ETV Bharat / state

ಕವಿವಿಯಿಂದ ಮೂವರಿಗೆ ಅರಿವೇ ಗುರು ಪ್ರಶಸ್ತಿ: ರಾಜ್ಯೋತ್ಸವ ದಿನ ಪ್ರದಾನ

author img

By

Published : Oct 29, 2022, 1:51 PM IST

ಕರ್ನಾಟಕ ವಿಶ್ವವಿದ್ಯಾಲಯದಿಂದ ಅರಿವೆ ಗುರು ಪ್ರಶಸ್ತಿ ಪ್ರಕಟಗೊಂಡಿದೆ. ಬಾಗಲಕೋಟೆ ಜಿಲ್ಲೆ ಮರೆಗುದ್ದಿಯ ನಿರುಪಾಧೀಶ ಸ್ವಾಮೀಜಿ, ರಸಾಯನಶಾಸ್ತ್ರಜ್ಞ ಪ್ರೊ ಗೌತಮ್ ಮತ್ತು ಮನೋವೈದ್ಯರಾಗಿರುವ ಡಾ. ಚಂದ್ರಶೇಖರ ಆಯ್ಕೆಯಾಗಿದ್ದಾರೆ.

Etv Bharat
ಕವಿವಿಯಿಂದ ಮೂವರಿಗೆ ಅರಿವೆ ಗುರು ಪ್ರಶಸ್ತಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಿಂದ ಅರಿವೆ ಗುರು ಪ್ರಶಸ್ತಿ ಪ್ರಕಟಗೊಂಡಿದೆ. ರಾಜ್ಯೋತ್ಸವ ಪ್ರಯುಕ್ತ ನೀಡಲಿರುವ ರಾಜ್ಯಮಟ್ಟದ ಪ್ರಶಸ್ತಿ ಇದಾಗಿದ್ದು, ಇದೇ ವರ್ಷದಿಂದ ಆರಂಭಗೊಂಡಿದೆ. ಈ ಕುರಿತು ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಘೋಷಿಸಿದರು.

ಈ ಬಾರಿ ಬಾಗಲಕೋಟೆ ಜಿಲ್ಲೆ ಮರೆಗುದ್ದಿಯ ನಿರುಪಾಧೀಶ ಸ್ವಾಮೀಜಿ, ರಸಾಯನಶಾಸ್ತ್ರಜ್ಞ ಪ್ರೊ ಗೌತಮ್ ಮತ್ತು ಮನೋವೈದ್ಯರಾಗಿರುವ ಡಾ. ಚಂದ್ರಶೇಖರ ಆಯ್ಕೆಯಾಗಿದ್ದಾರೆ. ನವೆಂಬರ್​ 1ರಂದು ಕವಿವಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ‌.‌ ಚಂದ್ರಶೇಖರ ಕಂಬಾರ‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ತಲಾ 25 ಸಾವಿರ ರೂ. ನಗದು ಒಳಗೊಂಡಿರುತ್ತದೆ.

ಇದನ್ನೂ ಓದಿ : ನಟನೆಗೂ ಸೈ ಗಾಯನಕ್ಕೂ ಜೈ ಅಂದಿದ್ದ ಪುನೀತ್: 'ಬಾನ ದಾರಿಯಲ್ಲಿ ಜಾರಿ ಹೋದ' ಅಪ್ಪು ಹಾಡಿದ ಬೆಸ್ಟ್ ಹಾಡುಗಳಿವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.