ETV Bharat / state

ಹುಬ್ಬಳ್ಳಿ, ಮುಂದುವರೆದ ನಾಯಿ ದಾಳಿ : ಐದು ಮಕ್ಕಳಿಗೆ ಗಾಯ

author img

By

Published : Mar 13, 2020, 8:30 PM IST

ಹುಬ್ಬಳ್ಳಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಐದು ಮಕ್ಕಳು ತೀವ್ರ ಗಾಯಗೊಂಡ ಘಟನೆ ನಡೆದಿದೆ, ಗಾಯಗೊಂಡವರನ್ನು ನಗರದ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

five Kids Injured For Dog Attack In Hubli
ಹುಬ್ಬಳ್ಳಿ, ಮುಂದುವರೆದ ನಾಯಿ ದಾಳಿ

ಹುಬ್ಬಳ್ಳಿ : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳನ್ನು ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ ಐದಕ್ಕೂ ಹೆಚ್ಚು ಮಕ್ಕಳು ಗಂಭಿರ ಗಾಯವಾದ ಘಟನೆ ಇಲ್ಲಿನ ಇಸ್ಲಾಂಪುರ್ ಹಾಗೂ ಅಲ್ತಫ್​ ನಗರದಲ್ಲಿ ನಡೆದಿದೆ.

ಮಹ್ಮದ್ ಹಲಸಿ (8) ಇರ್ಷಾದ್ ಬುಕ್ ಬಂದರ್ (17) , ಸುಪೀಯಾನ್ (3), ಹಜರತ್ ಜಂಗ್ಲಿ (8), ಮಾವಿಯಾ ಕಿತ್ತೂರ (7) ಗಾಯಗೊಂಡ ಮಕ್ಕಳಾಗಿದ್ದು ಬೆ‌ನ್ನು ತೊಡೆಯ ಭಾಗ ಕಾಲುಗಳಿಗೆ ನಾಯಿಗಳು ಕಚ್ಚಿವೆ.

ಹುಬ್ಬಳ್ಳಿ, ಮುಂದುವರೆದ ನಾಯಿ ದಾಳಿ

ನಗರದ ಚಿಟಗುಪ್ಪಿ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ನಾಯಿಗಳ ಹಾವಳಿ ತಪ್ಪಿಸಬೇಕು ಎಂದು ನಗರದ ನಿವಾಸಿಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸ್ದಳೀಯರು ಕಿಡಿಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.