ETV Bharat / state

ಭೂಗತ ಕೇಬಲ್​ ಅಳವಡಿಕೆ: ವಿದ್ಯುತ್​​​ ವ್ಯತ್ಯಯಕ್ಕೆ ಶೇ. 90ರಷ್ಟು ಬಿತ್ತು ಕಡಿವಾಣ

author img

By

Published : Nov 27, 2020, 7:24 PM IST

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು (ಹೆಸ್ಕಾಂ) ಭೂಗತ ಕೇಬಲ್ ಅಳವಡಿಸಿದ ಕಾರಣ ನಗರದಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಶೇ. 90ರಷ್ಟು ಕಡಿವಾಣ ಬಿದ್ದಿದೆ.

HESKAM
ಹೆಸ್ಕಾಂ

ಹುಬ್ಬಳ್ಳಿ: ಮಳೆಗಾಲ ಬಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತದೆ. ವಿದ್ಯುತ್ ಟ್ರಿಪಿಂಗ್, ಲೋಡ್​​​ ಶೆಡ್ಡಿಂಗ್ ಸಾಮಾನ್ಯವಾಗಿರುತ್ತದೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾತ್ರ ಇದಕ್ಕೆ ಅವಕಾಶವಿಲ್ಲ!

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು (ಹೆಸ್ಕಾಂ) ಭೂಗತ ಕೇಬಲ್ ಅಳವಡಿಸಿದ ಕಾರಣ ವಿದ್ಯುತ್ ವ್ಯತ್ಯಯಕ್ಕೆ ಶೇ. 90ರಷ್ಟು ಕಡಿವಾಣ ಬಿದ್ದಿದೆ. ಹೆಸ್ಕಾಂ ನಗರ ವ್ಯಾಪ್ತಿಯಲ್ಲಿ ಉಪ-ವಿಭಾಗಗಳನ್ನು ವಿಂಗಡಿಸಿ, 12 ಮಂದಿ ಒಳಗೊಂಡಿರುವ ಗುತ್ತಿಗೆದಾರರ ಗುಂಪು ಕಾರ್ಯನಿರ್ವಹಿಸುತ್ತವೆ. ಯಾವುದೇ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಎದುರಾದರೂ ಹೆಸ್ಕಾಂ ಸಿಬ್ಬಂದಿಯೊಂದಿಗೆ ಈ ಗುಂಪು ಕೆಲಸ ಮಾಡುತ್ತದೆ.

ಎಕ್ಸಿಕ್ಯೂಟಿವ್​​​ ಇಂಜಿನಿಯರ್ ಕೃಷ್ಣಪ್ಪ

ಮಳೆಗಾಲದದಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೆಚ್ಚು ಹಾನಿ ಉಂಟಾಗುತ್ತವೆ. ಅದಕ್ಕಾಗಿ ಹೆಚ್ಚುವರಿಯಾಗಿ ಪ್ರತಿ ಉಪ ವಿಭಾಗಕ್ಕೆ ತಲಾ 15 ಮಂದಿಯನ್ನೊಳಗೊಂಡ ಮಾನ್ಸೂನ್ ಗುಂಪನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ.‌ ಜೊತೆಗೆ ವಾಹನಗಳನ್ನೂ ಒದಗಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.