ETV Bharat / state

ಬೀದಿ ಬದಿ ವ್ಯಾಪಾರಿಗಳ ಮೇಲೆ ಪಾಲಿಕೆ ಸಿಬ್ಬಂದಿ ದೌರ್ಜನ್ಯ..

author img

By

Published : Jun 27, 2020, 3:28 PM IST

Updated : Jun 27, 2020, 5:36 PM IST

ಇಷ್ಟು ದಿನ‌ ಲಾಕ್​ಡೌನ್​ನಿಂದ ಕಂಗೆಟ್ಟಿದ್ದ ವ್ಯಾಪಾರಿಗಳ ಮೇಲೆ ಪಾಲಿಕೆ ಸಿಬ್ಬಂದಿ ದಬ್ಬಾಳಿಕೆ ನಡೆಸಿದ್ದಾರೆ. ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ದಂಡ ಹಾಕಬಹುದಿತ್ತು. ಇಲ್ಲವೇ ಸ್ಥಳಾಂತರ ಮಾಡಿಸಬಹುದಿತ್ತು.‌.

ಗೂಂಡಾ ವರ್ತನೆ
ಗೂಂಡಾ ವರ್ತನೆ

ಹುಬ್ಬಳ್ಳಿ : ಮಹಾನಗರ ಪಾಲಿಕೆಯ ಸಿಬ್ಬಂದಿ ಬೀದಿ ಬದಿಯ ಹಣ್ಣಿನ ವ್ಯಾಪಾರ ಮಾಡುವವರ ಜೊತೆ ಅನುಚಿತ ವರ್ತನೆ ಮಾಡಿದ್ದಲ್ಲದೆ ಹಣ್ಣುಗಳನ್ನು ಕಸದ ತುಂಬ ವಾಹನಕ್ಕೆ ಹಾಕಿ ಅಮಾನವೀಯವಾಗಿ ನಡೆದುಕೊಂಡ ಆರೋಪ ಕೇಳಿ ಬಂದಿದೆ.

ನಗರದ ಗುಜರಾತ್ ಭವನ ಬಳಿಯ ಫುಟ್​ಪಾತ್ ಮೇಲೆ ಹಲವರು ತರಕಾರಿ ಹಾಗೂ ಹಣ್ಣುಗಳ ವ್ಯಾಪಾರ ಮಾಡುತ್ತಾರೆ. ಇಂದು ಏಕಾಏಕಿ ಕಸದ ವಾಹನದೊಂದಿಗೆ ಇಲ್ಲಿಗೆ ಬಂದ ಪೌರ ಕಾರ್ಮಿಕ ಸಿಬ್ಬಂದಿ ಹಣ್ಣುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಸದ ಲಾರಿಯಲ್ಲಿ ಹಾಕಿಕೊಂಡು ಹೋಗಿದ್ದಲ್ಲದೇ ವ್ಯಾಪಾರಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳ ಮೇಲೆ ಪಾಲಿಕೆ ದೌರ್ಜನ್ಯ..

ಇಷ್ಟು ದಿನ‌ ಲಾಕ್​ಡೌನ್​ನಿಂದ ಕಂಗೆಟ್ಟಿದ್ದ ವ್ಯಾಪಾರಿಗಳ ಮೇಲೆ ಪಾಲಿಕೆ ಸಿಬ್ಬಂದಿ ದಬ್ಬಾಳಿಕೆ ನಡೆಸಿದ್ದಾರೆ. ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ದಂಡ ಹಾಕಬಹುದಿತ್ತು. ಇಲ್ಲವೇ ಸ್ಥಳಾಂತರ ಮಾಡಿಸಬಹುದಿತ್ತು.‌ ಆದರೆ, ಹಣ್ಣುಗಳನ್ನು ಕಸದ ಲಾರಿಯಲ್ಲಿ ಹಾಕಿ ಗೂಂಡಾವರ್ತನೆ ತೋರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Last Updated : Jun 27, 2020, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.