ETV Bharat / state

ಮೋದಿ - ಶಾ ಶನಿಗಳಂತೆ ದೇಶಕ್ಕೆ ವಕ್ಕರಿಸಿದ್ದಾರೆ :  ಉಗ್ರಪ್ಪ ಉಗ್ರಾವತಾರ!

author img

By

Published : Jan 23, 2020, 7:08 PM IST

Updated : Jan 23, 2020, 7:21 PM IST

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಶನಿಗಳಂತೆ ವಕ್ಕರಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

hubli
ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ಹುಬ್ಬಳ್ಳಿ: ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಶನಿಗಳಂತೆ ಒಕ್ಕರಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಲ್ಲ ವ್ಯವಸ್ಥೆಗಳಲ್ಲಿ ವಿಫಲವಾಗಿದೆ. ದೇಶದಲ್ಲಿ ಪ್ರಜಾಸತ್ತಾತ್ಮಕ ವಾತಾವರಣವಿಲ್ಲ. ದೇಶದಲ್ಲಿ ಅಮಿತ್ ಶಾ ಹಾಗೂ ಮೋದಿಯವರ ಸರ್ವಾಧಿಕಾರ ಪ್ರವೃತ್ತಿ ನಡೆಯುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲಕಚ್ಚಿದೆ. ಭಾವನಾತ್ಮಕವಾಗಿ ದೇಶದ ಜನರ ದಾರಿಯನ್ನು ತಪ್ಪಿಸುತ್ತಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ‌ ಬಿಜೆಪಿ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.

ಇನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಕುರಿತು ಮಾತನಾಡಿದ ಅವರು, ಬಾಂಬರ್ ಆದಿತ್ಯ ರಾವ್ ತಾನಾಗಿಯೇ ಶರಣಾಗಿದ್ದಾನೆ. ಇಲ್ಲವಾಗಿದ್ದರೆ ಏನು ಮಾಡುತ್ತಿದ್ದೀರಿ ಬಸವರಾಜ ಬೊಮ್ಮಾಯಿಯವರೇ? ಎಂದು ಪ್ರಶ್ನಿಸಿದರು. ರಾಜ್ಯ ಹಾಗೂ ದೇಶದ ಬೇಹುಗಾರಿಕೆ ಇಲಾಖೆಯವರು ಸತ್ತು ಹೋಗಿದ್ದಾರೆ. ಬೇಹುಗಾರಿಕೆ ಇಲಾಖೆ ನಿಷ್ಕ್ರೀಯಗೊಂಡಿರುವುದಕ್ಕೆ ನೇರವಾಗಿ ರಾಜ್ಯ ಹಾಗೂ ಕೇಂದ್ರ ಗೃಹ ಸಚಿವರೇ ನೇರಹೊಣೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಭೇಟಿಯಾಗಲು ಮೋದಿ ಹಾಗೂ ಅಮಿತ್​ ಶಾ ಸಮಯವಕಾಶ ನೀಡುತ್ತಿಲ್ಲ. ಇದು ಮುಖ್ಯಮಂತ್ರಿಗೆ ಆದ ಅವಮಾನವಲ್ಲ. ಇಡೀ ರಾಜ್ಯಕ್ಕೆ ಆದ ಅವಮಾನ. ಮೋದಿ ಹಾಗೂ ಶಾ ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಇದೇ ವೇಳೆ ಹರಿಹಾಯ್ದರು.

Intro:ಹುಬ್ಬಳ್ಳಿ-05

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಶನಿಗಳಂತೆ ಒಕ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಸಿಎಎ ಕುರಿತಂತೆ ಅಮಿತ್ ಶಾ ರಾಹುಲ್ ಗಾಂಧಿಯವರಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದಾರೆ. ಸಂಸತ್ತಿಗೆ ಆಗಮಿಸುವ ಪ್ರವೃತ್ತಿಯೇ ಪ್ರಧಾನಿಗೆ ಇಲ್ಲ. ಪತ್ರಕರ್ತರಿಗೇ ಸಿಗುವುದಿಲ್ಲ.ಅದು ಹೇಗೆ ಚರ್ಚೆಗೆ ನೀವು ಸವಾಲು ಹಾಕುತ್ತೀರಾ? ಎಂದು ಮರುಪ್ರಶ್ನೆ ಹಾಕಿದ ಅವರು,
ಅಮಿತ್ ಶಾ ನಿಮ್ಮ ಮಾತಿನ ಮೇಲೆ ಬದ್ಧತೆ ಇದ್ದರೆ ನಾವು ಸವಾಲಿಗೆ ಸಿದ್ಧ ನೀವು ಯಾವಾಗ ಹೇಳಿತ್ತಿರೋ ಅಂದು ನಾವು ಚರ್ಚೆಗೆ ಬರುತ್ತೇವೆ ಎಂದು ಮರುಸವಾಲು ಹಾಕಿದರು.

