಾಲೆ ಮತ್ತು A ಟು Z ವರೆಗೆ ಇಂಗ್ಲಿಷ್ ಅಕ್ಷರಗಳನ್ನು ಗುರುತಿಸಿ ಹೇಳಬಲ್ಲಳು.

ರಾಷ್ಟ್ರೀಯ ಚಿಹ್ನೆಗಳನ್ನು ಹೇಳುವುದು, 15 ದೇಹದ ಭಾಗಗಳನ್ನು ಗುರುತಿಸುವುದು, ಪ್ರಧಾನಮಂತ್ರಿಯ ಹೆಸರು ಮತ್ತು ಮುಖ್ಯಮಂತ್ರಿಯ ಹೆಸರುಗಳನ್ನು ಹೇಳುವ ಸಾಮರ್ಥ್ಯವನ್ನು ಹೊಂದಿದ್ದಾಳೆ.

ಇಂಡಿಯಾ ಬುಕ್ ಆಫ್ ರಿಕಾರ್ಡ್​ ಸೇರಿದ ಹುಬ್ಬಳ್ಳಿ ಪೋರಿ

ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಬುಡರಕಟ್ಟಿ ಗ್ರಾಮದವರಾದ ಬಾಲಕಿಯ ತಂದೆ ಶಿದ್ರಾಮಗೌಡ ಆರ್ ಪಾಟೀಲ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ. ತಾಯಿ ವಿದ್ಯಾಶ್ರೀ ತಮ್ಮ ಬಿಡುವಿನ ವೇಳೆಯಲ್ಲಿ ಹೇಳಿಕೊಟ್ಟ ಸಾಮಾನ್ಯ ಜ್ಞಾನವೇ ಇವಳ ಕಲಿಕೆಗೆ ಪ್ರೇರಣೆಯಾಗಿದೆ. ಇದೀಗ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಶಟರ ಕಾಲೋನಿಯಲ್ಲಿ ವಾಸವಿದ್ದಾರೆ.

ಇದನ್ನೂ ಓದಿ: ಎಲೆ ಮೇಲೆ ಅರಳಿದ ರಾಷ್ಟ್ರಗೀತೆ: 'ಇಂಡಿಯಾ ಬುಕ್ ಆಫ್ ರೆಕಾರ್ಡ್’ ದಾಖಲೆ ಮಾಡಿದ ರೈತನ ಮಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.