ETV Bharat / state

ಅಡಕೆ ತೋಟದಲ್ಲಿ ನಿಂತ ನೀರು, ಮೊಳಕೆ ಒಡೆಯುತ್ತಿರುವ ಮೆಕ್ಕೆಜೋಳ: ಕಮರಿದ ರೈತನ ಕನಸು

author img

By

Published : Oct 25, 2022, 8:04 AM IST

ಈ ಬಾರಿ ನಿರಂತರವಾಗಿ ಬಿದ್ದ ಮಳೆಯಿಂದ ರೈತ ಅಕ್ಷರಶಃ ನಲುಗಿ ಹೋಗಿದ್ದಾ‌ನೆ. ಮಳೆ ಹೆಚ್ಚಾಗಿರುವುದರಿಂದ ನೂರಕ್ಕೂ ಹೆಚ್ಚು ಎಕರೆ ಜಮೀನು ನೀರಿನಲ್ಲಿದ್ದು, ಅಡಕೆ ತೋಟ ನೆಲಕಚ್ಚಿದೆ. ಇತ್ತ ಮೆಕ್ಕೆಜೋಳ ಮೊಳಕೆ ಒಡೆಯುತ್ತಿದೆ. ಹೀಗೆ ತುಂಬಾ ದಿನಗಳಿಂದ ಜಮೀನಿನಲ್ಲಿ ನೀರು ನಿಂತಿದ್ದರಿಂದ ರೈತ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾನೆ.

ಅಡಿಕೆ ತೋಟದಲ್ಲಿ ನಿಂತ ನೀರು, ಮೊಳಕೆ ಒಡೆಯುತ್ತಿರುವ ಮೆಕ್ಕೆಜೋಳ
ಅಡಿಕೆ ತೋಟದಲ್ಲಿ ನಿಂತ ನೀರು, ಮೊಳಕೆ ಒಡೆಯುತ್ತಿರುವ ಮೆಕ್ಕೆಜೋಳ

ದಾವಣಗೆರೆ: ದಾವಣಗೆರೆ ತಾಲೂಕಿನ ಹೊನ್ನೂರು ಕೆರೆ ನೂರು ಎಕರೆ ಜಮೀನನ್ನು ನುಂಗಿದೆ. ಈ ಕೆರೆಯ ವ್ಯಾಪ್ತಿಯಲ್ಲಿ ಮಲ್ಲಶೆಟ್ಟಿಹಳ್ಳಿ, ನರಸಿಂಹಪುರ ಹಾಗೂ ಹೊನ್ನೂರು ಸೇರಿ ಆರು ಗ್ರಾಮಗಳ ವ್ಯಾಪ್ತಿಯ ಜಮೀನು ಇದೆ. ಇಲ್ಲಿ ಬರೋಬ್ಬರಿ 16 ತಿಂಗಳಿನಿಂದ ನೀರು ನಿಂತಿದೆ. ಇದಕ್ಕೆ ಕಾರಣ ಹೊನ್ನೂರು ಕೆರೆಯ ತೂಬು ಎತ್ತರಿಸಿರುವುದು. ತೂಬು ಎತ್ತರಿಸಿದ ಪರಿಣಾಮ ಮುಂದೆ ನೀರು ಹರಿದು ಹೋಗುತ್ತಿಲ್ಲ.

ಅಡಕೆ ತೋಟದಲ್ಲಿ ನಿಂತ ನೀರು, ಮೊಳಕೆ ಒಡೆಯುತ್ತಿರುವ ಮೆಕ್ಕೆಜೋಳ

ನೂರಕ್ಕು ಹೆಚ್ಚು ಎಕರೆ ಪ್ರದೇಶದಲ್ಲಿ ನೀರು ನಿಂತಿದೆ. ತಕ್ಷಣ ಅಧಿಕಾರಿಗಳು ಈ ಭಾಗದಲ್ಲಿ ಪ್ರವಾಸ ಮಾಡುವ ಮೂಲಕ ರೈತರ ಕಣ್ಣೀರು ಒರೆಸುವ ಕೆಲಸ ಮಾಡ್ಬೇಕಾಗಿದೆ ಎಂದು ರೈತ ದಳಪತಿ ರೇವಣ್ಣಸಿದ್ದಪ್ಪ ಮನವಿ ಮಾಡಿದ್ದಾರೆ.

ಕೆರೆಯ ಎರಿ ಕಡಿಮೆ ಮಾಡಿ, ಹೊನ್ನೂರು ಕೆರೆಯ ಟೂಬ್ ಗಳನ್ನ ಓಪನ್ ಮಾಡಿದ್ರು ಸಾಕು. ಬೇಕಾದಷ್ಟು ನೀರು ಹರಿದುಕೊಂಡು ಹೊರಹೋಗುತ್ತದೆ. ತಕ್ಷಣ ಟೂಬ್​ನನ್ನು ಇಳಿಕೆ ಮಾಡಿ ನೀರು ಹೋಗುವಂತೆ ಮಾಡ್ಬೇಕು ಎಂಬುದು ರೈತರ ಒತ್ತಾಯವಾಗಿದೆ.

ಇದನ್ನೂ ಓದಿ: ಬೆಣ್ಣೆ ನಗರಿಯಲ್ಲಿ ಮುಂದುವರೆದ ಮಳೆ ಅವಾಂತರ.. ಅಡಕೆ ತೋಟಗಳು ಜಲಾವೃತ, ಹೈರಾಣಾದ ರೈತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.