ETV Bharat / state

ಹುಬ್ಬಳ್ಳಿ: ಟೆಂಡರ್​ ಶ್ಯೂರ್​ ರಸ್ತೆಗೆ ಅಪ್ಪು​ ಹೆಸರು ಇಡುವಂತೆ ಒತ್ತಾಯ

author img

By

Published : Nov 23, 2022, 5:18 PM IST

Updated : Nov 23, 2022, 5:24 PM IST

ನಗರದ ಶಿರೂರ್ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಗೆ ಪುನೀತ್ ರಾಜಕುಮಾರ್ ಹೆಸರಿಡುವಂತೆ ಒತ್ತಾಯಿಸಿ ಯುವ ಜನತಾದಳ ವತಿಯಿಂದ ಪಾದಯಾತ್ರೆ ನಡೆಸಲಾಯಿತು.

demand to name puneeth for tender sure road
ಟೆಂಡರ್​ ಶ್ಯೂರ್​ ರಸ್ತೆಗೆ ಪುನೀತ್​ ಹೆಸರು ಇಡುವಂತೆ ಒತ್ತಾಯ

ಹುಬ್ಬಳ್ಳಿ: ನಗರದ ಟೆಂಡರ್​ ಶ್ಯೂರ್​ ರಸ್ತೆಗೆ ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​ ಹೆಸರಿಡುವಂತೆ ಯುವ ಜನತಾದಳ ಕಾರ್ಯಕರ್ತರು ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆ ನಡೆಸಿದರು.

ದುರ್ಗಾದೇವಿ ದೇವಸ್ಥಾನದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿ ಬಳಿಕ ಮಾತನಾಡಿದ ಕಾರ್ಯಕರ್ತರು, ಪುನೀತ್ ರಾಜಕುಮಾರ್​ ಸೇರಿದಂತೆ ರಾಜಕುಮಾರ್ ಕುಟುಂಬಕ್ಕೂ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಪುನೀತ್ ರಾಜಕುಮಾರ ಹೆಸರು ಅಜರಾಮರವಾಗಿಡಲು ಟೆಂಡರ್ ಶ್ಯೂರ್ ರಸ್ತೆಗೆ ಪುನೀತ್ ರಾಜಕುಮಾರ್ ಹೆಸರಿಡಬೇಕು ಹಾಗೂ ಕಂಚಿನ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಟೆಂಡರ್​ ಶ್ಯೂರ್​ ರಸ್ತೆಗೆ ಅಪ್ಪು​ ಹೆಸರು ಇಡುವಂತೆ ಒತ್ತಾಯ

ಇದನ್ನೂ ಓದಿ: ಅಪರಾಧ ಕೃತ್ಯಗಳ ಕಡಿವಾಣಕ್ಕೆ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ಹೊಸ ಪ್ಲ್ಯಾನ್

Last Updated : Nov 23, 2022, 5:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.