ETV Bharat / state

ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸೋಕೆ ಬರೊಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

author img

By ETV Bharat Karnataka Team

Published : Sep 23, 2023, 4:18 PM IST

Updated : Sep 23, 2023, 5:18 PM IST

BJP JDS alliance: ಬಿಜೆಪಿ ಜೆಡಿಎಸ್‌ ಮೈತ್ರಿ ಅಂತಿಮವಾಗಿದೆ. ಆದರೆ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಎನ್​​​ಡಿಎ ಒಕ್ಕೂಟ ಸೇರಿದ್ದೇವೆ ಎಂದು ಎಚ್ ಡಿ ಕುಮಾರಸ್ವಾಮಿ ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದಾರೆ. ಕುಮಾರಸ್ವಾಮಿ ನಮ್ಮ ಎನ್​ಡಿಎ ಜೊತೆ ಸೇರಿರೋದು ಸಂತಸದ ವಿಷಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

Union Minister Prahlad Joshi spoke to reporters.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹುಬ್ಬಳ್ಳಿ: ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವುದಕ್ಕೆ ಬರೋದಿಲ್ಲ. ಸರ್ಕಾರ ಅವರ ಡ್ಯಾಂ ನೀರಿನ ಸಂಗ್ರಹ ನೋಡಿ, ನಮ್ಮ ಡ್ಯಾಂ ನೀರಿನ ಸ್ಥಿತಿ ನೋಡಿ ಎಂದು ಸರ್ಕಾರ ವಾದ ಮಾಡಿಲ್ಲ. ಇದರಿಂದಾಗಿ ರಾಜ್ಯಕ್ಕೆ ಹಿನ್ನಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಡಿ ಕೆ ಸುರೇಶ್ ಅವರೇ ಆನ್​ಲೈನ್ ಮೂಲಕ ಹಾಜರಾಗೋದು ಅಂತಹ ಎಲ್ಲ ಸಂಗತಿಗಳು ನಡೆದುಹೋಗಿವೆ ಅಂತ ಹೇಳಿದ್ದಾರೆ.ನಾವು ಕೇಂದ್ರದಿಂದ ಎಲ್ಲ ಸಹಕಾರ ಕೊಡ್ತೀದಿವಿ.ಮುಂದೆಯೂ ಕೊಡ್ತೀವಿ. ವಿಚಾರ ಕೋರ್ಟ್ ನಲ್ಲಿರೋ ಕಾರಣ ನಾನು ಬಹಳ ಮಾತಾಡಲ್ಲ. ಮೊನ್ನೆ ಡಿ ಕೆ ಶಿವಕುಮಾರ್ ನಮ್ಮ ಮನೆಗೆ ಬಂದಾಗ ವಿವರವಾಗಿ ಮಾತಾಡಿದ್ದೇನೆ ಎಂದರು.

CWMA ನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ಮಾಡೋಕೆ ಬರಲ್ಲ. ಇದು ಸೌಹಾರ್ದಯುತವಾಗಿ ಬಗೆಹರಿಸಬೇಕು. ಡಿಎಂಕೆ ನಾಯಕರಿಗೆ ನೀವು ಮೊದಲು ಶಾಲುಪೇಟಾ ಹಾಕಿ ಸ್ವಾಗತ ಮಾಡಿದ್ದೀರಿ. ತಮಿಳುನಾಡಿನ ಬೆಳೆಗೆ ಜಾಸ್ತಿ ನೀರು ಉಪಯೋಗಿಸಿದ್ದಾರೆ. ಅವರ ಮೈತ್ರಿ ಪಕ್ಷಕ್ಕೆ ಒಂದಿಷ್ಟು ಸಮಯ ಕೇಳಬಹುದಿತ್ತು. ಡಿಎಂಕೆ ಅವರು ದಿನಾ ಬೆಳಗ್ಗೆ ಎದ್ರೆ ಮೋದಿ ಅವರನ್ನು ಬಯ್ಯೋ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ತರಹ ಮೋದಿ ಅವರನ್ನು ಬೈಯೋದೆ ಅವರ ಕೆಲಸ‌. ನಾವು ಕರೆದರೆ ಯಾಕೆ ಅವರು ಬರ್ತಾರೆ ಎಂದು ಪ್ರಶ್ನಿಸಿದರು.

ಮೋದಿ ಮೇಲೆ ಗೂಬೆ ಕೂರಿಸೋದು ಇವರ ಕೆಲಸ: ಜನರನ್ಮು ತಪ್ಪುದಾರಿಗೆ ಎಳೆಯಲು ಸಿದ್ದರಾಮಯ್ಯ ನಿಸ್ಸೀಮರು. ತಪ್ಪು ಮುಚ್ಚಿಕೊಳ್ಳಲು ಜನರನ್ನು ತಪ್ಪು ದಾರಿಗೆ ಸಿದ್ದರಾಮಯ್ಯ ಎಳೆಯುತ್ತಿದ್ದಾರೆ. ಈವರೆಗೆ ಖರ್ಗೆ ಅವರು ಯಾಕೆ ಇಬ್ಬರನ್ನು ಕರೆದು ಮಾತಾಡಿಲ್ಲ. ಮೈತ್ರಿ ನಾಯಕರು ಖರ್ಗೆ ಅವರೇ, ಯಾಕೆ ಇಬ್ಬರನ್ನು ಕರೆದು ಮಾತಾಡಿಲ್ಲ. ಎಲ್ಲವನ್ನೂ ಮೋದಿ ಮೇಲೆ ಗೂಬೆ ಕೂರಿಸೋದು ಇವರ ಕೆಲಸ ಎಂದು ದೂರಿದರು.

