ETV Bharat / state

ಹಿಂದೂ ಶಬ್ಧ ಅಶ್ಲೀಲ ಎಂಬ ಹೇಳಿಕೆ ಧರ್ಮಕ್ಕೆ ಮಾಡಿದ ಅವಮಾನ: ಶಾಸಕ ರೇಣುಕಾಚಾರ್ಯ ಗರಂ

ಹಿಂದೂ ಪದ ಅಶ್ಲೀಲ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಈ ಬಗ್ಗೆ ಅವರು ಕ್ಷಮೆ ಕೇಳಬೇಕು. ಈ ತಕ್ಷಣ ಕಾಂಗ್ರೆಸ್ ಪಕ್ಷದವರು ಅವರನ್ನು ಉಚ್ಛಾಟನೆ ಮಾಡಬೇಕೆಂದು ಶಾಸಕ ಎಂಪಿ ರೇಣುಕಾಚಾರ್ಯ ಗರಂ ಒತ್ತಾಯಿಸಿದ್ದಾರೆ.

MP Renukacharya Honnali MLA
ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿ ಶಾಸಕರುEtv Bharat
author img

By

Published : Nov 8, 2022, 6:00 PM IST

Updated : Nov 8, 2022, 9:30 PM IST

ದಾವಣಗೆರೆ: ಹಿಂದೂ ಶಬ್ಧ ಅಶ್ಲೀಲ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದು ಕ್ಷಮೆ ಕೇಳಬೇಕು. ಈ ತಕ್ಷಣ ಕಾಂಗ್ರೆಸ್ ಪಕ್ಷದವರು ಅವರನ್ನು ಉಚ್ಛಾಟನೆ ಮಾಡಬೇಕೆಂದು ಶಾಸಕ ಎಂ ಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹೇಳಿಕೆಗೆ ಸಮಸ್ತ ಹಿಂದೂ ಧರ್ಮದವರ ಮುಂದೆ ಕ್ಷಮೆ ಕೇಳಬೇಕು, ಅವರು ಯಾವಾಗಲೂ ಹಿಂದು ಹಿಂದೂತ್ವದ ವಿರುದ್ಧ ಪದೇ ಪದೆ ವಿರೋಧಿ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ. ಹಿಂದುಗಳು ನಮ್ಗೆ ವೋಟ್ ಹಾಕ್ಬೇಡಿ ಅಂತ ಬೇಕಾದ್ರೆ ನೇರವಾಗಿ ಹೇಳಲಿ ನೋಡೋಣ ಎಂದು ಸತೀಶ್ ಜಾರಕಿಹೊಳಿಗೆ ಸವಾಲು ಹಾಕಿದರು.

ಶಾಸಕ ರೇಣುಕಾಚಾರ್ಯ

ಬಿಜೆಪಿಯಂತೂ ಮುಸ್ಲಿಂ ವಿರೋಧಿ ಅಲ್ಲ.. ಡಬಲ್ ಸ್ಟ್ಯಾಂಡ್ ಅನ್ನು ಕಾಂಗ್ರೆಸ್ ವಹಿಸುತ್ತಿದ್ದು, ಯಾವುದೋ ಒಂದು ಧರ್ಮದ ಓಲೈಕೆ ರಾಜಕಾರಣ ಮಾಡುತ್ತಿದೆ. ಬಿಜೆಪಿಯಂತೂ ಮುಸ್ಲಿಂ ವಿರೋಧಿ ಖಂಡಿತ ಅಲ್ಲ, ಎಲ್ಲರೂ ಸಹ ಬಾಳ್ವೆಯಿಂದ ಬದುಕುತ್ತಿದ್ದೇವೆ,‌ ಕಾಂಗ್ರೆಸ್ ನವರ ಸ್ಟೇಟ್​ಮೆಂಟ್ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದೆ. ‌ಸಂಸದ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡುತ್ತಿರುವುದು ಇದಕ್ಕೇನಾ? ಈಗ ಗೊತ್ತಾಗ್ತಿದೆ. ಅದು ಭಾರತ ಜೋಡೋ ಯಾತ್ರೆಯಲ್ಲ.. ಭಾರತ ತೋಡೊ ಯಾತ್ರೆಯಂತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಏನು ಮಾತಾಡುತ್ತಾರೆ ಎಂದು ಪ್ರಶ್ನಿಸಿದರು.

ತೀರ್ಥಪ್ರಸಾದ ಸೇವಿಸುವುದು ಪವಿತ್ರ.. ಕಾಂಗ್ರೆಸ್ ನ ಮಾಜಿ ಸಚಿವೆ ಬಿ ಟಿ ಲಲಿತಾ ನಾಯ್ಕ್ ದೇವಸ್ಥಾನದಲ್ಲಿ ತೀರ್ಥ ಪ್ರಸಾದ ಸೇವಿಸಬಾರದು ಎಂದು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತೀರ್ಥ ಪ್ರಸಾದ ಅನ್ನೋದು ಹಿಂದೂ ಸಂಸ್ಕೃತಿಯಲ್ಲಿ ಪವಿತ್ರ. ಇದನ್ನು ಕಣ್ಣಿಗೆ ಒತ್ತಿಕೊಂಡು ಪೂಜ್ಯ ಭಾವನೆಯಿಂದ ಸ್ವೀಕರಿಸುತ್ತೇವೆ. ಇಂಥ ಹೇಳಿಕೆಗಳು ಬಹುಸಂಖ್ಯಾತ ಹಿಂದೂಗಳಿಗೆ ಧಕ್ಕೆ ತರುವಂತಿವೆ. ಈ ರೀತಿಯ ಹೇಳಿಕೆ ಯಾರೂ ನೀಡಬಾರದು ಎಂದರು.

ಸಚಿವ ಆಕಾಂಕ್ಷಿ ಅಲ್ಲ.. ನನಗೆ ನನ್ನ ಕ್ಷೇತ್ರವೇ ಮುಖ್ಯ, ನ್ಯಾಮತಿ ಹೊನ್ನಾಳಿ ಅವಳಿ ತಾಲೂಕಿನ ಅಭಿವೃದ್ಧಿಗೆ ಬದ್ಧನಾಗಿದ್ದೇನೆ, ನಾಳೆ ಮುಖ್ಯಮಂತ್ರಿಗಳು ಹೊನ್ನಾಳಿಗೆ ಬರಲಿದ್ದಾರೆ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವರು ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ, ನಾಡಿದ್ದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಹ ನಿವಾಸಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.‌ ಅದ್ರೇ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸರ್ಕಾರಕ್ಕೆ ಸಂದೇಶ ರವಾನಿಸಿದರು.

ರಿಪೋರ್ಟ್ ಕಾಯುತ್ತಿದ್ದೇವೆ.. ಇನ್ನು, ಸಹೋದರನ ಮಗ ಚಂದ್ರಶೇಖರ್ ಮರಣೋತ್ತರ ಪರೀಕ್ಷೆ ಇನ್ನೂ ಬಂದಿಲ್ಲ. ಆ ರಿಪೋರ್ಟ್ ಗಾಗಿ ನಾವು ಕಾಯುತ್ತಿದ್ದೇವೆ.

Last Updated : Nov 8, 2022, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.