ETV Bharat / state

ಹುಬ್ಬಳ್ಳಿ: Al-taj ಮೊಬೈಲ್ ಅಪ್ಲಿಕೇಷನ್ ಮೂಲಕ ಮನೆ ಬಾಗಿಲಿಗೆ ಬರಲಿದೆ ರುಚಿಕರ ಆಹಾರ

author img

By

Published : May 19, 2021, 1:27 PM IST

ಕೋವಿಡ್​ ಲಾಕ್​​ಡೌನ್​​​ನಿಂದ ಹೋಟೆಲ್​ ಉದ್ಯಮ ನೆಲಕಚ್ಚಿದೆ. ಆದ್ರೆ ಅಲ್ ತಾಜ್ ರೆಸ್ಟೋರೆಂಟ್​ನವರು Al-taj ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿ ಎಲ್ಲರಿಗೂ ಉಚಿತ ಹೋಮ್ ಡಿಲಿವೆರಿ ಮಾಡುವ ಮೂಲಕ ಉತ್ತಮ ವ್ಯವಹಾರಕ್ಕೆ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

Food Delivery by the Al taj Mobile App in hubli
Al- taj ಮೊಬೈಲ್ ಅಪ್ಲಿಕೇಷನ್ ಮೂಲಕ ಮನೆ ಬಾಗಿಲಿಗೆ ಬರಲಿದೆ ರುಚಿಕರ ಆಹಾರ

ಹುಬ್ಬಳ್ಳಿ: ವಾಣಿಜ್ಯ ನಗರಿ ಜನತೆಗೆ ತಮ್ಮೂರಿನ ಸಾಂಪ್ರದಾಯಿಕ ಆಹಾರ ಸವಿಯಲು ತುಂಬಾನೇ ಇಷ್ಟ. ಆಹಾರ ಪ್ರಿಯರಿಗೆ ವಿವಿಧ ಬಗೆಯ ರುಚಿಯಾದ ಭೋಜನ ಸವಿಯಲು ಈಗ ಕೋವಿಡ್​ ಲಾಕ್​ಡೌನ್​ನಿಂದ ಹೊರಗೆ ಹೋಗಲು ಸಾಧ್ಯವಾಗ್ತಿಲ್ಲ. ಆಹಾರ ಪ್ರಿಯರಿಗಾಗಿ ಸಸ್ಯಹಾರಿ ಹಾಗೂ ಮಾಂಸಹಾರಿ ಆಹಾರವನ್ನು ಮನೆ ಬಾಗಿಲಿಗೆ ಪೂರೈಸಲೆಂದೇ ನಗರದ ಅಲ್ ತಾಜ್ ರೆಸ್ಟೋರೆಂಟ್​ನವರು Al-taj ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿ ಎಲ್ಲರಿಗೂ ಉಚಿತ ಹೋಮ್ ಡಿಲಿವೆರಿ ಮಾಡುವ ಮೂಲಕ ವ್ಯವಹಾರಕ್ಕೆ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

Al-taj ಮೊಬೈಲ್ ಅಪ್ಲಿಕೇಷನ್ ಮೂಲಕ ಮನೆ ಬಾಗಿಲಿಗೆ ಬರಲಿದೆ ರುಚಿಕರ ಆಹಾರ

ಕೊರೊನಾ ಹೊಡೆತಕ್ಕೆ ಅದೆಷ್ಟೋ ಹೋಟೆಲ್ ಉದ್ಯಮ ನಡೆಸುವವರು ಈಗ ತಮ್ಮ ಹೋಟೆಲ್ ಬಂದ್ ಮಾಡಿರುವ ಉದಾಹರಣೆಗಳಿವೆ. ಆದರೆ ನಷ್ಟ ಲೆಕ್ಕಿಸದೇ ಗ್ರಾಹಕರನ್ನು ಸೆಳೆಯಲು ಆನ್​ಲೈನ್​​ ಮೊರೆ ಹೋಗಿದ್ದಾರೆ ನಗರದ ಅಲ್ ತಾಜ್ ಹೋಟೆಲ್​ನವರು. ಅಲ್​ ತಾಜ್​​ ಗ್ರಾಹಕರಿಗೆ ಅತ್ಯುತ್ತಮ ಆಹಾರ ನೀಡಿ, ಹೆಸರು ಗಳಿಸಿದೆ. ಇದೀಗ ಲಾಕ್​ಡೌನ್ ಕಾರಣ ಗ್ರಾಹಕರಿಗೆ ಸುರಕ್ಷಿತ ಆಹಾರ ಒದಗಿಸಲು ಹೊಸ ಸೇವೆ ಆರಂಭಿಸಿದೆ.