ಬಿಜೆಪಿ ಜೊತೆ ಮೈತ್ರಿ ಅಂತಿಮ: ಬಿಜೆಪಿ,‌ ಜೆಡಿಎಸ್‌ ಮೈತ್ರಿ ಅಂತಿಮವಾಗಿದೆ. ಆದರೆ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಎನ್​​​ಡಿಎ ಒಕ್ಕೂಟ ಸೇರಿದ್ದೇವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ನಮ್ಮ ಜೊತೆ ಸೇರಿರೋದು ಸಂತೋಷದ ಸಂಗತಿ. ಎನ್ ಡಿ ಎ ಹೆಸರು ನಮಗೆ ಬದಲಾವಣೆ ಮಾಡೋ ಅವಶ್ಯಕತೆ ಇಲ್ಲ‌. ಯಾಕಂದ್ರೆ ನಮ್ಮ ಪಕ್ಷದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಇಲ್ಲ. 1998 ರಲ್ಲಿ 1999 ರಲ್ಲಿ ಎನ್ ಡಿ ಎ ಸರ್ಕಾರ ಮಾಡಿದ್ವಿ. 2014 ಹಾಗೂ 2019 ಕ್ಕೆ ಎನ್​​​ಡಿಎ ಅಧಿಕಾರಕ್ಕೆ ಬಂದಿದೆ‌. ಯಾವುದೇ ಸಮಯದಲ್ಲಿ ಎನ್ ಡಿ ಎ ಹೆಸರು ಬದಲಾವಣೆ ಮಾಡೋ ಅವಶ್ಯಕತೆ ಬರಲಿಲ್ಲ. ಯಾಕೆಂದ್ರೆ ಎನ್ ಡಿ ಎ ಮೇಲೆ ಒಂದೇ ಒಂದು ಆರೋಪ ಇಲ್ಲ ಎಂದು ಜೋಶಿ ಸಮರ್ಥನೆ ಮಾಡಿಕೊಂಡರು.

ಯುಪಿಎ ವಿರುದ್ಧ ಭ್ರಷ್ಟಾಚಾರ ಆರೋಪ: ಯುಪಿಎ ವಿರುದ್ಧ 12 ಲಕ್ಷ ಕೋಟಿ ಭ್ರಷ್ಟಾಚಾರ ಆರೋಪ ಇದೆ. ಈ ಕಾರಣಕ್ಕೆ ಯುಪಿಎ ಹೆಸರು ಬದಲಾವಣೆ ಆಗಿದೆ. ಆದ್ರೆ ಎನ್ ಡಿ ಎ ಯಾವತ್ತೂ ತನ್ನ ಹೆಸರು ಬದಲಾವಣೆ ಮಾಡಿಲ್ಲ. ಇದೀಗ ಜೆಡಿಎಸ್ ನಮ್ಮ ಜೊತೆ ಸೇರಿರೋದು ಸಂತೋಷ‌. ಆದ್ರೆ ಇದುವರೆಗೂ ಯಾವುದೇ ಕ್ಷೇತ್ರ ಅಥವಾ ಇಷ್ಟೇ ಸ್ಥಾನ ಎಂಬ ಬಗ್ಗೆ ಚರ್ಚೆಯಾಗಿಲ್ಲ. ಅದನ್ನು ರಾಜ್ಯದ ನಾಯಕರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು.

ಕರ್ನಾಟಕದ ನೀರು ನೆಲ ಸಂರಕ್ಷಣೆಗೆ ಬದ್ಧ: ಕಾವೇರಿ ನದಿ ನೀರಿನ ವಿಚಾರ ಕರ್ನಾಟಕದ ನೀರು, ನೆಲ ಸಂರಕ್ಷಣೆಗೆ ನಾವು ಸದಾ ಬದ್ಧ ಇದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು. ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 1.50 ಲಕ್ಷ ಕೋಟಿ ಅನುದಾನ ನೀಡಿದ್ದು, ಬಂದ ಆ ಎಲ್ಲ ಅನುದಾನವನ್ನು ಗ್ಯಾರಂಟಿಗಳಿಗೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಣೇಶ ಹಬ್ಬ ವಿಷಯದಲ್ಲಿ ಸಾಕಷ್ಟು ಅನ್ಯಾಯ ಆಗುತ್ತಿದೆ. ಸರ್ಕಾರದ ನಿರ್ದೇಶನದ ಮೇರೆಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ. ಅಲ್ಲಲ್ಲಿ ತೊಂದರೆ ಕೊಡುತ್ತಿದ್ದಾರೆ. ಗಣಪತಿ ಪ್ರತಿಷ್ಠಾಪನೆ ದಿನ ಧಾರವಾಡದ ಸತ್ತೂರ ಬಡಾವಣೆಯಲ್ಲಿಯೂ ಘಟನೆ ನಡೆದಿದೆ. ವಿದ್ಯಾಗಿರಿ ಠಾಣೆ ಪೊಲೀಸರು ಒಬ್ಬ ಯುವಕನನ್ನು ಹೊಡೆದಿದ್ದಾರೆ. ಮ್ಯೂಸಿಕ್ ಹಚ್ಚಬೇಡಿ ಅಂತಾ ಠಾಣೆಗೆ ಕರೆದು ಹೊಡೆದಿದ್ದಾರೆ ಎಂದು ಜೋಶಿ ಆರೋಪಿಸಿದರು.

