ETV Bharat / state

ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: ಹುಬ್ಬಳ್ಳಿ ಹುಡುಗನ ಅತ್ಯುತ್ತಮ ಸಾಧನೆ

author img

By

Published : Aug 9, 2021, 8:24 PM IST

ಹುಬ್ಬಳ್ಳಿಯ ವಿದ್ಯಾರ್ಥಿ ಸೌರವ್​ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

Sourav V Nayak
ಸೌರವ್​ ವಿ ನಾಯಕ್

ಹುಬ್ಬಳ್ಳಿ: ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ನಗರಿಯ ವಿದ್ಯಾರ್ಥಿ ಸೌರವ್​ ವಿ ನಾಯಕ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇಲ್ಲಿನ ಗೋಕುಲ ರಸ್ತೆಯ ವಿವೇಕಾನಂದ ನಗರದಲ್ಲಿನ ಬೆನಕಾ ವಿದ್ಯಾಮಂದಿರದ ಇಂಗ್ಲಿಷ್​ ಮೀಡಿಯಮ್​ ಸ್ಕೂಲ್​​​ನ ವಿದ್ಯಾರ್ಥಿ ಸೌರವ 625 ಕ್ಕೆ 623 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

Student Sourav Result
ವಿದ್ಯಾರ್ಥಿ ಸೌರವ್​ ಫಲಿತಾಂಶ

ಈ ಮೂಲಕ ಹುಬ್ಬಳ್ಳಿಗೆ‌ ಪ್ರಥಮ ಸ್ಥಾನ ಪಡೆದು ಪಾಲಕರಿಗೂ ಹಾಗೂ ಶಾಲೆಗೂ ಗೌರವ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ತಮ್ಮ ಸಾಧನೆ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಸೌರವ್​ ವಿ ನಾಯಕ್​, ನಾನು ನಿತ್ಯ ಬೆಳಗಿನ ಜಾವ ಎದ್ದು ಓದುತ್ತಿದ್ದೆ. ದಿನಕ್ಕೆ ಕನಿಷ್ಠ ಪಕ್ಷ 5 ಗಂಟೆ ಅಧ್ಯಯನ ಮಾಡುತ್ತಿದ್ದೆ. ಹೀಗಾಗಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿದ್ದೇನೆ. ಮುಂದೆ ಡಾಕ್ಟರ್ ಆಗಬೇಕೆಂಬ ಆಸೆ ಇದೆ ಎಂದಿದ್ದಾನೆ.

ಓದಿ: SSLC ಪರೀಕ್ಷೆಯಲ್ಲಿ ಸಾಧನೆ: ನೂರಕ್ಕೆ ನೂರರಷ್ಟು ಅಂಕ ಪಡೆದ ಗಂಗಮ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.