ETV Bharat / state

ಧಾರವಾಡ: ಹೆಣ್ಣು ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದ ಚಾರ್ಲಿ

author img

By

Published : Sep 19, 2022, 12:20 PM IST

Updated : Sep 19, 2022, 4:55 PM IST

ಹೆಣ್ಣು ಶ್ವಾನವೊಂದು ಅಸ್ವಸ್ಥಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿತ್ತು. ಈ ವೇಳೆ ಚಾರ್ಲಿ ಎಂಬ ಶ್ವಾನ ರಕ್ತದಾನ ಮಾಡಿ ಮತ್ತೊಂದು ಶ್ವಾನದ ಜೀವ ಉಳಿಸಲು ಆಸರೆಯಾದ ಘಟನೆ ಧಾರವಾಡ ಜಿಲ್ಲೆಯಲ್ಲಿ ಕಂಡುಬಂದಿದೆ.

Charlie saved female dog life  Charlie saved female dog life by donating blood  Dharwad agriculture fair  ಹೆಣ್ಣು ಶ್ವಾನಕ್ಕೆ ರಕ್ತದಾನ  ಹೆಣ್ಣು ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದ ಚಾರ್ಲಿ  ಶ್ವಾನ ರಕ್ತದಾನ ಮಾಡಿ ಮತ್ತೊಂದು ಶ್ವಾನ ಉಳುವಿಗೆ ಆಸರೆ  ಧಾರವಾಡದ ಕೃಷಿ ಮೇಳ  ಕೃಷಿ ವಿಶ್ವವಿದ್ಯಾಲಯ ಕೃಷಿಮೇಳ ಆರಂಭ  ಮಾಯಾ ಹೆಸರಿನ ಶ್ವಾನಕ್ಕೆ ಚಾರ್ಲಿ ಎಂಬ ಶ್ವಾನ ರಕ್ತದಾನ  ಏರ್‌ಪೋರ್ಟ್ ಭದ್ರತೆಯಲ್ಲಿದ್ದ ಮಾಯಾ ಹೆಸರಿನ ಶ್ವಾನ
ಹೆಣ್ಣು ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದ ಚಾರ್ಲಿ

ಧಾರವಾಡ: ಕೃಷಿ ವಿಶ್ವವಿದ್ಯಾಲಯ ಕೃಷಿಮೇಳ ಆರಂಭಗೊಂಡು ಇಂದಿಗೆ ಮೂರು ದಿನ ಕಳೆಯಿತು. ಈ ಬಾರಿ ಮೇಳ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಶ್ವಾನವೊಂದು ರಕ್ತದಾನ ಮಾಡುವ ಮೂಲಕ ಇನ್ನೊಂದು ಶ್ವಾನದ ಜೀವ ಉಳಿಸಿದೆ.

ಧಾರವಾಡದ ಕೃಷಿ ಮೇಳದಲ್ಲಿ ಮಾಯಾ ಹೆಸರಿನ ಶ್ವಾನಕ್ಕೆ ಚಾರ್ಲಿ ಎಂಬ ಶ್ವಾನ ರಕ್ತದಾನ ಮಾಡಿ ಜೀವ ಉಳಿಸಿದೆ. ಚಾರ್ಲಿ ಶ್ವಾನದಿಂದ ರಕ್ತದಾನ ಮಾಡಿಸಿ ಮಾಲೀಕ ಸೋಮಶೇಖರ್ ಮಾನವೀಯತೆ ಮೆರೆದಿದ್ದಾರೆ.

ಹೆಣ್ಣು ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದ ಚಾರ್ಲಿ

ಹುಬ್ಬಳ್ಳಿ ಏರ್‌ಪೋರ್ಟ್ ಭದ್ರತೆಯಲ್ಲಿದ್ದ ಮಾಯಾ ಹೆಸರಿನ ಶ್ವಾನ ಕಳೆದ‌ ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತಿತ್ತು. ಭಾನುವಾರ ಧಾರವಾಡ ಕೃಷಿ ವಿವಿಯ ಪಶು ಆಸ್ಪತ್ರೆಗೆ ಮಾಯಾಗೆ ಚಿಕಿತ್ಸೆ ಕೊಡಿಸಲು ತರಲಾಗಿತ್ತು. ಈ ವೇಳೆ ಪ್ರಾಣಿ ಪ್ರೀಯ ಸೋಮಶೇಖರ ಮಾಯಾ ನೋಡಿ ಮರಗಿದ್ದಾರೆ. ನಂತರ ತಮ್ಮ ಚಾರ್ಲಿ ಹೆಸರಿನ ಜರ್ಮನ್ ಶಫರ್ಡ್ ನಾಯಿಯಿಂದ ರಕ್ತದಾನ ಮಾಡಿಸಿದ್ದಾರೆ.

ಸದ್ಯ ಮಾಯಾಗೆ ಒಂದು ಯುನಿಟ್ ರಕ್ತ ಕೊಟ್ಟಿರುವ ಚಾರ್ಲಿ, ಅವಶ್ಯಕತೆ ಬಿದ್ರೆ ಇನ್ನು ಸ್ವಲ್ಪ ರಕ್ತ ಕೊಡಲಿದೆ‌. ಮಾಯಾ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದ ಹಿನ್ನೆಲೆ ಏರ್​ಪೋರ್ಟ್ ಸಿಬ್ಬಂದಿಯು ತಮ್ಮ ಶ್ವಾನವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೋಗಿದ್ದಾರೆ.

ಓದಿ: ನಾಯಿಗಳ ಪೋಷಕನಿಗೆ ಆರ್ಥಿಕ ಸಂಕಷ್ಟ: ದಾನಿಗಳ ನಿರೀಕ್ಷೆಯಲ್ಲಿ ರಾಜೇಶ್​

Last Updated : Sep 19, 2022, 4:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.