ETV Bharat / state

46ನೇ ವಯಸ್ಸಿಗೆ ಎಸ್ಸೆಸ್ಸೆಲ್ಸಿ ಪಾಸ್​ ಮಾಡಿದ ಗೃಹಿಣಿ ಮಹಾದೇವಿ

author img

By

Published : Aug 10, 2021, 10:22 AM IST

ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಮಹಾದೇವಿ ನಾಯ್ಕರ್ ಎಂಬ ಗೃಹಿಣಿ ತಮ್ಮ 46ನೇ ವಯಸ್ಸಿನಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

mahadevi
ಮಹಾದೇವಿ ನಾಯ್ಕರ್

ಕಲಘಟಗಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲಿ ಸಂಭ್ರಮ ಕಂಡು ಬಂದಿದೆ. ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಮಹಾದೇವಿ ನಾಯ್ಕರ್ ಎಂಬ ಗೃಹಿಣಿ ತಮ್ಮ 46ನೇ ವಯಸ್ಸಿನಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಗಮನ ಸೆಳೆದಿದ್ದಾರೆ.

mahadevi
ಎಸ್​ಎಸ್​ಎಲ್​ಸಿ ಪಾಸ್​ ಮಾಡಿದ ಗೃಹಿಣಿ ಮಹಾದೇವಿ ಅಂಕಪಟ್ಟಿ

1985ರಲ್ಲಿ ಮಹಾದೇವಿ ನಾಯ್ಕರ್ ಅವರು ಬಡತನದ ಸಂಕಷ್ಟದಲ್ಲಿ ಸಿಲುಕಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಕನಸನ್ನು ಕೈ ಚೆಲ್ಲಿದ್ದರು. ಆದರೆ ಇದೀಗ ಪರೀಕ್ಷೆ ಬರೆದ ಅವರು 'ಸಿ' ಗ್ರೇಡ್​ನಲ್ಲಿ ಪಾಸ್​ ಆಗಿದ್ದಾರೆ.

ಮಹಾದೇವಿ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸ್ ಮಾಡಿದ್ದಕ್ಕೆ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಕಾಲೇಜು ಮೆಟ್ಟಿಲೇರುವ ಕನಸಿನ ಆಸೆಯೂ ಸಹ ಚಿಗುರೊಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.