ಸಿಪಿಐ ಅಮಾನತು ಮಾಡಬೇಕು. ಪ್ರದೀಪ್​ ಎಂಬ ಹುಡುಗನನ್ನು ಹೊಡೆದಿದ್ದಾರೆ. ಈ ಬಗ್ಗೆ ದೂರು ಸಲ್ಲಿಸುತ್ತೇವೆ. ಹಿಂದು ಹಬ್ಬ ಆಚರಣೆ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್​ ಸರ್ಕಾರದ ಕುಮ್ಮಕ್ಕಿನ ಮೇರೆಗೆ ಇದೆಲ್ಲ ಆಗುತ್ತಿದೆ. ಇದನ್ನು ಸಹಿಸುವುದಿಲ್ಲ, ಈ ರೀತಿಯ ದುರ್ವತನೆಗೆ ಸಾವು ಸುಮ್ಮನೆ ಇರುವುದಿಲ್ಲ. ನಾವು ರಾಜ್ಯದಲ್ಲಿ ಚುನಾವಣೆ ಸೋತಿರಬಹುದು. ಆದರೆ ಹೋರಾಟ ಮಾಡಲು ಗಟ್ಟಿ ಇದ್ದೇವೆ. ಹಿಂದು ಚಟುವಟಿಕೆಗಳನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಡಿಜೆ ಹಚ್ಚಿಯೇ ಹಚ್ಚುತ್ತೇವೆ. ಡಿಜೆ ತಡೆದರೆ ಗಣಪತಿ ಅಲ್ಲೇ ಇಟ್ಟು ಪ್ರತಿಭಟನೆ ಮಾಡುತ್ತೇವೆ ಎಂದರು.

ಭಾರತ ಜಗತ್ತಿನ 3ನೇ ದೊಡ್ಡ ಪ್ರಬಲ ರಾಷ್ಟ್ರ:ಧಾರವಾಡದ ಸತ್ತೂರಿನಲ್ಲಿ ನಡೆದ 'ನನ್ನ ದೇಶ ನನ್ನ ಮಣ್ಣು' ಕಾರ್ಯಕ್ರಮದಲ್ಲಿ ಸಚಿವ ಜೋಶಿ ಮಾತನಾಡಿ, ಜಗತ್ತಿನ ಅತ್ಯಂತ ಪ್ರಮುಖ ದೇಶದವರು ನಮ್ಮ ದೇಶದ ಪ್ರಧಾನಿ ಹಿಂದೆ ಓಡಾಡುತ್ತಿದ್ದಾರೆ. ಭಾರತ ಈಗ ಶಕ್ತಿಶಾಲಿ ರಾಷ್ಟ್ರವಾಗಿದೆ. ಅಮೆರಿಕ, ಇಂಗ್ಲೆಂಡ್ ದೇಶದವರಲ್ಲಿ ನಾವು ಅಪಾಯಿಂಟ್ಮೆಂಟ್ ಕೇಳುತ್ತಿದ್ದೇವು. ಈಗ ಅವರೇ ಮೋದಿಯವರ ಜೊತೆ ಸೆಲ್ಫಿ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ದೇಶದ ಆರ್ಥಿಕ ಶಕ್ತಿ ಬೆಳೆದಿದೆ. ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನ 3ನೇ ದೊಡ್ಡ ಪ್ರಬಲ ರಾಷ್ಟ್ರವಾಗಲಿದೆ. ಪಾಕಿಸ್ತಾನ ಈಗ ನಮಗೆ ಲೆಕ್ಕಕ್ಕೆ ಇಲ್ಲ, ಚೀನಾ ತೊಂದರೆ ಕೊಟ್ಟರೆ ಅವರನ್ನೂ ಎದುರಿಸುತ್ತೇವೆ. ಚೀನಾದವರನ್ನೂ ಎದುರಿಸುವ ಶಕ್ತಿ ಭಾರತಕ್ಕೆ ಬಂದಿದೆ ಎಂದರು.

ಇದನ್ನೂಓದಿ:ಕಾವೇರಿ ಬಿಕ್ಕಟ್ಟು: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ... ರಸ್ತೆ ತಡೆಗೆ ಮುಂದಾದ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

Last Updated : Sep 23, 2023, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.