ETV Bharat / state

ಹುಬ್ಬಳ್ಳಿ: ಇನ್​ಸ್ಟಾಗ್ರಾಂನಲ್ಲಿ ಫೋಟೊಗಳಿಗೆ ಅಶ್ಲೀಲ ಆಡಿಯೋ ಬಳಸಿ ಯುವತಿಗೆ ನಿಂದನೆ

author img

By

Published : Sep 9, 2021, 12:50 PM IST

ಸಾಮಾಜಿಕ ಜಾಲತಾಣ ಇನ್​​​ಸ್ಟಾಗ್ರಾಂ ಮೂಲಕ ಯುವತಿಗೆ ನಿಂದನೆ ಮಾಡಿರುವ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.

abuse-to-young-woman-by-using-audio
ಹುಬ್ಬಳ್ಳಿ: ಇನ್ಸ್​ಟಾಗ್ರಾಂನಲ್ಲಿ ಫೋಟೊಗಳಿಗೆ ಅಶ್ಲೀಲ ಆಡಿಯೋ ಬಳಸಿ ಯುವತಿಗೆ ನಿಂದನೆ

ಹುಬ್ಬಳ್ಳಿ: ಫೋಟೊ ಜೊತೆಗೆ ಅಶ್ಲೀಲ ಆಡಿಯೋ ಬಳಸಿಕೊಂಡು ಇನ್​​ಸ್ಟಾಗ್ರಾಂ ಮೂಲಕ ಯುವತಿಗೆ ನಿಂದನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಯುವತಿಯ ಫೋಟೋಗಳನ್ನು ಅಶ್ಲೀಲ ಆಡಿಯೋ ಜೊತೆಗೆ ಬಳಸಿಕೊಂಡು ವಿಡಿಯೋ ಮಾಡಲಾಗಿದೆ. ಅವುಗಳನ್ನು ಇನ್​​​​ಸ್ಟಾಗ್ರಾಂ ಖಾತೆಯೊಂದರಲ್ಲಿ ಅಪ್ಲೋಡ್​ ಮಾಡುವ ಮೂಲಕ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕಿಡಿಗೇಡಿಯು ನಿರಂತರವಾಗಿ ಈ ಕೃತ್ಯ ಎಸಗುತ್ತ ಬಂದಿದ್ದಾನೆ ಎಂದು ಯುವತಿಯು ಪೊಲೀಸರಿಗೆ ದೂರು ನೀಡಿದ್ದಾಳೆ.

ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: 8 ವರ್ಷದ ಪ್ರೇಮ.. ಮೂರು ಬಾರಿ ಅಬಾರ್ಷನ್, ಹಲ್ಲೆ.. ಪೊಲೀಸ್​ ಮೊರೆ ಹೋದ ಯುವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.