ETV Bharat / state

ಸೈನಿಕರ ಸೋಗಿನಲ್ಲಿ ವಂಚನೆ: ಯುವಕರೇ ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಇರಲಿ ಎಚ್ಚರ

author img

By

Published : Jan 22, 2021, 4:10 PM IST

ಸಾಮಾಜಿಕ ಜಾಲತಾಣದಲ್ಲಿ ಸೈನಿಕರ ಹೆಸರಲ್ಲಿ ಪೋಸ್ಟ್ ಹಾಕಿ ಯುವಕರನ್ನು ಸೆಳೆದು ಫೋನ್ ಮುಖಾಂತರ ಅಕೌಂಟ್​ಗೆ ಹಣ ಹಾಕಿಸಿಕೊಂಡು ವಂಚಕರು ಮೋಸ ಮಾಡುತ್ತಿದ್ದಾರೆ.

Hubli Cyber crime
ವಂಚನೆ

ಹುಬ್ಬಳ್ಳಿ: ಯುವ ಸಮುದಾಯದಲ್ಲಿ ಭಾರತೀಯ ಸೈನಿಕರ ಬಗ್ಗೆ ಒಳ್ಳೆಯ ಗೌರವವಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಯುವಕರಿಗೆ ವಂಚಿಸುತ್ತಿದ್ದಾರೆ.

ಸೈನಿಕರ ಸೋಗಿನಲ್ಲಿ ವಂಚನೆ

ಹೌದು, ಸಾಮಾಜಿಕ ಜಾಲತಾಣದಲ್ಲಿ ಆಕರ್ಷಕ ಕ್ಯಾಮರಾ, ಎಲೆಕ್ಟ್ರಾನಿಕ್ ಉಪಕರಣಗಳು ಕಡಿಮೆ ಬೆಲೆಗೆ ಮಾರಾಟ ಮಾಡುವ ಜಾಹೀರಾತು ಹಾಕಿ ಯುವಕರನ್ನು ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಸಾಮಾಜಿಕ ಜಾಲತಾಣದಲ್ಲಿ ಸೈನಿಕರ ಹೆಸರಲ್ಲಿ ಪೋಸ್ಟ್ ಹಾಕಿ ಯುವಕರನ್ನು ಸೆಳೆದು, ಫೋನ್ ಮುಖಾಂತರ ಅಕೌಂಟ್​ಗೆ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. ಅಲ್ಲದೆ ಸೈನಿಕರ ಬಗ್ಗೆ ಯುವಕರಲ್ಲಿರುವ ಗೌರವವನ್ನು ಬಂಡವಾಳ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ದುಡ್ಡು ಮಾಡಿಕೊಂಡು ಮೋಸ ಮಾಡುತ್ತಿದ್ದಾರೆ‌.

online payment
ಆನ್​ಲೈನ್​ ಪೇಮೆಂಟ್​

ಕಡಿಮೆ ಬೆಲೆಗೆ ದೊಡ್ಡ ಮೊತ್ತದ ವಸ್ತು ಸಿಗುತ್ತದೆ ಎಂಬುವಂತಹ ಸುಳ್ಳು ವದಂತಿಯನ್ನು ನಂಬಿಕೊಂಡು ಯುವಕರು ಕೈ ಸುಟ್ಟಕೊಳ್ಳುತ್ತಿದ್ದಾರೆ. ಇದೆಲ್ಲದರ ಮಾಹಿತಿ ಇದ್ದರೂ ಕೂಡ ಯುವ ಸಮುದಾಯದ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ನು ಮುಂದಾದರೂ ಯುವಕರು ಜಾಗೃತರಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.