ಕೋವಿಡ್ ಕಾರಣ ಅನೇಕರಿಗೆ ಮನೆಯಿಂದ ಹೊರಗೆ ಬರಲು ಆತಂಕ. ಆದರೆ, ರುಚಿ ರುಚಿಯಾದ ಆಹಾರ ತಿನ್ನಬೇಕೆಂಬ ಬಯಕೆ. ಅಂತಹವರು ಗೂಗಲ್ ಪ್ಲೇ ಸ್ಟೋರ್​ಗೆ ಹೋಗಿ Al-taj App ಡೌನ್‌ಲೋಡ್‌ ಮಾಡಿ. ಮೆನು ಓಪನ್ ಮಾಡಿದ್ರೆ ಸಾಕು ಎಲ್ಲ ತರಹದ ಸಸ್ಯಹಾರಿ, ಮಾಂಸಹಾರಿ ಪಟ್ಟಿ ಬರಲಿದೆ. ನಿಮಗೆ ಯಾವುದು ಇಷ್ಟವೋ ಅದನ್ನು ಸೆಲೆಕ್ಟ್ ಮಾಡಿ, ಆರ್ಡರ್‌ ಮಾಡಿದರೆ ಸಾಕು. ಸುರಕ್ಷಿತ ಹಾಗೂ ಶುಚಿತ್ವದ ಪೊಟ್ಟಣದೊಂದಿಗೆ, ಶೀಘ್ರವಾಗಿ ನಿಮ್ಮ ಮನೆ ಬಾಗಿಲಿಗೆ ಆಹಾರ ತಲುಪುತ್ತದೆ. ಜತೆಗೆ App ಮುಖಾಂತರ ಫುಡ್ ಆರ್ಡರ್ ಮಾಡಿದ್ರೆ 20%ರಷ್ಟು ರಿಯಾಯಿತಿ ಸಹ ಇರುತ್ತೆ ಎನ್ನುತ್ತಾರೆ ‘ಅಲ್ ತಾಜ್‘ ಮಾಲೀಕರು.

ಆನ್​ಲೈನ್​ ಆ್ಯಪ್​​ನಲ್ಲಿ ಇಂಡಿಯನ್, ಚೈನೀಸ್, ತಂದೂರಿ, ಮೊಗ್ಲೈ, ಬಿರಿಯಾನಿ, ಚಿಕನ್ ಕ್ಲಿಯರ್ ಸೂಪ್ ಸೇರಿದಂತೆ ಮುಂತಾದ ರುಚಿ ರುಚಿಯಾದ ತಿನಿಸುಗಳು ಇರುತ್ತವೆ. ಇವೆಲ್ಲವನ್ನೂ App ಮೂಲಕವೇ ಆರ್ಡರ್‌ ಮಾಡಿ ತರಿಸಿಕೊಳ್ಳಬಹುದು.

ಇದನ್ನೂ ಓದಿ: ಹೂವುಗಳ ವ್ಯಾಪಾರವಿಲ್ಲದೆ ಕಂಗಾಲಾದ ರೈತರು ; ರಾಜಕಾಲುವೆಗೆ ಹೂವು ಎಸೆದು ಆಕ್ರೋಶ!

ಜತೆಗೆ ಇನ್ನೊಂದು ವಿಶೇಷ ಅಂದರೆ, ಕೊರೊನಾ ಸೋಂಕಿತರಿಗೆ, ಸಾಮಾನ್ಯ ಜನರಿಗೆ ರೋಗನಿರೋಧಕ ಶಕ್ತಿ ವೃದ್ಧಿಸಲು ಕ್ಲಿಯರ್ ಸೂಪ್ ಸಹ ತಯಾರಿಸಿ ನೀಡುತ್ತಿದ್ದು, ಗ್ರಾಹಕರಿಗೆ ಬಹಳ ಅನುಕೂಲಕರವಾಗಿದೆ. ಹೋಟೆಲ್ ಉದ್ಯಮ ನಷ್ಟದಲ್ಲಿ ಇದ್ರೂ ಹೊಸ ಮಾರ್ಗವನ್ನು ಕಂಡುಕೊಂಡು ಗ್ರಾಹಕರನ್ನು ಸೆಳೆಯುದರ ಜತೆಗೆ ಬಿಸಿ ಬಿಸಿ ಉಪಾಹಾರ ನೀಡಿ ಲಾಭದತ್ತ ಮುಖ‌ ಮಾಡಿದ್ದಾರೆ. ಒಟ್ಟಿನಲ್ಲಿ ಕೊರೊನಾ ಹೊಡೆತಕ್ಕೆ ನೆಲಕಚ್ಚಿರುವ ಹೋಟೆಲ್ ಉದ್ಯಮ, ಇದೀಗ ಆನ್​​ಲೈನ್​ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿವಾಗಿರುವುದರ ಜತೆಗೆ ಲಾಭ ಗಳಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.