ETV Bharat / state

ಮಳೆ ಅವಾಂತರ: ಕುಸಿದುಬಿದ್ದ ಸರ್ಕಾರಿ‌‌ ಶಾಲೆ, ಯುಪಿಎಸ್‌ ಕದ್ದೊಯ್ದ ಖದೀಮರು

author img

By

Published : Jan 9, 2021, 4:22 PM IST

ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಸರ್ಕಾರಿ ಶಾಲಾ ಕಟ್ಟಡ ಕುಸಿದು ಬಿದ್ದಿದೆ. ಇದನ್ನು ಗಮನಿಸಿದ ಯಾರೋ ಖದೀಮರು ಶಾಲೆಯ ಯುಪಿಎಸ್​ ಕದ್ದೊಯ್ದಿದ್ದಾರೆ.

ups stealed in davangere school
ಶಾಲೆಯ ಯುಪಿಎಸ್​ ಕಳುವು

ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಮಳೆಗೆ ಶಾಲಾ ಕಟ್ಟಡ ಕುಸಿದು ಬಿದ್ದಿದ್ದರಿಂದ ಯಾರೋ ಖದೀಮರು ಶಾಲೆಯ UPS ಹೊತ್ತೊಯ್ದಿದ್ದಾರೆ.

ಶಾಲೆಯ ಯುಪಿಎಸ್​ ಕಳುವು

ನಿನ್ನೆ ಸುರಿದ ಮಳೆಯ ಹೊಡೆತಕ್ಕೆ ದಾವಣಗೆರೆ ತಾಲೂಕಿನ ಹೂವಿನ ಮಡು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಕೆಲ ಕೊಠಡಿಗಳು ನೆಲಕಚ್ಚಿವೆ. ಮಳೆಯಿಂದ ಶಾಲೆ‌ಯ ಒಂದು ಭಾಗ ಜಖಂ ಆಗಿದೆ. ಅದೃಷ್ಟವಶಾತ್ ಶಾಲೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ತಡರಾತ್ರಿ ಸುರಿದ ಮಳೆಗೆ ಶಾಲೆಯ ಕಂಪ್ಯೂಟರ್ ಕೊಠಡಿ ಸಂಪೂರ್ಣವಾಗಿ ಕುಸಿದಿದೆ. ಶಾಲಾ ಕೊಠಡಿ ಬಿದ್ದಿದ್ದರಿಂದ ಮೂರಕ್ಕೂ ಹೆಚ್ಚು ಕಂಪ್ಯೂಟರ್​ಗಳಿಗೆ ಹಾನಿಯಾಗಿವೆ.

ಇನ್ನು ಯಾರೋ ಖದೀಮರು ಶಾಲೆಯ UPS ಹೊತ್ತೊಯ್ದಿದ್ದಾರೆ. ಭಾರಿ ಮಳೆಗೆ ನಾಲ್ಕೈದು ಕೊಠಡಿಗಳ ಮೇಲ್ಛಾವಣಿ ಹಾರಿ ಹೋಗಿ ನೀರು ಒಳ ನುಗ್ಗಿದೆ. ಸ್ಥಳಕ್ಕೆ ಬಾರದ ಶಿಕ್ಷಣ ಇಲಾಖೆ ಅಧಿಕಾರಿಗಳ ವರ್ತನೆ ಇದೀಗ ಗ್ರಾಮಸ್ಥರ ಆಕ್ರೋಶಕ್ಕೆ‌ ಕಾರಣವಾಗಿದೆ.

ಇದನ್ನೂ ಓದಿ:ಪಾಟಿ ಸವಾಲಿಗೆ ಅವಕಾಶ ನೀಡದೆ ಆರೋಪಿಯನ್ನ ಶಿಕ್ಷಿಸುವಂತಿಲ್ಲ : ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.