ETV Bharat / state

ಹುಬ್ಬಳ್ಳಿಗೆ ಕಪಿಲ್ ದೇವ್ ಭೇಟಿ.. ಸೆಲ್ಫಿ, ಫೋಟೋಗೆ ಮುಗಿಬಿದ್ದ ಅಭಿಮಾನಿಗಳು

author img

By

Published : Mar 26, 2022, 10:50 PM IST

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಕಪಿಲ್ ದೇವ್ ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

former-india-captain-kapil-dev-visit-to-hubballi
ಹುಬ್ಬಳ್ಳಿಗೆ ಕಪಿಲ್ ದೇವ್ ಭೇಟಿ

ಹುಬ್ಬಳ್ಳಿ: 1983ರ ಕ್ರಿಕೆಟ್​ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಿದ್ದರು. ಕ್ರಿಕೆಟ್​ ದಿಗ್ಗಜನನ್ನು ಕಂಡ ಅಭಿಮಾನಿಗಳು ಅವರ ಜೊತೆ ಫೋಟೋ, ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಪ್ರಸಂಗ ಕಂಡುಬಂತು.

former-india-captain-kapil-dev-visit-to-hubballi
'ಇವನಿಂಗ್ ವಿತ್ ಲೆಜೆಂಡ್' ಕಾರ್ಯಕ್ರಮದಲ್ಲಿ ಕಪಿಲ್ ದೇವ್

ನಗರದ ಟೈಕಾನ್ ಸಮಾವೇಶದಲ್ಲಿ 'ಇವನಿಂಗ್ ವಿತ್ ಲೆಜೆಂಡ್' ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರು ಆಗಮಿಸಿದ್ದರು. ಹುಬ್ಬಳ್ಳಿಯ ನವೀನ್ ಹೋಟೆಲ್ ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಅವರನ್ನು ಸುತ್ತುವರೆದರು. ಕೆಲವರು ಫೋಟೋ ತೆಗೆಸಿಕೊಂಡರೆ, ಇನ್ನೂ ಕೆಲವರು ಆಟೋಗ್ರಾಫ್ ಪಡೆದುಕೊಂಡರು. ಅಭಿಮಾನಿಗಳನ್ನು ನಿಯಂತ್ರಿಸಲು ಆಯೋಜಕರು ಕೆಲಕಾಲ ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: IPL ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಕ್ರಿಕೆಟಿಗರ ಪಟ್ಟಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.