ETV Bharat / state

ದಾವಣಗೆರೆ: ಅಪ್ರಾಪ್ತನಿಗೆ ಇಬ್ಬರು ಯುವಕರಿಂದ ಲೈಂಗಿಕ ಕಿರುಕುಳ

author img

By

Published : Feb 14, 2022, 11:05 AM IST

Updated : Feb 14, 2022, 11:23 AM IST

ಅಪ್ರಾಪ್ತ ಬಾಲಕನಿಗೆ ಯುವಕರು ಲೈಂಗಿಕ ಕಿರುಕುಳ ನೀಡಿರುವ ಘಟನೆ ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದಲ್ಲಿ ನಡೆದಿದೆ.

sexual harrasment to 11 yr boy by the youths
ಬಾಲಕನ ಮೇಲೆ‌ ಇಬ್ಬರು ಯುವಕರಿಂದ ಲೈಂಗಿಕ ಕಿರುಕುಳ

ದಾವಣಗೆರೆ: ಅಪ್ರಾಪ್ತ ಬಾಲಕನಿಗೆ ಇಬ್ಬರು ಕಾಮುಕರು ಲೈಂಗಿಕ ಕಿರುಕುಳ ನೀಡಿ, ಆ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ನಡೆದಿದೆ.

ಆರನೇ ತರಗತಿಯಲ್ಲಿ ಓದುತ್ತಿರುವ ಬಾಲಕನ ಮೇಲೆ‌ ಯುವಕರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಕೇಳಿಬಂದಿದೆ. 11 ವರ್ಷದ ಬಾಲಕನನ್ನು ಜಮೀನಿಗೆ ‌ಕರೆದೊಯ್ದಿರುವ ಆರೋಪಿಗಳು ದೌರ್ಜನ್ಯ ನೀಡಿದ್ದಾರೆ.

ಘಟನೆಯ ಸಂಬಂಧ ವಿಡಿಯೋ ಪೋಷಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕುರಿತು ನ್ಯಾಮತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಇಬ್ಬರು ಆರೋಪಿಗಳನ್ನು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Last Updated : Feb 14, 2022, 11:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.