ETV Bharat / state

ಪ್ರತ್ಯೇಕ ಆನ್​​​​ಲೈನ್ ವಂಚನೆ ಪ್ರಕರಣ: 4 ಲಕ್ಷಕ್ಕೂ ಹೆಚ್ಚು ರೂ ಲಪಟಾಯಿಸಿದ ವಂಚಕರು..

author img

By

Published : Nov 15, 2022, 3:37 PM IST

ಅಪರಿಚಿತ ವ್ಯಕ್ತಿಯೊಬ್ಬ ಕ್ರೆಡಿಟ್ ಕಾರ್ಡ್ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳುವಂತೆ ಮೆಸೇಜ್ ಕಳುಹಿಸಿ ನಂತರ ಲಿಂಕ್ ಮೂಲಕ ಒಟಿಪಿ ನೀಡಿ ಹಂತ ಹಂತವಾಗಿ ಆನ್​​​ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ.

A separate online fraud case: Fraudsters have stolen more than 4 lakhs.
ಪ್ರತ್ಯೇಕ ಆನ್ ಲೈನ್ ವಂಚನೆ ಪ್ರಕರಣ: 4 ಲಕ್ಷಕ್ಕೂ ಹೆಚ್ಚು ಹಣ ಲಪಟಾಯಿಸಿದ ವಂಚಕರು..

ಹುಬ್ಬಳ್ಳಿ: ಧಾರವಾಡ ನಾರಾಯಣಪುರದ ಮಹಿಳೆಯೊಬ್ಬರು ಮನೆಯಲ್ಲಿನ ಸೋಫಾ ಸೆಟ್​ಗಳನ್ನು ಒಎಲ್‌ಎಕ್ಸ್‌ನಲ್ಲಿ ಮಾರಲು ಹೋಗಿ ವಂಚಕರಿಂದ 2,22,643 ರೂ.ಕಳೆದುಕೊಂಡಿದ್ದಾರೆ . ಅಪೂರ್ವ ಎಂಬುವರು ಸೋಫಾ ಸೆಟ್‌ಗಳನ್ನು 6 ಸಾವಿರ ರೂ . ಬೆಲೆಯೊಂದಿಗೆ ಒಎಲ್‌ಎಕ್ಸ್​ನಲ್ಲಿ ನ .7 ರಂದು ರಾತ್ರಿ ಪೋಸ್ಟ್ ಹಾಕಿದ್ದರು.

ಅಪರಿಚಿತನೊಬ್ಬ ಖರೀದಿಸುವುದಾಗಿ ನಂಬಿಸಿ, ಮೊಬೈಲ್ ಸಂಖ್ಯೆ ಪಡೆದುಕೊಂಡು ವಾಟ್ಸ್‌ಆ್ಯಪ್‌ಗೆ ಕ್ಯೂಆರ್ ಕೋಡ್ ಕಳುಹಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿ ಹಣ ನಮೂದಿಸಿ ಯುಪಿಐ ಪಿನ್ ಹಾಕಿದರೆ ದುಪ್ಪಟ್ಟು ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂದು ಹೇಳಿ 1,10 ,100 ರೂ . ಹಾಕಿಸಿಕೊಂಡು ಅವುಗಳನ್ನು ಮರಳಿ ಅಪೂರ್ವರ ಖಾತೆಗೆ ಜಮಾ ಮಾಡಿ ನಂಬಿಸಿದ್ದಾನೆ. ನಂತರ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಸಿಇಎನ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್ ಲೈನ್ ಮೂಲಕ 1.90 ಲಕ್ಷ ರೂ ವಂಚನೆ: ಇದೇ ತರಹದ ಮತ್ತೊಂದು ವಂಚನೆ ಪ್ರಕರಣ ಹುಬ್ಬಳ್ಳಿಯಲ್ಲೇ ನಡೆದಿದೆ. ಕ್ರೆಡಿಟ್ ಕಾರ್ಡ್ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳುವಂತೆ ಮೆಸೇಜ್ ಕಳುಹಿಸಿ ಆನ್ ಲೈನ್ ಮೂಲಕ 1.90 ಲಕ್ಷ ರೂ ವಂಚನೆ ಮಾಡಲಾಗಿದೆ. ಹುಬ್ಬಳ್ಳಿ ಕೇಶ್ವಾಪೂರ ನಿವಾಸಿ ಲಕ್ಷ್ಮಣ ವಂಚನೆಗೊಳಗಾದ ವ್ಯಕ್ತಿ.

ಅಪರಿಚಿತ ವ್ಯಕ್ತಿಯೊಬ್ಬ ಕ್ರೆಡಿಟ್ ಕಾರ್ಡ್ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳುವಂತೆ ಮೆಸೇಜ್ ಕಳುಹಿಸಿ ನಂತರ ಲಿಂಕ್ ಮೂಲಕ ಒಟಿಪಿ ನೀಡಿ ಹಂತ ಹಂತವಾಗಿ ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ ಎಂದು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕೊಲೆಮಾಡಿ ತಿಂಗಳವರೆಗೂ ಶ್ರದ್ಧಾಳ ಇನ್​ಸ್ಟಾ ಅಕೌಂಟ್ ಚಾಲನೆಯಲ್ಲಿಟ್ಟಿದ್ದ ಅಫ್ತಾಬ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.