ETV Bharat / state

ಫ್ಲಾಟ್​​ ಕೊಡದ ಬಿಲ್ಡರ್​ಗೆ 5 ಲಕ್ಷ ದಂಡ : ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಆದೇಶ

author img

By

Published : Nov 10, 2022, 6:47 PM IST

ಫ್ಲಾಟ್​ ನೀಡುವುದಾಗಿ ಹೇಳಿ ಮುಂಗಡ ಹಣ ಪಡೆದು ಮಹಿಳೆಗೆ ಮೋಸ ಮಾಡಿದ್ದ ಬಿಲ್ಡರ್​ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ 5 ಲಕ್ಷದ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.

builder-fined-by-dharwad-district-consumer-court
ಫ್ಲಾಟ್​​ ಕೊಡದ ಬಿಲ್ಡರ್​ಗೆ 5 ಲಕ್ಷ ದಂಡ : ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶ

ಧಾರವಾಡ: ಫ್ಲಾಟ್​​ ನೀಡದ ಬಿಲ್ಡರ್​ಗೆ 5 ಲಕ್ಷ 10 ಸಾವಿರ ದಂಡ ವಿಧಿಸಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ. ಹುಬ್ಬಳ್ಳಿ ನಗರದ ಗೋಕುಲ ರೋಡ್​​ ನಿವಾಸಿ ಸಪ್ನಾ ಮುಸಾಳೆ ಎಂಬವರಿಗೆ ಶ್ರೀರೇಣುಕಾ ಲಕ್ಷ್ಮಿ ಅಸೋಸಿಯೇಟ್ಸ್​ನ ಮಾಲೀಕ ಆನಂದ ಹಬೀಬ ಅವರು ತಾವು ಬೆಂಗೇರಿಯಲ್ಲಿ ಲೇಔಟ್ ನಿರ್ಮಿಸುತ್ತಿರುವುದಾಗಿ ಹೇಳಿ ಫ್ಲಾಟ್​​ ಅನ್ನು 7 ಲಕ್ಷ 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು.

ಈ ಸಂಬಂಧ ದೂರುದಾರರು 4 ಲಕ್ಷ 50 ಸಾವಿರ ರೂಪಾಯಿ ಮುಂಗಡ ಹಣವನ್ನೂ ಕೊಟ್ಟಿದ್ದರು. ವರ್ಷ ಕಳೆದರೂ ಬಿಲ್ಡರ್​ ಲೇಔಟ್ ನಿರ್ಮಾಣ ಮಾಡಿಲ್ಲವಾದ ಕಾರಣ ಅವರ ಸೇವಾ ನೂನ್ಯತೆಯಿಂದ ತನಗೆ ಮೋಸವಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ, ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲಾಟ್​​​ಗಳನ್ನು ಕೊಟ್ಟಿಲ್ಲ. ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಎಂದು ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ಆನಂದ ಹಬೀಬ ಅವರು ದೂರುದಾರರಿಂದ ಪಡೆದ ರೂ 4.5 ಲಕ್ಷ ರೂಗಳನ್ನು, ಜನವರಿ 2019 ರಿಂದ ಶೇ 8 ರಂತೆ ಬಡ್ಡಿ ಹಾಕಿ ಸಂದಾಯ ಮಾಡುವಂತೆ ಆಯೋಗ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ 50ಸಾವಿರ ರೂಗಳನ್ನು ಪರಿಹಾರವಾಗಿ ನೀಡುವಂತೆ ಹೇಳಿದ್ದು ,ಜೊತೆಗೆ 10 ಸಾವಿರ ರೂ ಪ್ರಕರಣದ ಖರ್ಚು-ವೆಚ್ಚವನ್ನು ನೀಡುವಂತೆ ಆಯೋಗ ಆದೇಶಿಸಿದೆ.

ಇದನ್ನೂ ಓದಿ : ಠೇವಣಿ ಹಣ ಹಿಂದಿರುಗಿಸದ ಸಹಕಾರಿ ಸಂಸ್ಥೆಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ಆಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.