ETV Bharat / state

ಹುಬ್ಬಳ್ಳಿಗೆ ಆಗಮಿಸಿದ ರಾಷ್ಟ್ರಪತಿ ಮುರ್ಮು: ಸಿಎಂ ಹಾಗೂ ಸಚಿವರಿಂದ ಅದ್ಧೂರಿ ಸ್ವಾಗತ

author img

By

Published : Sep 26, 2022, 1:25 PM IST

Updated : Sep 26, 2022, 2:28 PM IST

ಪೌರಸನ್ಮಾನ ಕಾರ್ಯಕ್ರಕ್ಕೆ ಕೆಲವರಿಗೆ VIP ಪಾಸ್​ ನೀಡಲಾಗಿದೆ. VIP ಪಾಸ್​ ಇದ್ದು ತಡವಾಗಿ ಬಂದವರಿಗೆ ಯಾರಿಗೂ ಕಾರ್ಯಕ್ರಮ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ.

CM and Ministers grand welcome to President
ಸಿಎಂ ಹಾಗೂ ಸಚಿವರಿಂದ ರಾಷ್ಟ್ರಪತಿಗೆ ಅದ್ದೂರಿ ಸ್ವಾಗತ.

ಹುಬ್ಬಳ್ಳಿ: ಮೈಸೂರು ಕಾರ್ಯಕ್ರಮ ಮುಗಿಸಿಕೊಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ವಿಮಾನದ ಮೂಲಕ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಪೌರಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜ್ಯಪಾಲ ಥಾವರಚಂದ್​ ಗೆಹ್ಲೋಟ್​, ಸಿಎ‌ಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಹೂಗುಚ್ಛ ನೀಡಿ ಸ್ವಾಗತಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಜಿಮ್ ಖಾನಾ ಮೈದಾನದತ್ತ ದ್ರೌಪದಿ‌ ಮುರ್ಮು ಪ್ರಯಾಣ ಬೆಳೆಸಿದ್ದು, ಇನ್ನೇನು ಕೆಲವೇ ಕ್ಷಣದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ ಸ್ವೀಕರಿಸಲಿದ್ದಾರೆ.

ಸಿಎಂ ಹಾಗೂ ಸಚಿವರಿಂದ ರಾಷ್ಟ್ರಪತಿಗೆ ಅದ್ದೂರಿ ಸ್ವಾಗತ.

ರಾಷ್ಟ್ರಪತಿ ದ್ರೌಪತಿ ಮುರ್ಮು ಜೊತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಗಳನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವರಾದ ಶಂಕರಪಾಟೀಲ್ ಮುನೇನಕೊಪ್ಪ, ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ್, ಪ್ರಸಾದ್ ಅಬ್ಬಯ್ಯ ಹಾಗೂ ಸಲೀಂ ಅಹ್ಮದ್ ಸ್ವಾಗತಿಸಿದರು.

VIP, VVIP ಪಾಸ್ ಇದ್ದರು ಲೇಟ್ ಆಗಿ ಬಂದ್ರೆ ನೋ ಎಂಟ್ರಿ: ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಕೆಲ ಜನರಿಗೆ VIP ಪಾಸ್ ನೀಡಿದ್ದಾರೆ‌. ಆದರೆ ಕಾರ್ಯಕ್ರಮಕ್ಕೆ ತಡವಾಗಿ ಬಂದರೆ ಯಾವ ಪಾಸ್ ಇದ್ದರೂ ನೋ ಎಂಟ್ರಿ. ಎಷ್ಟೇ ವಾದ ಮಾಡಿದರೂ ಪೊಲೀಸರು ಮರಳಿ ಕಳುಹಿಸಿದ್ದಾರೆ.

ತಡವಾಗಿ ಬಂದ ಬಿಜೆಪಿ, ಕಾಂಗ್ರೆಸ್ ಮುಖಂಡರು ಕೂಡ ಒಳಗೆ ಬಿಡುವ ವಿಚಾರಕ್ಕೆ ಪೊಲೀಸರ ಜೊತೆ ವಾಗ್ವಾದ ಮಾಡಿದ್ದಾರೆ. ಏನೇ ಆದರು ಒಳಗೆ ಬಿಡುವುದಿಲ್ಲವೆಂದು ಮರಳಿ ಕಳುಹಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಗೆ ರಾಷ್ಟ್ರಪತಿ.. ಪ್ರೆಸಿಡೆಂಟ್ ಮುರ್ಮು ಕಾರ್ಯಕ್ರಮಕ್ಕೆ ಆಗಮಿಸಿದ ಬುಡಕಟ್ಟು ಜನ

Last Updated : Sep 26, 2022, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.