ETV Bharat / state

ಬೆಳಗಾವಿಗೆ ಪ್ರತಿಭಟಿಸಲು ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರ ಬಸ್​ ಅಪಘಾತ: 7 ಮಂದಿ ಸ್ಥಿತಿ ಗಂಭೀರ

author img

By

Published : Dec 22, 2022, 10:27 AM IST

Updated : Dec 22, 2022, 11:18 AM IST

ವಿವಿಧ ಬೇಡಿಕೆ ಈಡೇರಿಕೆಗೆ ಕೋರಿ ಪ್ರತಿಭಟನೆ ನಡೆಸಲು ಅಧಿವೇಶನ ನಡೆಯುತ್ತಿರುವ ಬೆಳಗಾವಿ ಸುವರ್ಣಸೌಧಕ್ಕೆ ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರ ಬಸ್​ ಅಪಘಾತಕ್ಕೀಡಾಗಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

bus-accident-in-dharawad
ಅಂಗನವಾಡಿ ಕಾರ್ಯಕರ್ತರ ಬಸ್​ ಅಪಘಾತ

ಬೆಳಗಾವಿಗೆ ಪ್ರತಿಭಟಿಸಲು ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರ ಬಸ್​ ಅಪಘಾತ

ಧಾರವಾಡ: ಬೆಳಗಾವಿ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲು ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರಿದ್ದ ಬಸ್​ಗೆ ಲಾರಿ ಡಿಕ್ಕಿಯಾಗಿ 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ತೇಗೂರು ಗ್ರಾಮದ ಬಳಿ ಇಂದು ಬೆಳಗ್ಗೆ ನಡೆದಿದೆ.

ವಿವಿಧ ಬೇಡಿಕೆ ಈಡೇರಿಸಬೇಕೆಂದು ಕೋರಿ ಬಳ್ಳಾರಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಬಸ್ ಮೂಲಕ ಬೆಳಗಾವಿ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸಲು ಹೊರಟಿದ್ದರು. ಈ ವೇಳೆ, ಜಿಲ್ಲೆಯ ತೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್​​​ಗೆ ಲಾರಿ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ 6 ರಿಂದ 7 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಓದಿ: ಮೈಸೂರು ಇತಿಹಾಸದಲ್ಲೇ ಮೊದಲ ಮಹಿಳಾ ಎಸ್​ಪಿ: ಅಧಿಕಾರ ಸ್ವೀಕರಿಸಿದ ಸೀಮಾ ಲತ್ಕರ್

Last Updated : Dec 22, 2022, 11:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.