ಕೇಂದ್ರ ಸರ್ಕಾರ ಎಲ್ಲ ವ್ಯವಸ್ಥೆಗಳಲ್ಲಿ ವಿಫಲವಾಗಿದೆ.
ದೇಶದಲ್ಲಿ ಪ್ರಜಾಸತ್ತಾತ್ಮಕ ವಾತಾವರಣವಿಲ್ಲ.
ವಿರೋಧ ಪಕ್ಷಗಳ ಮೇಲೆ ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ.ದೇಶದಲ್ಲಿ ಅಮಿತ್ ಶಾ ಹಾಗೂ ಮೋದಿಯವರ ಸರ್ವಾಧಿಕಾರ ಪ್ರವೃತ್ತಿ ನಡೆಯುತ್ತಿದೆ. ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲಕಚ್ಚಿದೆ. ಭಾವನಾತ್ಮಕವಾಗಿ ದೇಶದ ಜನರ ದಾರಿಯನ್ನ ತಪ್ಪಿಸುತ್ತಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ‌ ಬಿಜೆಪಿ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಕುರಿತು ಮಾತನಾಡಿದ ಅವರು,
ಬಾಂಬರ್ ಆದಿತ್ಯ ರಾವ್ ತಾನಾಗಿಯೇ ಶರಣಾಗದಿದ್ದಾನೆ. ಇಲ್ಲವಾಗಿದ್ದರೆ ಏನು ಮಾಡುತ್ತಿದ್ದಿರಿ ಬಸವರಾಜ ಬೊಮ್ಮಾಯಿಯವರೇ ? ಎಂದು ಪ್ರಶ್ನಿಸಿದರು. ರಾಜ್ಯ ಹಾಗೂ ದೇಶದ ಬೇಹುಗಾರಿಕೆ ಇಲಾಖೆಯವರು ಸತ್ತು ಹೋಗಿದ್ದಾರೆ. ಬೇಹುಗಾರಿಕೆ ಇಲಾಖೆ ನಿಷ್ಕ್ರೀಯಗೊಂಡಿರುವುದಕ್ಕೆ ನೇರವಾಗಿ ರಾಜ್ಯ ಹಾಗೂ ಕೇಂದ್ರ ಗೃಹ ಸಚಿವರೇ ನೇರಹೊಣೆ ಎಂದು ಅವರು ಹೇಳಿದರು.

ಪ್ರಧಾನಿ ಹಾಗೂ ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದೀರಿ? ಎಂದ ಅವರು,ದೇಶ ಹಾಗೂ ರಾಜ್ಯದ ಹಿತ ಕಾಪಾಡಲು ಆಗದಿದ್ದರೆ ನಿಮಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಭೇಟಿಯಾಗಲು ಮೋದಿ ಹಾಗೂ ಶಾ ಸಮಯಾವಕಾಶ ನೀಡುತ್ತಿಲ್ಲ. ಇದು ಮುಖ್ಯಮಂತ್ರಿಗೆ ಆದ ಅವಮಾನವಲ್ಲ. ಇಡೀ ರಾಜ್ಯಕ್ಕೆ ಆದ ಅವಮಾನ. ಮೋದಿ ಹಾಗೂ ಶಾ ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ಯಡಿಯೂರಪ್ಪನವರನ್ನು ಮಾಧ್ಯಮಗಳಲ್ಲಿ ರಾಜಾಹುಲಿ ಎಂದು ಬಿಂಬಿಸಲಾಗುತ್ತಿದೆ. ಆದ್ರೆ ಅವರು ಈಗ ರಾಜಾಇಲಿಯಾಗಿದ್ದಾರೆ ಎಂದು‌ ಕುಟುಕಿಉಗ್ರಪ್ಪ
ಬೈಟ್ - ವಿ.ಎಸ್.ಉಗ್ರಪ್ಪ , ಮಾಜಿ ಸಂಸದBody:H B GaddadConclusion:Etv hubli
Last Updated : Jan 23, 2020, 7:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.