ETV Bharat / state

ಪ್ರೀತಿಸಿ ಮದುವೆಯಾಗಿ ಪತ್ನಿ ವಿರುದ್ಧ ಜೀವ ಬೆದರಿಕೆ ದೂರು ದಾಖಲಿಸಿದ ಹುಬ್ಬಳ್ಳಿ ವೈದ್ಯ

author img

By

Published : Oct 26, 2021, 8:06 AM IST

ಅವರಿಬ್ಬರು ನಗರದ ಖ್ಯಾತ ವೈದ್ಯರು. ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದಾರೆ. ಇದೀಗ ಪತ್ನಿಯಿಂದಲೇ ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಪತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

doctor complaint filed, doctor complaint filed against his wife, doctor complaint filed against his wife in Hubli, Hubli crime news, ದೂರು ದಾಖಲಿಸಿದ ವೈದ್ಯ, ಪತ್ನಿ ವಿರುದ್ಧ ದೂರು ದಾಖಲಿಸಿದ ವೈದ್ಯ, ಹುಬ್ಬಳ್ಳಿಯಲ್ಲಿ ಪತ್ನಿ ವಿರುದ್ಧ ದೂರು ದಾಖಲಿಸಿದ ವೈದ್ಯ, ಹುಬ್ಬಳ್ಳಿ ಅಪರಾಧ ಸುದ್ದಿ,
ಪತ್ನಿ ವಿರುದ್ಧ ಜೀವ ಬೆದರಿಕೆ ದೂರು ದಾಖಲಿಸಿದ ಹುಬ್ಬಳ್ಳಿಯ ಖ್ಯಾತ ವೈದ್ಯ

ಹುಬ್ಬಳ್ಳಿ: ಪತ್ನಿಯಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ನಗರದ ಖ್ಯಾತ ವೈದ್ಯರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹುಬ್ಬಳ್ಳಿಯ ಖ್ಯಾತ ನರರೋಗ ತಜ್ಞ ಕ್ರಾಂತಿಕಿರಣ್ ಅವರು ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಡಾ.ಕ್ರಾಂತಿಕಿರಣ ಹಾಗೂ ಶೋಭಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಶೋಭಾ ಕೂಡಾ ಹುಬ್ಬಳ್ಳಿಯ ಖ್ಯಾತ ವೈದ್ಯೆಯಾಗಿದ್ದು, ಇಬ್ಬರೂ ಹುಬ್ಬಳ್ಳಿಯಲ್ಲಿ ಖಾಸಗಿ ಆಸ್ಪತ್ರೆ ಕಟ್ಟಿದ್ದಾರೆ.

doctor complaint filed, doctor complaint filed against his wife, doctor complaint filed against his wife in Hubli, Hubli crime news, ದೂರು ದಾಖಲಿಸಿದ ವೈದ್ಯ, ಪತ್ನಿ ವಿರುದ್ಧ ದೂರು ದಾಖಲಿಸಿದ ವೈದ್ಯ, ಹುಬ್ಬಳ್ಳಿಯಲ್ಲಿ ಪತ್ನಿ ವಿರುದ್ಧ ದೂರು ದಾಖಲಿಸಿದ ವೈದ್ಯ, ಹುಬ್ಬಳ್ಳಿ ಅಪರಾಧ ಸುದ್ದಿ,
ಎಫ್‌ಐಆರ್ ಪ್ರತಿ

ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು ಕಳೆದ ಮೂರು ವರ್ಷಗಳ ಹಿಂದಿನಿಂದಲೂ ದಂಪತಿ ಬೇರೆ-ಬೇರೆ ನೆಲೆಸಿ ಜೀವನ ನಡೆಸುತ್ತಿದ್ದಾರಂತೆ. ಈ ಹಿಂದೆ ಡಾ.ಕ್ರಾಂತಿಕಿರಣ ಅವರು ಪತ್ನಿ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಭಕ್ಷೀಸ್​ ಪತ್ರ ರದ್ದು ಕೋರಿ ಮತ್ತು ವಿಚ್ಛೇದನ ಕೋರಿ ದಾವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ, ಮೋಸ, ವಂಚನೆ, ವಿಶ್ವಾಸದ್ರೋಹ ಪ್ರಕರಣಗಳನ್ನೂ ಸಹ ದಾಖಲಿಸಿದ್ದಾರೆ.

doctor complaint filed, doctor complaint filed against his wife, doctor complaint filed against his wife in Hubli, Hubli crime news, ದೂರು ದಾಖಲಿಸಿದ ವೈದ್ಯ, ಪತ್ನಿ ವಿರುದ್ಧ ದೂರು ದಾಖಲಿಸಿದ ವೈದ್ಯ, ಹುಬ್ಬಳ್ಳಿಯಲ್ಲಿ ಪತ್ನಿ ವಿರುದ್ಧ ದೂರು ದಾಖಲಿಸಿದ ವೈದ್ಯ, ಹುಬ್ಬಳ್ಳಿ ಅಪರಾಧ ಸುದ್ದಿ,
ಎಫ್‌ಐಆರ್‌ ಪ್ರತಿ

ಈ ಕೇಸ್​ಗಳ ನಡುವೆಯೂ ರವಿವಾರ ಸಂಜೆ 5 ಗಂಟೆಯ ಸುಮಾರಿಗೆ ನನ್ನ ಪತ್ನಿ ಶೋಭಾ ಮನೆಗೆ ಬಂದು ಮಕ್ಕಳ ಎದುರಿಗೆ ಅಶ್ಲೀಲವಾಗಿ ಬೈದು, ಮನೆಯಲ್ಲಿದ್ದ ಕೊಡೆಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಡಾ. ಕ್ರಾಂತಿಕಿರಣ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.